ಕೊರೋನಾ ಹರಡುವಿಕೆಯಿಂದ ಅಲ್ಲೋಲಕಲ್ಲೋಲವಾಗಿದೆ ಹಲವರ ಬದುಕು. ನಿರುದ್ಯೋಗಿಗಳು ಉದ್ಯೋಗದ ಆಶಾಭಾವ ಕಳೆದುಕೊಳ್ಳುತ್ತಿದ್ದರೆ, ಬಹಳಷ್ಟು ಉದ್ಯೋಗಿಗಳು ನಿರುದ್ಯೋಗಿಗಳಾಗುವ ಭೀತಿಯಲ್ಲಿದ್ದಾರೆ. ನಂತರದಲ್ಲಿ ಎಲ್ಲವೂ ಮುಂಚಿನಂತಿರುವುದಿಲ್ಲ. ಹಲವರು ಹಳೆಯದನ್ನೇ ನೆಚ್ಚಿಕೊಳ್ಳದೆ ಹೊಸ ಕ್ಷೇತ್ರಗಳಲ್ಲಿ ಉದ್ಯೋಗ ಕಂಡುಕೊಳ್ಳಬೇಕಾಗುತ್ತದೆ. ಹಾಗೆ ಕಂಡುಕೊಳ್ಳಲು ಹೊಸ ಹೊಸ ಕೌಶಲ್ಯಗಳನ್ನು ಕಲಿಯುವುದು ಅಗತ್ಯ. ಹೀಗೆ ಕೆಲವೊಂದು ಕೌಶಲ್ಯಗಳನ್ನು ಕಲಿತಾಗ ಮಾತ್ರ ಉದ್ಯೋಗ ಹೋಯಿತೆಂದು ಹೆದರುತ್ತಾ ಕೂರುವ ಅಗತ್ಯವಿಲ್ಲ. ಯಾವೆಲ್ಲ ಕೌಶಲ್ಯಗಳಿಗೆ ಬೇಡಿಕೆ ಹೆಚ್ಚಲಿದೆ ಎಂಬುದನ್ನು ತಜ್ಞರು ತಿಳಿಸಿದ್ದಾರೆ. ಅವುಗಳ ಬಗ್ಗೆ ಇಲ್ಲಿದೆ. 

ಯಶಸ್ವೀ ವ್ಯಕ್ತಿಗಳ ಗೆಲುವಿನ ಮೆಟ್ಟಿಲಾಗುವ ಸಾಮಾನ್ಯ ಅಭ್ಯಾಸಗಳು

ಡೇಟಾ ಸೈನ್ಸ್
ಪ್ಯಾಂಡೆಮಿಕ್‌ನಿಂದ ಹೊರ ಬಂದ ಮೇಲೆ ಜಗತ್ತು ಮತ್ತಷ್ಟು ಮಾಹಿತಿಯ ಹಿಂದೋಡುತ್ತದೆ. ಬಹುತೇಕ ಎಲ್ಲ ಉದ್ಯಮಗಳೂ ನೇರ ಸಂಪರ್ಕವಿಲ್ಲದೆ ಗ್ರಾಹಕರಿಗೆ ಉತ್ಪನ್ನಗಳನ್ನು ಮುಟ್ಟಿಸುವುದು ಹೇಗೆಂಬ ಬಗ್ಗೆ ಮರುಕಲ್ಪನೆ ಮಾಡಬೇಕಾಗುತ್ತದೆ.  ಇದಕ್ಕಾಗಿ ಡೇಟಾ ಬಳಕೆ ಹೆಚ್ಚುತ್ತದೆ. ಎಲ್ಲರೂ ವರ್ಕ್ ಫ್ರಂ ಹೋಂ ನೆಚ್ಚಿರುವಾಗ ಆನ್‌ಲೈನ್ ಮಾರಾಟ ಹಾಗೂ ಶಾಪಿಂಗ್, ಕಂಟೆಂಟ್ ಬಳಕೆ ಹೆಚ್ಚುತ್ತದೆ. ಹಾಗಾಗಿ, ಗ್ರಾಹಕರ ವರ್ತನೆ ಹಾಗೂ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವ ಕೌಶಲ್ಯ ಹೊಂದಿದವರಿಗೆ ಉದ್ಯೋಗದಲ್ಲಿ ಡಿಮ್ಯಾಂಡ್ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು. 

