Asianet Suvarna News Asianet Suvarna News

ಯುಎಇಯಲ್ಲಿ ಪುರುಷ ನರ್ಸ್‌ಗಳಿಗೆ 1ಲಕ್ಷಕ್ಕೂ ಅಧಿಕ ವೇತನದ ಉದ್ಯೋಗ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಅರ್ಜಿ ಆಹ್ವಾನ

ಯುಎಈ ನಲ್ಲಿ ಪುರುಷ ನರ್ಸ್ಗಳಿಗೆ ಉದ್ಯೋವಕಾಶ: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ. ಆಯ್ಕೆಯಾಗುವವರಿಗೆ ಮಾಸಿಕ 1,11,000. ರೂ ವೇತನ. ಆಗಸ್ಟ್ ನಲ್ಲಿ ಆನ್‌ಲೈನ್ ಮೂಲಕ ಸಂದರ್ಶನ.

Karnataka Skill Development Corporation invites application for Male Nurse Jobs in UAE gow
Author
First Published Aug 5, 2024, 5:19 PM IST | Last Updated Aug 5, 2024, 5:19 PM IST

ಬೆಂಗಳೂರು (ಆ.5): ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ  ವತಿಯಿಂದ ಯುನೈಟೆಡ್ ಅರಬ್ ಎಮಿರೈಟ್ಸ್ (ಯುಎಈ)ನಲ್ಲಿ ಪುರುಷ ನರ್ಸ್ಗಳಿಗೆ
ಉದ್ಯೋಗ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಬಿಎಸ್ಸಿ ನರ್ಸಿಂಗ್, ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಹತೆ ಇರುವರಿಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ಅರ್ಹರಿಗೆ ಈ ಉದ್ಯೋಗ ಅವಕಾಶವನ್ನು ಒದಗಿಸಲಿದೆ. 
 
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಈ ಹಿಂದೆ ಸ್ಲೋವಾಕಿಯಾದಲ್ಲಿ ಹಲವಾರು ಕನ್ನಡಿಗರಿಗೆ ನಿಗಮದ ಮೂಲಕ ಉದ್ಯೋಗ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಇದರ ಬೆನಲ್ಲೇ ಯುಎಈ ನಲ್ಲಿ ಪುರುಷ ನರ್ಸ್ಗಳಿಗೆ ಉದ್ಯೋಗ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಹಾಗೆಯೇ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತ ನಾಯಕ್ ಅವರು ಈ  ಯೋಜನೆಗೆ ವಿಶೇಷ ಆಸಕ್ತಿ ವಹಿಸಿದ್ದಾರೆ.

ದರ್ಶನ್ ಭೇಟಿಗೆ ಜೈಲು ಅಧಿಕಾರಿಗಳಿಂದ ಬೇಕಾಬಿಟ್ಟಿ ಅವಕಾಶ! ಒಂದು ತಿಂಗಳಲ್ಲಿ ಭೇಟಿಯಾದವರೆಷ್ಟು?
 
ಯುಎಈ ನಲ್ಲಿ ಪುರುಷ ನರ್ಸಿಂಗ್ ಹುದ್ದೆ ಬಯಸುವವರು 40 ವರ್ಷದೊಳಗಿನವರಾಗಿರಬೇಕು. 2 ವರ್ಷ ಅನುಭವ  ಹೊಂದಿರಲೇಬೇಕು.  ಆಯ್ಕೆಯಾಗುವವರಿಗೆ 5 ಸಾವಿರ ಎಇಡಿ(ಮಾಸಿಕ 1,11,000. ರೂ ವೇತನ), 30 ದಿನ  ವೇತನ ರಹಿತ ಸಂಬಳ, ಕಂಪನಿ ವತಿಯಿಂದಲೇ ವೈದ್ಯಕೀಯ ವಿಮೆ, ಸಾರಿಗೆ ಮತ್ತು ವಿಮಾನಯಾನ ಟಿಕೆಟ್, ಆಹಾರ ಸೌಲಭ್ಯ, ವೀಸಾ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತದೆ. 
 
ಇದು ಸಂಪೂರ್ಣವಾಗಿ ಉಚಿತವಾಗಿದ್ದು, ಆಗಸ್ಟ್ ತಿಂಗಳಿನಲ್ಲಿ ಆನ್‌ಲೈನ್ ಮೂಲಕ ಸಂದರ್ಶನ ನಡೆಯಲಿದೆ. ಸಂದರ್ಶನದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಕೌಶಲ್ಯಾಭಿವೃದ್ದಿ ನಿಗಮ ತಿಳಿಸಿದೆ.

ವಿಪರೀತ ಮಳೆಯಾದ್ರೂ, ದೇಶವ್ಯಾಪಿ ಪ್ರಮುಖ 150 ಜಲಾಶಯಗಳಲ್ಲಿ ನೀರು ಸಂಗ್ರಹ ಕಳೆದ ವರ್ಷಕ್ಕಿಂತ ಕಡಿಮೆ!
 
ಕೆಎಸ್‌ಡಿಸಿ ಈ ಹಿಂದೆ ಸ್ಲೋವಾಕಿಯಾದಲ್ಲಿ ಐಟಿ, ಡಿಪ್ಲೊಮಾ, ಐಟಿಐ ಮತ್ತು ಇತರ ಉದ್ಯೋಗ-ಆಧಾರಿತ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಹಲವಾರು ಯುವಕರಿಗೆ ಉದ್ಯೋಗಗಳನ್ನು ಒದಗಿಸಿದೆ.  ಕೆಎಸ್‌ಡಿಸಿ ಹಂಗೇರಿಯಲ್ಲಿ 37 ಡ್ರೈವರ್ಗಳಿಗೆ ಉದ್ಯೋಗಗಳನ್ನು ಒದಗಿಸಿತ್ತು. ಜೊತೆಗೆ ವೆಲ್ಡರ್‌ಗಳಿಗೆ ಮಾರಿಷಸ್‌ನಲ್ಲಿ ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುತ್ತದೆ.

ಹೆಚ್ಚಿನ ವಿವರಗಳಿಗೆ ಅಭ್ಯರ್ಥಿಗಳು ಕೆಎಸ್‌ಡಿಸಿ ವೆಬ್ಸೈಟ್ http://imck.kaushalkar.com ಭೇಟಿ ನೀಡಬಹುದು ಮತ್ತು hr.imck@gmail.com ವೆಬ್ಸೈಟ್  ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಈ ವಾಟ್ಸಪ್ಪ್ ನಂಬರ್ಗಳ 9606492213/ 9606492214 ಮೂಲಕ ವಿವರಗಳನ್ನು ಪಡಯಬಹುದು ಹಾಗು ಈ ವಿಳಾಸಕ್ಕೆ ಇಂಟರ್ನ್ಯಾಷನಲ್ ಮೈಗ್ರೇಶನ್ ಸೆಂಟರ್– ಕರ್ನಾಟಕ (IMC-K), ನಾಲ್ಕನೇ ಮಹಡಿ, ಕಲ್ಯಾಣ ಸುರಕ್ಷಾ ಭವನ, ಐಟಿಐ ಕಾಲೇಜು ಕ್ಯಾಂಪಸ್, ಡೇರಿ ಸರ್ಕಲ್, ಬನ್ನೇರುಘಟ್ಟ ಮುಖ್ಯ ರಸ್ತೆ, ಬೆಂಗಳೂರು–560029 ಭೇಟಿ ನೀಡಬಹುದು.

Latest Videos
Follow Us:
Download App:
  • android
  • ios