*ಮುಂಬೈನ ಸೇಂಟ್ ಜೇವಿಯರ್ ಕಾಲೇಜಿನ ವಿದ್ಯಾರ್ಥಿಗೆ ಬಂಪರ್ ಜಾಬ್ ಆಫರ್*ವಿದ್ಯಾರ್ಥಿ ವಾರ್ಷಿಕ 30 ಲಕ್ಷ ರೂ. ಆಫರ್ ನೀಡಿದ ಎಫ್‌ಎಂಸಿಜಿ ಕಂಪನಿಯೊಂದು*ಕೋವಿಡ್ ಮಧ್ಯೆಯೂ  ಬ್ಯಾಂಕಿಂಗ್, ಫೈನಾನ್ಸ್‌ ಸೆಕ್ಟರ್‌ನಲ್ಲಿ ಹೆಚ್ಚಿದ ಉದ್ಯೋಗ

ಕೋವಿಡ್ (covid-19) ಸಂಕಷ್ಟದಲ್ಲೂ ಉದ್ಯಮ ವಲಯ ಉತ್ತಮ ಸಾಧನೆಯ ಹಾದಿಯಲ್ಲೇ ಸಾಗುತ್ತಿದೆ. ಈ ವರ್ಷವೂ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕಂಪನಿಗಳು ಆಯ್ಕೆ ಮಾಡಿಕೊಳ್ಳುತ್ತಿವೆ. ಕ್ಯಾಂಪಸ್ ಸೆಲೆಕ್ಷನ್ (Campus Selection) ನಡೆಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉತ್ತಮ‌ ಪ್ಯಾಕೇಜ್ ಸಹ ಕೊಡುತ್ತಿವೆ. ಹೀಗೆ ಕ್ಯಾಂಪಸ್ ಪ್ಲೇಸ್ಮೆಂಟ್ ಪಡೆದಿರೋ ಮುಂಬೈ (Mumbai)ನ ವಿದ್ಯಾರ್ಥಿಯೊಬ್ಬ ಈಗ ಎಲ್ಲರ ಅಟ್ರಾಕ್ಷನ್ ಆಗ್ಬಿಟ್ಟಿದ್ದಾನೆ. ಯಾಕಂದ್ರೆ ಅವನಿಗೆ ಸಿಕ್ಕಿರೋ ಪ್ಯಾಕೇಜ್ ಕೇಳಿದ್ರೆ ನೀವು ಅಚ್ಚರಿ ಪಡ್ತೀರಾ. ಫೈನಲ್ ಇಯರ್ ಡಿಗ್ರಿಯಲ್ಲಿರೋ ಆ ವಿದ್ಯಾರ್ಥಿಗೆ ಬರೋಬ್ಬರಿ ₹30ಲಕ್ಷ ಪ್ಯಾಕೇಜ್ ಸಿಕ್ಕಿದೆ. ಸೇಂಟ್ ಕ್ಸೇವಿಯರ್ಸ್ ಕಾಲೇಜಿನ ಮೂರನೇ ವರ್ಷದ ಬ್ಯಾಚುಲರ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (BMS) ವಿದ್ಯಾರ್ಥಿ ಪ್ರಮುಖ ಎಫ್‌ಎಂಸಿಜಿ (FMCG) ಕಂಪನಿಗೆ ಆಯ್ಕೆಯಾಗಿದ್ದಾನೆ. ಮುಂಬೈನಲ್ಲಿ ಈ ವರ್ಷವೂ ಉನ್ನತ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಕಾಣುತ್ತಿವೆ. ಜೊತೆಗೆ ಹೆಚ್ಚಿನ ವೇತನದ ಪ್ಯಾಕೇಜ್‌ಗಳು ಸಿಗುತ್ತಿವೆ ಅನ್ನೋದಕ್ಕೆ ಇದೇ ಉತ್ತಮ‌ ನಿದರ್ಶನ. 

ಸಾಂಕ್ರಾಮಿಕ (2020-21) ಸಮಯದಲ್ಲಿಯೂ ಸಹ, ನಮ್ಮ ಸಂಸ್ಥೆಯು ಉತ್ತಮ ಉದ್ಯೋಗ ಕೊಡುಗೆಗಳನ್ನು ಆಕರ್ಷಿಸಿದೆ. ಕಂಪನಿಗಳು ನೀಡುತ್ತಿರುವ ವೇತನವೂ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸರಾಸರಿ ವೇತನವು ಸುಮಾರು 30%ರಷ್ಟು ಹೆಚ್ಚಾಗಿದೆ. ಈ ವರ್ಷ ಹಲವಾರು ವಿದ್ಯಾರ್ಥಿಗಳಿಗೆ ₹15 ರಿಂದ 22 ಲಕ್ಷದವರೆಗೆ ವೇತನ ಪ್ಯಾಕೇಜ್‌ಗಳನ್ನು ನೀಡಲಾಗಿದೆ ಎಂದು ಮ್ಯಾನೇಜ್‌ಮೆಂಟ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಮತ್ತು ಸೇಂಟ್ ಕ್ಸೇವಿಯರ್ ಕಾಲೇಜಿನ ಪ್ಲೇಸ್‌ಮೆಂಟ್ ಕನ್ವೀನರ್ ಸೋನಿ ಜಾರ್ಜ್ (Sony George) ತಿಳಿಸಿದ್ದಾರೆ. 

