Asianet Suvarna News Asianet Suvarna News

ಶೇ. 80 ಕ್ಕೂ ಹೆಚ್ಚು ಭಾರತೀಯ ವೃತ್ತಿಪರರಿಗೆ AIನದ್ದೇ ಚಿಂತೆ: ಕೆಲಸ ಕಳೆದುಕೊಳ್ಳೋ ಆತಂಕದಲ್ಲಿ ಜನತೆ!

Future of the Skills Landscape 2024 ಎಂಬ ಶೀರ್ಷಿಕೆಯ ಪತ್ರಿಕೆಯು ಈ ಅಧ್ಯಯನ ನಡೆಸಿದೆ. ತಂತ್ರಜ್ಞಾನದ ಸುಧಾರಣೆಯಿಂದ ಸಂಭವನೀಯ ಉದ್ಯೋಗ ನಷ್ಟದ ಬಗ್ಗೆ ಭಾರತದ ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಆತಂಕವನ್ನು ಇದು ಗಮನ ಸೆಳೆದಿದೆ. 

over 80 percent of professionals worry about losing their jobs as ai advances report ash
Author
First Published Dec 22, 2023, 3:30 PM IST

ನವದೆಹಲಿ (ಡಿಸೆಂಬರ್ 22, 2023): ಕೃತಕ ಬುದ್ಧಿಮತ್ತೆ (AI) ಹೆಚ್ಚು ಪ್ರಚಲಿತವಾಗುತ್ತಿದ್ದಂತೆ ತಂತ್ರಜ್ಞಾನದ ಸಂಭಾವ್ಯ ಋಣಾತ್ಮಕ ಪರಿಣಾಮಗಳ ಬಗ್ಗೆ ಹಲವರು ಚಿಂತಿತರಾಗಿದ್ದಾರೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ, ಕೆಲಸ ಮಾಡುವ 82% ವೃತ್ತಿಪರರು ತಂತ್ರಜ್ಞಾನ ಮುಂದುವರೆದಂತೆ, ತಮ್ಮ ಉದ್ಯೋಗಗಳು ಔಟ್‌ಡೇಟ್‌ ಆಗಬಹುದೆಂದು ಭಯಪಡುತ್ತಿದ್ದಾರೆ.

‘ಫ್ಯೂಚರ್ ಆಫ್ ದಿ ಸ್ಕಿಲ್ಸ್ ಲ್ಯಾಂಡ್‌ಸ್ಕೇಪ್ 2024’ (Future of the Skills Landscape 2024) ಎಂಬ ಶೀರ್ಷಿಕೆಯ ಪತ್ರಿಕೆಯು ಈ ಅಧ್ಯಯನ ನಡೆಸಿದೆ. ತಂತ್ರಜ್ಞಾನದ ಸುಧಾರಣೆಯಿಂದ ಸಂಭವನೀಯ ಉದ್ಯೋಗ ನಷ್ಟದ ಬಗ್ಗೆ ಭಾರತದ ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಆತಂಕವನ್ನು ಇದು ಗಮನ ಸೆಳೆದಿದೆ. 

ಇದನ್ನು ಓದಿ: ಮೃತ ವ್ಯಕ್ತಿಗಳ ಜೊತೆ ನಡೆಯಲಿದೆ ಮಾತುಕತೆ..! ಭವಿಷ್ಯ ಬಿಚ್ಚಿಟ್ಟ ಅಥೋಸ್ ಸಲೋಮ್

2 ಲಕ್ಷ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಶಿಕ್ಷಣ ತಜ್ಞರಲ್ಲಿ ವೃತ್ತಿಜೀವನದ ಮೇಲೆ ತಂತ್ರಜ್ಞಾನದ ಪರಿಣಾಮಗಳ ಕುರಿತು ಸಮೀಕ್ಷೆಯನ್ನು ಎಡ್‌ಟೆಕ್‌ ಸ್ಟಾರ್ಟ್ಅಪ್ Hero Vired ನಡೆಸಿತು. ಇನ್ನು, ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಚಿಂತೆಯ ಹೊರತಾಗಿಯೂ, ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಪ್ರಸ್ತುತವಾಗಲು ಉನ್ನತ ಕೌಶಲ್ಯವು ಅತ್ಯಗತ್ಯ ಎಂದು 78% ಜನ ನಂಬುತ್ತಾರೆ.

ತಂತ್ರಜ್ಞಾನವು ಉದ್ಯೋಗಗಳ ಸ್ವರೂಪವನ್ನು ವೇಗವಾಗಿ ಬದಲಾಯಿಸುವುದರಿಂದ, ಉದ್ಯೋಗವನ್ನು ಕಾಪಾಡಿಕೊಳ್ಳಲು ಪುನರ್ ಕೌಶಲ್ಯವು ಅತ್ಯಗತ್ಯ ಎಂದು ಉದ್ಯೋಗಿಗಳು ಒಪ್ಪಿಕೊಳ್ಳುತ್ತಾರೆ. ಕೆಲಸದ ಪ್ರಗತಿಯ ಮೇಲೆ ಕೃತಕ ಬುದ್ಧಿಮತ್ತೆಯು ಹೇಗೆ ಮಹತ್ವದ ಪ್ರಭಾವ ಬೀರುತ್ತದೆ ಎಂಬುದನ್ನು ಸಹ ಪತ್ರಿಕೆಯು ಹೇಳಿದೆ.

ವಾಹನ ಸವಾರರಿಗೆ ಗುಡ್ ನ್ಯೂಸ್, ಇಂಧನ ಉಳಿಸಲು ಗೂಗಲ್ ಮ್ಯಾಪ್‍ನಿಂದ ಹೊಸ ಫೀಚರ್!

