RUDSETI Self Employment Training: ಸ್ವ ಉದ್ಯೋಗ ಉಚಿತ ತರಬೇತಿಗೆ ರುಡ್‌ಸೆಟ್‌ ಅರ್ಜಿ ಆಹ್ವಾನ

  • ಸ್ವ ಉದ್ಯೋಗ ಕೈಗೊಳ್ಳಲು ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾಬಿಸಿದ ರುಡ್‌ಸೆಟ್ ಉಜಿರೆ
  • ಡಿಸೆಂಬರ್ 28 ರಿಂದ ಆರಂಭವಾಗಲಿದೆ ವಿವಿಧ ಉಚಿತ ತರಬೇತಿ ಕಾರ್ಯಕ್ರಮ
  • 18 ರಿಂದ 45 ವರ್ಷಗಳ ವಯೋಮಿತಿಯರು ಅರ್ಜಿ ಸಲ್ಲಿಸಲು ಅರ್ಹ
RUDSETI   Invites Applications for self employment Free Training gow

ಉಜಿರೆ(ಡಿ.22): ಬೆಳ್ತಂಗಡಿ ತಾಲೂಕಿನ ಉಜಿರೆಯ (ujire) ರುಡ್ ಸೆಟ್ (Rural Development & Self Employment Training - RUDSET) ತರಬೇತಿ ಸಂಸ್ಥೆಯಿಂದ ಯುವಕ-ಯುವತಿಯರಿಗೆ, ನಿರುದ್ಯೋಗಿಗಳಿಗೆ, ಸ್ವ ಉದ್ಯೋಗಾಕಾಂಕ್ಷಿಗಳಿಗೆ ಸ್ವ ಉದ್ಯೋಗ (Self Employment) ಕೈಗೊಳ್ಳಲು ವಿವಿಧ ತರಬೇತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ. ಈ ಸಂಬಂಧ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ರುಡ್ ಸೆಟ್  ಸಂಸ್ಥೆಯು ಮಾಹಿತಿ ನೀಡಿದೆ. ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕರು ಅರ್ಜಿಯನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ (www.rudsetujire.com) ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದು.

ಇಲ್ಲವಾದರೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬಿಳಿ ಹಾಳೆಯಲ್ಲಿ ಅರ್ಜಿಯನ್ನು ಬರೆದು, ಆ ಅರ್ಜಿಯನ್ನು ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ – 574240, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ವಿಳಾಸಕ್ಕೆ ಕಳುಹಿಸಬಹುದು.  ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404 ಅಥವಾ 9591044014ಗೆ ಸಂಪರ್ಕಿಸಲು ಕೋರಲಾಗಿದೆ.

BCP Recruitment 2022: ಬೆಂಗಳೂರು ಸಿಟಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ

ತರಬೇತಿಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಗ್ರಾಮೀಣ ಭಾಗದವರು ಬಿಪಿಎಲ್ ಕಾರ್ಡ್ ಹೊಂದಿರಬೇಕು. ಅಲ್ಲದೇ ಅದರ ಜೆರಾಕ್ಸ್ ಪ್ರತಿಯನ್ನು ನೀಡಬೇಕು. ಅಥವಾ ಎಪಿಎಲ್ ಕಾರ್ಡ್ ದಾದರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

KSP RECRUITMENT 2022: ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೂ ಅವಕಾಶ ಕೊಟ್ಟ ಕರ್ನಾಟಕ, ಇಂದೇ ಅರ್ಜಿ ಸಲ್ಲಿಸಿ

ಉಚಿತ ಸ್ವ ಉದ್ಯೋಗ ತರಬೇತಿಗಳ ವಿವರ ಇಂತಿದೆ
ಅಣಬೆ ಕೃಷಿ : 28.12.2021 ರಿಂದ 06.01.2022 (10 ದಿನಗಳು)
ಜೇನು ಕೃಷಿ : 06.01.2022 ರಿಂದ 15.01.2022 (10 ದಿನಗಳು)
ಗೃಹ ವಿದ್ಯುತ್ ಉಪಕರಣಗಳ ರಿಪೇರಿ : 10.01.2022 ರಿಂದ 09.02.2022 (30 ದಿನಗಳು)
ರಬ್ಬರ್ ಟ್ಯಾಪಿಂಗ್ : 19.01.2022 ರಿಂದ 28.01.2022 (10 ದಿನಗಳು)
ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ : 24.01.2022 ರಿಂದ 02.02.2022 (10 ದಿನಗಳು)
ಮಹಿಳೆಯರ ವಸ್ತç ವಿನ್ಯಾಸ : 17.01.2022 ರಿಂದ 15.02.2022 (30 ದಿನಗಳು)
ಮಸಾಲ ಪೌಡರ್, ಪಪ್ಪಡ್ ಮತ್ತು ಉಪ್ಪಿನಕಾಯಿ ತಯಾರಿಕೆ : 10.02.2022 ರಿಂದ 19.02.2022 (10 ದಿನಗಳು)
ಎಸಿ ಮತು ಫ್ರಿಡ್ಜ್ ರಿಪೇರಿ : 31.01.2022 ರಿಂದ 01.03.2022 (30 ದಿನಗಳು)
ಮಹಿಳೆಯರ ಬ್ಯೂಟಿ ಪಾರ್ಲರ್ : 16.02.2022 ರಿಂದ 17.03.2022 (30 ದಿನಗಳು)
ಎಲ್ಲಾ ತರಬೇತಿಗಳು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಅಭ್ಯರ್ಥಿಗಳು ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರಬೇಕು, ಎ.ಪಿ.ಎಲ್. ಪಡಿತರ ಚೀಟಿ ಇರುವವರು, ಉದ್ಯೋಗ ಖಾತ್ರಿ ಚೀಟಿಯನ್ನು ಹೊಂದಿರಬೇಕು.

GATE EXAM SCHEDULE 2022: ಇಂಜಿನಿಯರಿಂಗ್ GATE 2022ರ ಪರೀಕ್ಷೆಯ ದಿನಾಂಕ ಪ್ರಕಟ

4 ಪೋಟೋ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ 18 ರಿಂದ 45 ವರ್ಷದೊಳಗಿನ ವ್ಯಕ್ತಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ತರಬೇತಿಯ ಅವಧಿಯಲ್ಲಿ ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯನ್ನು ನೀಡಲಾಗುತ್ತದೆ.

NEET Counselling 2021: ನೀಟ್ ಕೌನ್ಸೆಲಿಂಗ್ ನಲ್ಲಿ ಮಹತ್ವದ ಬದಲಾವಣೆ ಮಾಡಿದ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ

Latest Videos
Follow Us:
Download App:
  • android
  • ios