ಪಂಚಮಸಾಲಿ ಮಠದಲ್ಲಿ ಹೊಸ ಮನ್ವಂತರ: ಅನ್ನ ಶಿಕ್ಷಣದ ಜತೆ ಉದ್ಯೋಗ ದಾಸೋಹಕ್ಕೆ‌ ಮುನ್ನಡಿ..!

*    ಹರಜಾತ್ರೆ ಉದ್ಯೋಗ ಮೇಳ
*   ವಚನಾನಂದ ಶ್ರೀಗಳ ನಾಲ್ಕನೇ ವರ್ಷದ ಪೀಠಾರೋಹಣ
*  ಉದ್ಯೋಗ ಮೇಳಕ್ಕೆ ಮುರುಗೇಶ್ ನಿರಾಣಿ ಪ್ರೇರಣೆ
 

Job Fair Will Be Held on April 24th at Harihara in Davanagere grg

ವರದಿ - ವರದರಾಜ್ 

ದಾವಣಗೆರೆ(ಏ.21):  ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ(Veerashiva Lingayat Panchamasaali Matha) ಆಜಾದಿ ಅಮೃತ ಮಹೋತ್ಸವದ ಅಂಗವಾಗಿ ಬೃಹತ್ ಉದ್ಯೋಗ ಮೇಳ(Jonb Fair), ಸಮಾಜದ ವೀರ ಸೇನಾನಿಗಳಿಗೆ ಗೌರವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ರೂಪುರೇಷೆ ಸಿದ್ಧತೆಗಳನ್ನು ಕೈಗೊಂಡಿರುವ ಹರಿಹರದ ಪಂಚಮಸಾಲಿ ಜಗದ್ಗುರು ವಚನಾನಂದ(Vachanand Swamiji) ಶ್ರೀ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ಏ.23 ರಂದು ಬೆಳಿಗ್ಗೆ 11 ಗಂಟೆಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಂಚಮಸಾಲಿ(Panchamasali) ಸಮಾಜದ ಪಾತ್ರ, ಮತ್ತು ವೀರ ಸೇನಾನಿಗಳಿಗೆ ಗೌರವ ನೀಡುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಸೇರಿದಂತೆ ಹಲವು ಸಚಿವರು ಶಾಸಕರು ಭಾಗವಹಿಸಲಿದ್ದಾರೆ. 

Job Fair Will Be Held on April 24th at Harihara in Davanagere grg

Chamarajanagar Udyoga Mela 2022: ಬರದ ತಾಲ್ಲೂಕಿನಲ್ಲಿ ಬೃಹತ್ ಉದ್ಯೋಗ ಮೇಳ

ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಕೆಳದಿ ಚನ್ನಮ್ಮ,ಕಂಬಳಿ ಸಿದ್ದಪ್ಪ, ಶಂಕರಗೌಡ್ರು ಸೇರಿ ಆಯ್ದ 7 ಜನ ವೀರ ಸೇನಾನಿಗಳ ಜೀವನ ಚರಿತ್ರೆ ಪುಸ್ತಕ ಭಾವಚಿತ್ರಗಳನ್ನು ಮುದ್ರಿಸಲಾಗಿದೆ.ಇವರ ಸಾಧನೆ ಆಧರಿಸಿ ಖ್ಯಾತ ಗೀತಾ ರಚನೆಕಾರ ಕೆ ಕಲ್ಯಾಣ ರಚಿಸಿದ ಗೀತೆಯನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಚರ್ಚೆ

ರಾಷ್ಟ್ರೀಯ ಶಿಕ್ಷಣ ನೀತಿ(National Education Policy) ಕೃಷಿ ಕೌಶಲ‌ ತರಬೇತಿ ಕುರಿತ ಗೋಷ್ಠಿ ಆಯೋಜಿಸಿದ್ದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ(CN Ashwath Narayan) ವಿಷಯ ಮಂಡನೆ ಮಾಡುವರು. ಈ ವಿಷಯ ಗೋಷ್ಠಿಯಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು, ಕುಲಸಚಿವರು ಪಾಲ್ಗೊಳ್ಳವರು.

