ಬೆಂಗಳೂರು, (ಸೆ.07):  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಇದೇ ಸೆಪ್ಟೆಂಬರ್ 15ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಅಂಚೆ ಇಲಾಖೆಯಲ್ಲಿ ನೇಮಕಾತಿ: ವಿದ್ಯಾರ್ಹತೆ 10ನೇ ತರಗತಿ

ಹೊರಗುತ್ತಿಗೆ ಆಧಾರದ ಮೇಲೆ ಒಟ್ಟು ನಾಲ್ಕು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಿದೆ. 

ಹುದ್ದೆಗಳ ವಿವರ
ಸಾಫ್ಟ್‌ವೇರ್ ಡವಲಪರ್, ಮೊಬೈಲ್ ಅಪ್ಲಿಕೇಶನ್ ಡವಲಪರ್, ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ (ಸೋಶಿಯಲ್ ಮೀಡಿಯಾ), ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ (ಪ್ರೊಡಕ್ಷನ್) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

1. ಸಾಫ್ಟ್‌ವೇರ್ ಡವಲಪರ್ ಹುದ್ದೆಗೆ ಬಿಇ/ ಬಿ.ಟೆಕ್/ಎಂ.ಇ. ವ್ಯಾಸಂಗ ಮಾಡಿದವರು ಅರ್ಜಿ ಸಲ್ಲಿಸಬಹುದು. 
* ಮಾಸಿಕ ವೇತನ 50 ಸಾವಿರ ರೂ.

2. ಮೊಬೈಲ್ ಅಪ್ಲಿಕೇಶನ್ ಡವಲಪರ್ ಹುದ್ದೆಗೆ ಎಂಟೆಕ್/ ಎಂಸಿಎ/ ಎಂಎಸ್‌ಸಿ ಆದವರು ಅರ್ಜಿ ಹಾಕಬಹುದು. 
* ಮಾಸಿಕ ವೇತನ 40 ಸಾವಿರ ರೂ.

3. ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ (ಸೋಶಿಯಲ್ ಮೀಡಿಯಾ) ಹುದ್ದೆಗೆ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಹಾಕಬಹುದು.
* ವೇತನ 30 ಸಾವಿರ ರೂ.

4. ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ (ಪ್ರೊಡಕ್ಷನ್) ಹುದ್ದೆಗೆ ಪತ್ರಿಕೋದ್ಯಮದಲ್ಲಿ, ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಹಾಕಬಹುದು. 
* ವೇತನ 30 ಸಾವಿರ ರೂ.