ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಬೆಂಗ್ಳೂರಿನ ಐಟಿ ಕಂಪನಿಗಳಿಗೆ ಸರ್ಕಾರ ಸಲಹೆ
* ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಐಟಿ ಕಂಪನಿಗಳಿಗೆ ರಾಜ್ಯ ಸರ್ಕಾರ ಸಲಹೆ
* ಹೊರವರ್ತುಲ ರಸ್ತೆಯಲ್ಲಿರುವ ಐಟಿ ಕಂಪನಿಗಳಿಗೆ ಮನವಿ
* ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ತಡೆಗಟ್ಟಲು ಈ ಕ್ರಮ
ಬೆಂಗಳೂರು, (ಆ.24): ನಗರದ ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಂ ವರೆಗಿನ (Outer Ring Road) ರಸ್ತೆಯಲ್ಲಿರುವ ಐಟಿ ಕಂಪನಿಗಳಿಗೆ 2022, ಡಿಸೆಂಬರ್ ವರೆಗೂ ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ರಾಜ್ಯ ಸರ್ಕಾರ ಸಲಹೆ ಕೊಟ್ಟಿದೆ.
ಕೊರೋನಾ ಕಾರಣಕ್ಕೆ ಅಲ್ಲ. ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಹೊರವರ್ತುಲ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿವ ಸಾಧ್ಯತೆಗಳಿವೆ. ಇದರಿಂದ ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಂ ವರೆಗಿನ ರಸ್ತೆಗಳಲ್ಲಿ ತೆರಳುವ ಐಟಿ ಕಂಪನಿಗಳಿಗೆ ವರ್ಕ್ ಫ್ರಂ ಹೋಂ ಮುಂದುವರೆಸುವಂತೆ ಹೇಳಿದೆ.
ವರ್ಕ್ ಫ್ರಮ್ ಹೋಂ ಇದ್ರೂ ಕೆಲಸ ಮಾಡೋ ಮನಸಿಲ್ಲ..! ವಾಸ್ತು ಸರಿ ಇದ್ಯಾ?
ಇನ್ನು ಈ ಬಗ್ಗೆ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ನೋಟಿಸ್ ರಮಣ ರೆಡ್ಡಿ ಪ್ರತಿಕ್ರಿಯಿಸಿದ್ದು, ಆ ಮಾರ್ಗದಲ್ಲಿ ಸರ್ಕಾರ ಮೆಟ್ರೋ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಕಾರಣ ಈ ಭಾಗದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಅಗತ್ಯವಿದ್ದು, ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಸೂಚಿಸಿದ್ದಾರೆ.
ಸಿಲ್ಕ್ ಬೋರ್ಡ್ ನಿಂದ ಕೆ.ಆರ್ ಪುರಂವರೆಗಿನ ಮೆಟ್ರೋ ಕಾಮಗಾರಿ ಒಆರ್ ಆರ್ ಮೂಲಕ ಹಾದು ಹೋಗಲಿದ್ದು, ಸರ್ವಿಸ್ ರಸ್ತೆ ಹಾಗೂ 6 ಲೈನ್ ಗಳ ರಸ್ತೆ ಇದ್ದರೂ ಈ ಪ್ರದೇಶ ಮೊದಲೇ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದೆ. ಈಗ ಈ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಯೂ ನಡೆಯಲಿದ್ದು, ವಾಹನ ದಟ್ಟಣೆ ತಪ್ಪಿಸುವುದಕ್ಕಾಗಿ ಐಟಿ ಕಂಪನಿಗಳು ತಮ್ಮ ನೌಕರರಿಗೆ 2022 ರ ಡಿಸೆಂಬರ್ ವರೆಗೂ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಬೇಕಿದೆ ಎಂದಿದ್ದಾರೆ.
ಶೇ.57 ಭಾರತೀಯರಿಗೆ ವರ್ಕ್ ಫ್ರಮ್ ಹೋಮ್‌ನಲ್ಲಿ ಹೆಚ್ಚು ಕೆಲಸದ ಭಾರ; ಸಮೀಕ್ಷಾ ವರದಿ!
ಕೇಂದ್ರ ರೇಷ್ಮೆ ಮಂಡಳಿಯಿಂದ ಕೆಆರ್ ಪುರಂವರೆಗೆ ಹೊರ ವರ್ತುಲ ರಸ್ತೆಯಲ್ಲಿ ಬಿಎಂಆರ್‌ಸಿಎಲ್ ಮೆಟ್ರೋ ನಿರ್ಮಾಣ ಕಾರ್ಯಗಳನ್ನು ಆರಂಭಿಸುತ್ತಿದೆ. ಇದರ ನಿರ್ಮಾಣ ಕಾರ್ಯ ಮುಗಿಯಲು ಕನಿಷ್ಠ 1.5ರಿಂದ 2 ವರ್ಷ ಹಿಡಿಯಬಹುದು. ಈ ಭಾಗಗಳಲ್ಲಿ ದೊಡ್ಡ ಟೆಕ್ ಪಾರ್ಕ್ ಮತ್ತು ಐಟಿ ಕಂಪನಿಗಳು ಕ್ಯಾಂಪಸ್‌ಗಳು ಇದ್ದು, ದಿನವಿಡೀ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳು ಸಂಚರಿಸುತ್ತವೆ.