GATE Examination 2022: GATE ಪರೀಕ್ಷೆ ಮುಂದೂಡಲು ನಿರಾಕರಿಸಿದ ಸುಪ್ರೀಂ

ಕಳೆದ ವರ್ಷ (2020-21)ರಲ್ಲಿ ಈ ವಿದ್ಯಾರ್ಥಿಯು ಅದೇ ಕಂಪನಿಯಲ್ಲಿ ಇಂಟರ್ನ್ ಆಗಿದ್ದರು. ಇದೀಗ ಕಂಪನಿಗೆ ಸೇರಲು ಪ್ಲೇಸ್‌ಮೆಂಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಅಂತಾರೆ ಸೋನಿ ಜಾರ್ಜ್. ಅಂದಹಾಗೇ ಮುಂಬೈ ವಿಶ್ವವಿದ್ಯಾನಿಲ (Mumbai Universtiy)ಯದೊಂದಿಗೆ ಸಂಯೋಜಿತವಾಗಿರುವ ಬಹುತೇಕ ಕಾಲೇಜುಗಳು, ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತವೆ. ಏಪ್ರಿಲ್-ಮೇ ವರೆಗೆ ಎಲ್ಲಾ ರೀತಿಯ ಸಂದರ್ಶನಗಳು ನಡೆಯುತ್ತವೆ.

ಈ ವರ್ಷ ಕಾಲೇಜುಗಳಾದ್ಯಂತ ವಿದ್ಯಾರ್ಥಿಗಳಿಗೆ ನೀಡಲಾಗುವ ಸಂಭಾವನೆಯಲ್ಲಿ ಕನಿಷ್ಠ ₹2 ರಿಂದ 4 ಲಕ್ಷದವರೆಗೆ ಏರಿಕೆಯಾಗಿದೆ ಅಂತೆ. ಈ ವರ್ಷ, ಬಹುತೇಕ ಎಲ್ಲಾ ವಿಭಾಗಗಳ ಪದವೀಧರರಿಗೆ ಬೇಡಿಕೆ ಹೆಚ್ಚಾಗಿದೆ. ಕಳೆದ ವರ್ಷದವರೆಗೆ ಕೊಡುಗೆಗಳನ್ನು ಆಕರ್ಷಿಸುವ ಕೆಲವು ವಿಭಾಗಗಳಾದ ಮ್ಯಾನೇಜ್‌ಮೆಂಟ್ (Management) ಮತ್ತು ಫೈನಾನ್ಸ್‌(Finance)ಗೆ ಇದು ವ್ಯತಿರಿಕ್ತವಾಗಿದೆ ಎಂದು ವಿವರಿಸ್ತಾರೆ ಚರ್ಚ್ ಗೇಟ್ ಜೈಹಿಂದ್ ಕಾಲೇಜಿನ ಶೈಕ್ಷಣಿಕ ಮುಖ್ಯಸ್ಥೆ ಮತ್ತು ತರಬೇತಿ ಮತ್ತು ಉದ್ಯೋಗದ ಮುಖ್ಯಸ್ಥೆ ರಾಖಿ ಶರ್ಮಾ. ಸಂಸ್ಥೆಯಲ್ಲಿ ವಿದ್ಯಾರ್ಥಿಗೆ ನೀಡಲಾಗುವ ವೇತನವು ಕಳೆದ ವರ್ಷಕ್ಕಿಂತ ಸುಮಾರು ಎರಡು ಲಕ್ಷ ಹೆಚ್ಚಾಗಿದೆ ಮತ್ತು ಪ್ಲೇಸ್‌ಮೆಂಟ್ ಸೀಸನ್ ಇನ್ನೂ ನಡೆಯುತ್ತಿದೆ.

ವಿಲೆ ಪಾರ್ಲೆಯ ನರ್ಸೀ ಮೊಂಜಿ ಕಾಲೇಜಿನ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವರ್ಷ ನೇಮಕಾತಿಗಾಗಿ ನೋಂದಾಯಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ನೀಡಲಾಗುತ್ತಿದ್ದ ಅತ್ಯಧಿಕ ವೇತನವು ವಾರ್ಷಿಕ ₹19.5 ಲಕ್ಷ ಆಗಿತ್ತು. ಈ ವರ್ಷ ಹೆಚ್ಚಿನ ಸಂಖ್ಯೆಯ ಉದ್ಯೋಗಗಳು ಹಣಕಾಸು (Finance) ಮತ್ತು ಬ್ಯಾಂಕಿಂಗ್ (Banking) ವಲಯದಿಂದ ಬಂದಿವೆ ಮತ್ತು ಡಿಜಿಟಲ್ ಮಾರ್ಕೆಟಿಂಗ್ (Digital Marketing) ಎರಡನೇ ಸ್ಥಾನದಲ್ಲಿದೆ.

Online Education Apps: ಕೋವಿಡ್ ಕಾಲದಲ್ಲಿ ನೆರವಾದ ಆನ್ಲೈನ್ ಎಜುಕೇಷನ್ ಆಪ್ಸ್

ಕಳೆದ ವರ್ಷ, ಸಾಂಕ್ರಾಮಿಕ ರೋಗದಿಂದಾಗಿ, ಕಾಲೇಜುಗಳಾದ್ಯಂತ ಉದ್ಯೋಗ ಸಂದರ್ಶನಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿತ್ತು ಮತ್ತು ಅನೇಕ ಸಂದರ್ಭಗಳಲ್ಲಿ, ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಈ ವರ್ಷ, ಕಾಲೇಜುಗಳು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಕಂಪನಿಗಳಿಗೆ ಆನ್‌ಲೈನ್ ಮತ್ತು ಫಿಸಿಕಲ್ ಪ್ಲೇಸ್‌ಮೆಂಟ್ ಸ್ಲಾಟ್‌ಗಳನ್ನು ನೀಡಿವೆ.