ಸಾಂಸ್ಕೃತಿಕ ಸೌರಭ 

ಸಂಜೆ 5 ರಿಂದ 7 ವರೆಗೂ ವಿವಿಧ ರಾಜ್ಯಗಳು, ಜಿಲ್ಲೆಗಳಿಂದ ಆಗಮಿಸುವ ಕಲಾತಂಡಗಳಿಂದ ವಿಶೇಷ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಆಯೋಜಿಸಲಾಗಿದೆ.

ಏ. 24 ರಂದು ಉದ್ಯೋಗ ಮೇಳ

ಏ. 24 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ರ ವರೆಗೆ ಪಂಚಮಸಾಲಿ ಜಗದ್ಗುರು ಪೀಠ, ನಿರಾಣಿ ಪೌಂಡೇಶನ್ , ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಂಗಳೂರಿನ ಎಥ್ನೋಟಿಕ್ ಆಕಾಡೆಮಿಗಳ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ.ಟಾಟಾ ಮೋಟಾರ್ಸ್, ವಿಪ್ರೋ, ಇನ್ಪೋಸಿಸ್ ಜೆಎಸ್ ಡಬ್ಲೂ, ಸೇರಿದಂತೆ 100 ಕ್ಕು ಹೆಚ್ಚು ಕಂಪನಿಗಳು ಭಾಗವಹಿಸಲಿವೆ‌. ಎಸ್ಎಸ್ಎಲ್‌ಸಿ(SSLC) ನಂತರದ ವಿವಿಧ ಪದವಿಗಳ ಉದ್ಯೋಗಾಂಕ್ಷಿಗಳು ಈ ಮೇಳದಲ್ಲಿ ಭಾಗವಹಿಸಲಿದ್ದು 1 ಲಕ್ಷಕ್ಕು ಹೆಚ್ಚು ಮಂದಿ ಭಾಗವಹಿಸುವ ಸಾಧ್ಯತೆ ಇದೆ.

ಅದೇ ದಿನ ಬೆಳಿಗ್ಗೆ 11 ಕ್ಕೆ ಉದ್ಯಮಿಯಾಗು ಉದ್ಯೋಗ(Job) ನೀಡು ಎನ್ನುವ ಶೀರ್ಷಿಕೆಯಡಿ ನಡೆಯುವ ಗೋಷ್ಠಿಯಲ್ಲಿ ನೂರಾರು ಯುವ ಉದ್ಯಮಿಗಳು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ‌. ಜೀರೋದಿಂದ ಹೀರೋ ಆದವರು ಈ ನಾಡಿನಲ್ಲಿ ಸಾಕಷ್ಟು ಮಂದಿ ಇದ್ದಾರೆ ಅವರ ಅನುಭವ ಜ್ಞಾನವನ್ನು ವೇದಿಕೆಯಲ್ಲಿ ಹಂಚಿಕೊಂಡು ಎಷ್ಟೋ ಯುವಕರಿಗೆ ಮಾರ್ಗದರ್ಶನ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಉದ್ಯೋಗ ಮೇಳಕ್ಕೆ ಮುರುಗೇಶ್ ನಿರಾಣಿ ಪ್ರೇರಣೆ

ಬೃಹತ್ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ(Murugesh Nirani) ಜನಸಾಮಾನ್ಯರಾಗಿದ್ದು ಉದ್ಯಮಿಯಾದವರು. ಅವರ ಸಂಸ್ಥೆಯ ಮೂಲಕ 75 ಸಾವಿರ ಜನರಿಗೆ ಉದ್ಯೋಗ ‌ನೀಡಲಾಗಿದೆ.ಅವರ ಪ್ರೇರಣೆಯಿಂದ ಉದ್ಯಮಿಯಾಗು ಉದ್ಯೋಗ‌ ನೀಡು ಎಂಬ ಗೋಷ್ಠಿಯನ್ನು ನಡೆಸಲಿದ್ದೇವೆ ಎಂದು ಶ್ರೀಗಳು ತಿಳಿಸಿದರು.