ಈ ಮಧ್ಯೆ,  AI ಸಾಮರ್ಥ್ಯಗಳು ಅಸ್ತಿತ್ವದಲ್ಲಿರುವ ಸ್ಥಾನಗಳಲ್ಲಿ ಜನರ ಪ್ರಗತಿಯ ಮೇಲೆ ಪ್ರಮುಖ ಪರಿಣಾಮ ಬೀರುತ್ತವೆ ಎಂದು ಶೇ. 39 ರಷ್ಟು ಜನ ಅಭಿಪ್ರಾಯ ಪಟ್ಟಿದ್ದಾರೆ. 

ಚಾಟ್‌ಜಿಪಿಟಿಯ ಚೊಚ್ಚಲ ಪ್ರವೇಶದೊಂದಿಗೆ, ಕಾರ್ಯಸ್ಥಳದ ತಂತ್ರಜ್ಞಾನಕ್ಕೆ ಬಂದಾಗ AI ಬಿಸಿ ವಿಷಯವಾಗಿದೆ. 90% ಜನರ ಪ್ರಕಾರ, ಐದು ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (AI) ಅತ್ಯಂತ ಬೇಡಿಕೆಯಲ್ಲಿರುವ ಕೌಶಲ್ಯವಾಗಿದೆ. ಆಶ್ಚರ್ಯಕರವಾಗಿ, 80% ಜನರು 2028 ರ ವೇಳೆಗೆ, AI- ಸಂಬಂಧಿತ ಪ್ರತಿಭೆಗಳಿಗೆ ಹೆಚ್ಚಿನ ವೇತನ ಸಿಗುತ್ತದೆ ಎಂದು ಭಾವಿಸುತ್ತಾರೆ.

 

ಬ್ರೇಕ್ ಅಪ್ ನಂತ್ರ AI ಬಾಯ್ ಫ್ರೆಂಡ್ ಮಾಡ್ಕೊಂಡ ಹುಡುಗಿ!

ಅಧ್ಯಯನವು ವೃತ್ತಿಪರರಲ್ಲಿ ಕೌಶಲ್ಯವನ್ನು ಹೆಚ್ಚಿಸುವ ಮಾದರಿ ಮತ್ತು ವಿಧಾನಗಳ ಒಳನೋಟವನ್ನು ಒದಗಿಸುತ್ತದೆ. 18 ರಿಂದ 55 ವರ್ಷ ವಯಸ್ಸಿನ 43.5% ವಯಸ್ಕರು ಪ್ರತಿ 6 ತಿಂಗಳಿಗೊಮ್ಮೆ ಕೌಶಲ್ಯವನ್ನು ಹೆಚ್ಚಿಸುವುದು ಅಗತ್ಯವೆಂದು ನಂಬುತ್ತಾರೆ. ಸುಧಾರಿಸಲು ಆಯ್ಕೆ ಮಾಡಿದವರಲ್ಲಿ 81% ಜನರು ಕಳೆದ ವರ್ಷ ಆನ್‌ಲೈನ್ ಕೋರ್ಸ್‌ಗಳನ್ನು ಆಯ್ಕೆ ಮಾಡಿದ್ದಾರೆ. ಹೆಚ್ಚುವರಿಯಾಗಿ, 83% ಜನರು ನಿರ್ದಿಷ್ಟ AI ಕೌಶಲ್ಯಗಳನ್ನು ಹೊಂದಿರುವುದು ವೃತ್ತಿ ಅವಕಾಶಗಳನ್ನು ಹೆಚ್ಚಿಸುತ್ತದೆ ಎಂದು ನಂಬುತ್ತಾರೆ.

AI ವೇತನ ಹೆಚ್ಚಳದ ಭರವಸೆ ನೀಡಿದ್ದರೂ ಸಹ, ಸಾಫ್ಟ್‌ ಸ್ಕಿಲ್‌ಗಳು ಇನ್ನೂ ಅವಶ್ಯಕ. ಇದರ ಪರಿಣಾಮವಾಗಿ, ಡಿಜಿಟಲ್ ಮಾರ್ಕೆಟಿಂಗ್, ಹಸಿರು ಉದ್ಯೋಗಗಳು ಮತ್ತು ಮಾನಸಿಕ ಆರೋಗ್ಯ ಸಮಾಲೋಚನೆಯು ಹೆಚ್ಚಿನ ಬೇಡಿಕೆಯಲ್ಲಿ ನಿರೀಕ್ಷಿಸಲಾದ ಅಗ್ರ ಮೂರು ತಾಂತ್ರಿಕೇತರ ಕ್ಷೇತ್ರ ಉದ್ಯೋಗಗಳಲ್ಲಿ ಒಂದಾಗಿದೆ ಎಂದು ಕಂಡುಕೊಳ್ಳಲಾಯಿತು. ಸಮೀಕ್ಷೆಯ ಪ್ರಕಾರ, ಕೈಗಾರಿಕೆಗಳು ಸುಸ್ಥಿರತೆಯನ್ನು ಉತ್ತೇಜಿಸುವುದರಿಂದ ನಿರ್ವಹಣೆ, ಹಸಿರು ತಂತ್ರಜ್ಞಾನ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ನಲ್ಲಿ ಅನುಭವ ಹೊಂದಿರುವ ಜನರ ಅಗತ್ಯತೆ ಹೆಚ್ಚುತ್ತಿದೆ.

AI ಮೂಲಕ ಮಹಿಳೆಯರ ಬೆತ್ತಲೆಗೊಳಿಸೋ ಫೋಟೋ ಆ್ಯಪ್‌ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

Follow Us:
Download App:
  • android
  • ios