ದೇಶದ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್‌) ನಲ್ಲಿ 1 ಕೋಟಿ ರು. ವೇತನ ಪಡೆಯುವ ಉದ್ಯೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಅಂದರೆ ವಾರ್ಷಿಕವಾಗಿ ಒಂದು ಕೋಟಿ ರು. ಸ್ಯಾಲರಿ ಪಡೆಯುವ ನೌಕರರ ಎಷ್ಟಿರಬಹುದು ಅಂತೀರಾ.? ಮುಂದೆ ನೋಡಿ.

ಬೆಂಗಳೂರು, (ಜೂ.13): ಟಿಸಿಎಸ್ ಯಲ್ಲಿ ವಾರ್ಷಿಕವಾಗಿ 1 ಕೋಟಿ ರು. ವೇತನ ಪಡೆಯುತ್ತಿರುವ ಉದ್ಯೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, ಅದು 2019ರ ಫೈನಾನ್ಸಿಯಲ್ ಇಯರ್‌ನಲ್ಲಿ 100ರ ಗಡಿದಾಟಿದೆ.

2017ರ ಫೈನಾನ್ಸಿಯಲ್ ಇಯರ್‌ನಲ್ಲಿ 91 ಕೋಟ್ಯಾಧಿಪತಿಗಳನ್ನು ಹೊಂದಿತ್ತು, ಇದೀಗ 2019ರ ಫೈನಾನ್ಸಿಯಲ್ ಇಯರ್‌ನಲ್ಲಿ ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ಮತ್ತು ಸಹಾಯಕ ಸಿಇಒ ಸುಬ್ರಮಣ್ಯಂ ಅವರನ್ನು ಹೊರತುಪಡಿಸಿ ವಾರ್ಷಿಕವಾಗಿ 1 ಕೋಟಿ ರು. ವೇತನ ಪಡೆಯುವ ಉದ್ಯೋಗಿಗಳ ಸಂಖ್ಯೆ 103ಕ್ಕೆ ಏರಿದೆ.

ಇನ್ಫೋಸಿಸ್ ಗೆ ಹೋಲಿಸಿದರೆ ಟಿಸಿಎಸ್ ನೌಕರರ ವೇತನದಲ್ಲಿ ಗಮನಾರ್ಹವಾದ ವ್ಯತ್ಯಾಸ ಇದೆ. ಇನ್ಫೋಸಿಸ್ 1.48% ರಷ್ಟು 60 ಉದ್ಯೋಗಿಗಳು ವಾರ್ಷಿಕವಾಗಿ 1.02 ಕೋಟಿ ರು. ಸಂಬಳ ಎಣೆಸಿದರೆ, ಟಿಸಿಎಸ್‌ನ 103 ನೌಕರರು ಕೋಟ್ಯಾಧಿಪತಿಗಳಿದ್ದಾರೆ.

ಟಿಎಸ್‌ನ ಕೋಟ್ಯಾಧಿಕಪತಿಗಳು
ಟಿಸಿಎಸ್ ಸಾರ್ವಜನಿಕ ಸೇವೆಗಳ ವ್ಯವಹಾರದ ಮುಖ್ಯಸ್ಥ ದೇಬಾಶಿಸ್ ಘೋಷ್ ಅವರು 4.7 ಕೋಟಿ ರು. ವೇತನ ಪಡೆಯುತ್ತಿದ್ದರೆ, ವ್ಯವಹಾರ ಮತ್ತು ತಾಂತ್ರಿಕ ಸೇವೆಗಳ ಮುಖ್ಯಸ್ಥ ಕೃಷ್ಣನ್ ರಾಮನುಜಾಮ್ ಅವರು 4.1 ಕೋಟಿ ರೂಪಾಯಿಗಳನ್ನು ಸಂಪಾದಿಸುತ್ತಿದ್ದಾರೆ.

ಕಂಪನಿಯ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ಉದ್ಯಮದ ಮುಖ್ಯಸ್ಥ ಕೆ.ಕೃತಿವಸನ್ ಅವರು 4.3 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಹೀಗೆ ಇನ್ನು ಹಲವರು ಕೋಟ್ಯಾಧಿಪತಿಗಳಾಗಿದ್ದಾರೆ.