ಮಂಗಳೂರಿನಲ್ಲಿ ಉದ್ಯೋಗ ಮೇಳ ಉದ್ಘಾಟನೆ, ಈ ವರ್ಷ 36 ಸಾವಿರಕ್ಕೂ ಹೆಚ್ಚು ಯುವಜನರಿಗೆ ಕೆಲಸ

ಹಳ್ಳಿ ಹಳ್ಳಿಗಳಿಗೆ ಹೋದಾಗ ಕೋವಿಡ್(Covid-19) ಕಾರಣದಿಂದ  ನಮ್ಮ ಎಷ್ಟೋ ಯುವಕರನ್ನು ಉದ್ಯೋಗ ಕಳೆದುಕೊಂಡು ಗ್ರಾಮ ಸೇರಿದ್ದಾರೆ. ಅವರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಶ್ರೀಮಠ ಆಲೋಚಿಸಿತು.ಅದಕ್ಕೆ ಪ್ರೇರಣೆಯಾಗಿದ್ದು ರೂಪುರೇಷೆ ಸಿದ್ಧಗೊಂಡಿದ್ದು ಮುರುಗೇಶ್ ನಿರಾಣಿಯವರು.

ಅನ್ನ ಶಿಕ್ಷಣದ ಜೊತೆಗೆ ಉದ್ಯೋಗ ದಾಸೋಹ

ನಾಡಿನಲ್ಲಿ ವೀರಶೈವ ಮಠ ಮಂದಿರಗಳು ಅನ್ನ ಶಿಕ್ಷಣ ದಾಸೋಹ ನೀಡುತ್ತಿವೆ‌.ಇವುಗಳ ಜೊತೆಗೆ ಉದ್ಯೋಗ ದಾಸೋಹ ವನ್ನು ನೀಡುವ ಆಶಯ ನಮ್ಮದು‌.ಒಂದು ಕೈಯಲ್ಲಿ ಲಿಂಗ ಇನ್ನೊಂದು ಕೈಯಲ್ಲಿ ಕಾಯಕವನ್ನು ಈ  ಧರ್ಮ ನೀಡಿದೆ.ಕಾಯಕ ಇಲ್ಲದ ಕೈಗೆ ಉದ್ಯೋಗ ದೊರಕಿಸುವ ಕಾಯಕವನ್ನು ಶ್ರೀ‌ಮಠದಿಂದ ಮಾಡಲಾಗುತ್ತಿದೆ ಎಂದು ವಚನಾನಂದ ಶ್ರೀ ತಿಳಿಸಿದರು. 

ವಚನಾನಂದ ಶ್ರೀಗಳ ನಾಲ್ಕನೇ ವರ್ಷದ ಪೀಠಾರೋಹಣ

ಮಧ್ಯಾಹ್ನ 3 ಕ್ಕೆ ವಚನಾನಂದ ಶ್ರೀಗಳ 4 ನೇ ವರ್ಷದ ಪೀಠಾರೋಹಣ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ‌ ನಿರ್ಮಲಾನಂದ ಶ್ರೀ, ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ, ಜೈನ ಸಮುದಾಯದ ಲೋಕೆಶ್ ಮುನಿಗಳು ಹಾಗು ವಿವಿಧ ಮಠಾಧೀಶರು, ಕೆಪಿಸಿಸಿ ಅದ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ನಾನು ಪೀಠಾರೋಹಣವಾಗಿ ನಾಲ್ಕು ವರ್ಷಗಳಾಗಿದ್ದು ಮಠ ನಾಲ್ಕು ವರ್ಷಗಳಲ್ಲಿ ಹಲವಾರು ಮೈಲುಗಲ್ಲುಗಳನ್ನು ತಲುಪಿದೆ. ಸಮಾಜ ಹಿರಿಯರು ಇದಕ್ಕೆ ಸಾಕ್ಷಿಯಾಗಿದೆ‌. ಮಾಧ್ಯಮದ ಮೂಲಕ ಇಡೀ ಸಮಾಜದ ಜನತೆಗೆ ಮುಕ್ತ ಆಹ್ವಾನ ಇದೆ.ಎಲ್ಲರು ಭಾಗವಹಿಸಿ ಎಂದು ಸ್ವಾಮೀಜಿ ಮನವಿ ಮಾಡಿದರು.
 

Latest Videos
Follow Us:
Download App:
  • android
  • ios