ಡೇಟಾ ಸೈನ್ಸ್‌ನಲ್ಲಿ ಎಸ್‌ಕ್ಯೂಎಲ್‌ಗೆ ಉಳಿದೆಲ್ಲಕ್ಕಿಂತ ಹೆಚ್ಚು ಬೇಡಿಕೆ ಇದೆ. ಲಿಂಕ್ಡ್ ಇನ್ ಪ್ರಕಾರ, ಬಹುತೇಕ ಜಾಬ್ ಪೋಸ್ಟಿಂಗ್‌ಗಳಲ್ಲಿ ಡೈಟಾ ಸೈನ್ಸ್ ಕೌಶಲ್ಯವನ್ನು ಬೇಡಲಾಗುತ್ತದೆಯಂತೆ. ಡೇಟಾ ಸೈನ್ಸ್‌ನ ಕೆಲ ಜನಪ್ರಿಯ ಕೋರ್ಸ್‌ಗಳೆಂದರೆ ಡೇಟಾ ಅನಲಿಟಿಕ್ಸ್ ಫಾರ್ ಪ್ರೈಸಿಂಗ್ ಅನಲಿಸ್ಟ್ಸ್ ಇನ್ ಎಕ್ಸೆಲ್, ಡೇಟಾ ಸೈನ್ಸ್ ಟೂಲ್ಸ್ ಆಫ್ ದ ಟ್ರೇಡ್, ಡೇಟಾ ಎಂಜಿನಿಯರಿಂಗ್. 

ಕಮ್ಯೂನಿಕೇಶನ್
ಹೆಚ್ಚಿನ ತಜ್ಞರ ಪ್ರಕಾರ, ಪ್ಯಾಂಡೆಮಿಕ್ ಬಳಿಕದ ಉದ್ಯೋಗಗಳಿಗೆ ಹಾರ್ಡ್ ಹಾಗೂ ಸಾಫ್ಟ್ ಟೆಕ್ನಿಕಲ್ ಸ್ಕಿಲ್ಸ್ ಅಗತ್ಯ ಹೆಚ್ಚಿರುತ್ತದೆ. ಈಗ ಮುಂಚಿನಂತೆ ಎದುರು ಬದಿರು ಕೂರದೆ ಆನ್‌ಲೈನ್‌ನಲ್ಲಿಯೇ ಬಹುತೇಕ ಮೀಟಿಂಗ್‌ಗಳು ಆಗುವುದರಿಂದ , ಅವುಗಳಿಗೆ ಅತ್ಯುತ್ತಮ ಕಮ್ಯೂನಿಕೇಶನ್ಸ್ ಸ್ಕಿಲ್ಸ್ ಅಗತ್ಯವಿರುತ್ತದೆ. ಬಹಳ ಗಮನವಿಟ್ಟು ಆಲಿಸುವುದು, ಪ್ರಾಬ್ಲಂ ಸಾಲ್ವಿಂಗ್, ಕ್ರಿಟಿಕಲ್ ಥಿಂಕಿಂಗ್ ಹಾಗೂ ರಿಲೇಶನ್‌ಶಿಪ್ ಬಿಲ್ಡಿಂಗ್- ಕಮ್ಯೂನಿಕೇಶನ್‌ಗೆ ಅತ್ಯಗತ್ಯ ಕೌಶಲ್ಯಗಳು. ವಿಡಿಯೋ ಕಾನ್ಫರೆನ್ಸ್, ಫೋನ್ ಹಾಗೂ ಬರಹದ ರೂಪದಲ್ಲೇ ಬಹುತೇಕ ಮಾತುಕತೆಗಳು ನಡೆಯುತ್ತವೆ. ಹಾಗಾಗಿ, ಇವುಗಳಲ್ಲಿ ಕೌಶಲ್ಯಗಳನ್ನು ಫೈನ್‌ಟ್ಯೂನ್ ಮಾಡಿಕೊಳ್ಳುವುದು ಮುಖ್ಯ. ಎಮೋಶನಲ್ ಇಂಟೆಲಿಜನ್ಸ್ ಹಾಗೂ ಸೋಷ್ಯಲ್ ಇಂಟೆಲಿಜೆನ್ಸ್ ಕೂಡಾ ಬಹುಮುಖ್ಯವಾಗುತ್ತವೆ. 

