ತನ್ನ ನಿಮಾನ ಸಂಸ್ಥೆಯಲ್ಲಿ ಕೆಲಸ ಮಾಡಲು ಕ್ಯಾಪ್ಟನ್‌ಗಳಿಗೆ ತಿಂಗಳಿಗೆ ಹೆಚ್ಚುವರಿಯಾಗಿ 1 ಲಕ್ಷ ಹಾಗೂ ಫಸ್ಟ್‌ ಆಫೀಸರ್‌ಗಳಿಗೆ 50 ಸಾವಿರ ಹೆಚ್ಚುವರಿಯಾಗಿ ಸಂಭಾವನೆ ನೀಡುತ್ತೇವೆ ಎಂದು ಗೋ ಫಸ್ಟ್ ತಿಳಿಸಿದೆ.

ನವದೆಹಲಿ (ಮೇ 30, 2023): ದಿವಾಳಿಯಿಂದ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿ, ಸದ್ಯ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಗೋ ಫಸ್ಟ್‌ ವಿಮಾನ ಸಂಸ್ಥೆಯು ತನ್ನ ಪೈಲಟ್‌ಗಳನ್ನು ಸಂಸ್ಥೆಯಲ್ಲೆ ಉಳಿಸಿಕೊಳ್ಳಲು 1 ಲಕ್ಷ ರು. ಹೆಚ್ಚಿಗೆ ವೇತನ ನೀಡುವುದಾಗಿ ತಿಳಿಸಿದೆ. 

ಈ ಕುರಿತು ಸಿಬ್ಬಂದಿಗೆ ಇ-ಮೇಲ್‌ ಕಳಿಸಿರುವ ಗೋ ಫಸ್ಟ್‌, ‘ತನ್ನ ನಿಮಾನ ಸಂಸ್ಥೆಯಲ್ಲಿ ಕೆಲಸ ಮಾಡಲು ಕ್ಯಾಪ್ಟನ್‌ಗಳಿಗೆ ತಿಂಗಳಿಗೆ ಹೆಚ್ಚುವರಿಯಾಗಿ 1 ಲಕ್ಷ ಹಾಗೂ ಫಸ್ಟ್‌ ಆಫೀಸರ್‌ಗಳಿಗೆ 50 ಸಾವಿರ ಹೆಚ್ಚುವರಿಯಾಗಿ ಸಂಭಾವನೆ ನೀಡುತ್ತೇವೆ ಎಂದು ತಿಳಿಸಿದೆ. 

ಇದನ್ನು ಓದಿ: ಗೋ ಫಸ್ಟ್‌ ವಿಮಾನ ಸೇವೆ ದಿವಾಳಿ ಎಫೆಕ್ಟ್‌: ದೇಶದಲ್ಲಿ ವಿಮಾನ ಟಿಕೆಟ್‌ ದರ 4 - 6 ಪಟ್ಟು ಹೆಚ್ಚಳ

ಇದರೊಂದಿಗೆ ಸಂಸ್ಥೆಯಲ್ಲಿ ಸುದೀರ್ಘವಾಗಿ ಕೆಲಸ ಮಾಡಿದವರಿಗೆ ‘ದೀರ್ಘಾಯುಷ್ಯದ ಬೋನಸ್’ ನೀಡುವುದಾಗಿ ತಿಳಿಸಿದೆ. ಕೆಲಸ ಬಿಟ್ಟು ಹೋದವರು ಜೂನ್‌ 15ರ ಒಳಗೆ ಮರಳಿದರೆ ಅವರಿಗೂ ಹೆಚ್ಚಿನ ವೇತನ ಸಿಗಲಿದೆ ಎಂದು ಗೋ ಫಸ್ಟ್‌ ಕಂಪನಿ ತಿಳಿಸಿದೆ.

ಇತ್ತೀಚಿನ ತಿಂಗಳುಗಳಲ್ಲಿ ಎರಡು ಬಾರಿ ವೇತನವನ್ನು ಹೆಚ್ಚಿಸಿರುವ SpiceJet Ltd. ನ 7,50,000 ರೂಪಾಯಿಗಳಿಗೆ ಹೋಲಿಸಿದರೆ, AmbitionBox ನಲ್ಲಿನ ಮಾಹಿತಿಯ ಪ್ರಕಾರ Go First ಕ್ಯಾಪ್ಟನ್‌ಗಳು ಪ್ರಸ್ತುತ ತಿಂಗಳಿಗೆ ಸರಾಸರಿ 530,000 ರೂಪಾಯಿಗಳನ್ನು ಗಳಿಸುತ್ತಾರೆ.

ಇದನ್ನೂ ಓದಿ: ಮೇ 9 ರವರೆಗೆ Go First ವಿಮಾನಗಳು ಕ್ಯಾನ್ಸಲ್; ಪ್ರಯಾಣಿಕರಿಗೆ ಸಕಾಲಕ್ಕೆ ರೀಫಂಡ್‌ ಮಾಡಲು ಡಿಜಿಸಿಎ ಸೂಚನೆ

ಜಗತ್ತು ಸಾಂಕ್ರಾಮಿಕ ರೋಗದಿಂದ ಹೊರಬರುತ್ತಿದ್ದಂತೆ ಜಾಗತಿಕವಾಗಿ ವಿಮಾನಯಾನವು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಭಾರತದ ಅತಿದೊಡ್ಡ ವಾಹಕವಾದ ಇಂಡಿಗೋ 2024 ರ ಆರ್ಥಿಕ ವರ್ಷದಲ್ಲಿ 5,000 ಕಾರ್ಮಿಕರನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಅಲ್ಲದೆ, ಏರ್ ಇಂಡಿಯಾ ಲಿಮಿಟೆಡ್ ಈ ವರ್ಷ 4,200 ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿ ಮತ್ತು 900 ಪೈಲಟ್‌ಗಳನ್ನು ಸೇರಿಸಲು ಯೋಜಿಸಿದೆ.

ಇದನ್ನೂ ಓದಿ: 1,508 ರೂ.ಗೆ ವಿಮಾನದಲ್ಲಿ ಪ್ರಯಾಣಿಸಿ: ಗೋ ಫಸ್ಟ್‌ನಿಂದ ಇಂಡಿಪೆಂಡೆನ್ಸ್ ಡೇ ಸೇಲ್‌