ಸೃಜನಶೀಲತೆ
ಕ್ರಿಯೇಟಿವಿಟಿ ಹಾಗೂ ಹೊಸದಕ್ಕೆ ಬೇಗ ಹೊಂದಿಕೊಳ್ಳುವ ಸಾಫ್ಟ್ ಸ್ಕಿಲ್‌ಗಳು ಕೂಡಾ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತವೆ. ಸೃಜನಶೀಲತೆಗೆ ಯಾವತ್ತಿಂದಲೂ ಬೆಲೆ ಇದ್ದೇ ಇದೆ. ಆದರೆ ಇದೀಗ ಅದರ ಬೆಲೆ ಹಿಂದೆಂದಿಗಿಂತಲೂ ಹೆಚ್ಚಿದೆ. ಇನ್ನು ಬದಲಾದ ಸನ್ನಿವೇಶಕ್ಕೆ ಸರಿಯಾಗಿ ವರ್ಕ್ ಫ್ರಂ ಹೋಂ, ವರ್ಚುಯಲ್ ಮೀಟಿಂಗ್ಸ್. ವರ್ಕ್- ಹೋಂ ಜೀವನವನ್ನು ಬ್ಯಾಲೆನ್ಸ್ ಮಾಡುವುದು, ಕುಟುಂಬಕ್ಕೆ ಸಮಯ ಕೊಡುತ್ತಲೇ ಉದ್ಯೋಗ ಹಾಗೂ ಕುಟುಂಬವನ್ನು ಪ್ರತ್ಯೇಕವಾಗಿಟ್ಟು ನೋಡುವುದು- ಇಂಥ ಹೊಂದಿಕೊಳ್ಳುವ ಗುಣ ಇದ್ದಷ್ಟೂ ಸುಲಭವಾಗಿ ಉದ್ಯೋಗದಲ್ಲಿ ಯಶಸ್ವಿಯಾಗಬಹುದು. ಇವುಗಳನ್ನು ಹೆಚ್ಚಿಸಿಕೊಳ್ಳಲು ಕ್ರಿಯೇಟಿವಿಟಿ ಬೂಟ್ ಕ್ಯಾಂಪ್, ದಿ ಫೈವ್ ಸ್ಟೆಪ್ ಕ್ರಿಯೇಟಿವ್ ಪ್ರೋಸೆಸ್ ಆ್ಯಂಡ್ ಕ್ರಿಯೇಟಿವಿಟಿ ಮುಂತಾದ ಕೋರ್ಸ್ ಮಾಡಬಹುದು. 

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
ಆಟೋಮೇಶನ್, ಮೆಶಿನ್ ಲರ್ನಿಂಗ್‌ಗಳಿಗೆ ಈಗ ಹಿಂದೆಂದಿಗಿಂತಲೂ ಬೇಡಿಕೆ ಹೆಚ್ಚಿದೆ. ಅದರಲ್ಲೂ ಸೃಜನಾತ್ಮಕ ಯೋಚನೆಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸುವವರು, ಸಂಕೀರ್ಣ ವ್ಯವಸ್ಥೆಗಳನ್ನು ಟೀಂ ಆಗಿ ಹ್ಯಾಂಡಲ್ ಮಾಡಬಲ್ಲಂಥ ತಜ್ಞರಿಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಉದ್ಯೋಗ ಹುಡುಕುವವರಿಗೆ ಪೈಥಾನ್ ಕೋಡಿಂಗ್ ಲಾಂಗ್ವೇಜನ್ನು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ. 

ಮನೆಮಂದಿಯೊಟ್ಟಿಗೆ ಕುಳಿತು ಊಟ ಮಾಡಿದ್ರೆ ಟೆನ್ಷನ್ ಮಾಯ!

ಸೈಬರ್ ಸೆಕ್ಯೂರಿಟಿ
ಬಹಳಷ್ಟು ಜನ ಎಲ್ಲೆಲ್ಲಿಂದಲೋ ಕುಳಿತು ಕೆಲಸ ಮಾಡುವ, ಮನೆಯಿಂದಲೇ ವರ್ಕ್ ಮಾಡುವ ಟ್ರೆಂಡ್ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸೈಬರ್ ದಾಳಿಯ ಭೀತಿಯೂ ಹೆಚ್ಚುತ್ತಿದೆ. ಸಹಜವಾಗಿಯೇ ಸೈಬರ್ ಸೆಕ್ಯೂರಿಟಿಗೆ ಬೇಡಿಕೆ ಹೆಚ್ಚುತ್ತಿದೆ. 2019ರ ವರದಿಯಂತೆ ಸುಮಾರರು 2.8 ದಶಲಕ್ಷ ವೃತ್ತಿಪರ ಸೈಬರ್ ಸೆಕ್ಯೂರಿಟಿ ತಜ್ಞರು ಜಗತ್ತಿನಾದ್ಯಂತ ಕೆಲಸ ಮಾಡುತ್ತಿದ್ದಾರೆ. ಆದರೆ, ಸೈಬರ್ ದಾಳಿ ಭೀತಿಯಿಂದ ಮುಕ್ತರಾಗಲು ಇನ್ನೂ ಹೆಚ್ಚುವರಿ 4 ದಶಲಕ್ಷ ಮಂದಿ ಈ ಫೀಲ್ಡ್‌ನಲ್ಲಿ ಅಗತ್ಯವಿದ್ದಾರೆ.