Job Fair: ಇಂದಿನಿಂದ ಹರಿಹರ ಪಂಚಮಸಾಲಿ ಪೀಠದಲ್ಲಿ ಬೃಹತ್‌ ಉದ್ಯೋಗ ಮೇಳ

*   ಸಿಎಂ ಬೊಮ್ಮಾಯಿ, ಸಿದ್ದು, ಅಶ್ವತ್ಥ್‌ ನಾರಾಯಣ ಸೇರಿ ಹಲವು ಗಣ್ಯರು ಭಾಗಿ
*   ಉದ್ಯೋಗ ಮೇಳದಲ್ಲಿ  ಭಾಗವಹಿಸಲಿರುವ 100ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು
*   ರಾಷ್ಟ್ರೀಯ ಶಿಕ್ಷಣ ನೀತಿಯ ಲಾಭ ನಷ್ಟದ ಕುರಿತು ಶೃಂಗ ಸಭೆ
 

Jib Fair Will Be Held on April 23rd onwards at Harihara in Davanagere grg

ಹರಿಹರ(ಏ.23):  ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ಪಂಚಮಸಾಲಿ ಸ್ವಾತಂತ್ರ್ಯ ಸೇನಾನಿಗಳಿಗೆ ಗೌರವ ಮತ್ತು ಏ.24ರಂದು ಬೃಹತ್‌ ಉದ್ಯೋಗ(Job Fair) ಮೇಳವನ್ನು ಮಠದ ಆವರಣದಲ್ಲಿ ಅದ್ಧೂರಿಯಾಗಿ ಹಮ್ಮಿಕೊಂಡಿದ್ದು ಇದರ ಸದುಪಯೋಗವನ್ನು ಸಾವಿರಾರು ಉದ್ಯೋಗಾಕಾಂಕ್ಷಿಗಳು ಪಡೆಯಲಿದ್ದಾರೆ.

ತಾಲೂಕಿನ ಹನಗವಾಡಿ ಗ್ರಾಮದ ಹೊರವಯದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ(Panchamsali Peetha) ಆವರಣದಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಂಚಮಸಾಲಿ ಸಮಾಜದವರ ಪಾತ್ರ ಮತ್ತು ವೀರ ಸೇನಾನಿಗಳಿಗೆ ಗೌರವ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಸೇರಿ ಹಲವು ಸಚಿವರು ಹಾಗೂ ಶಾಸಕರು ಪಾಲ್ಗೊಳ್ಳಲಿದ್ದಾರೆ.

LinkedIn Research 2022ರಲ್ಲಿ ಉದ್ಯೋಗ ಬಿಡಲು ಶೇ.70ರಷ್ಟು ಮಹಿಳೆಯರು ಮುಂದು!

ಪುಸ್ತಕಗಳ ಲೋಕಾರ್ಪಣೆ:

ಬೆಳವಡಿ ಮಲ್ಲಮ್ಮ, ಕೆಳದಿಯ ಚೆನ್ನಮ್ಮ, ಕಂಬಳಿ ಸಿದ್ದಪ್ಪ ಸೇರಿ ಆಯ್ದ ಏಳು ಜನ ವೀರಸೇನಾನಿಗಳ ಜೀವನ ಚರಿತ್ರೆಯ ಪುಸ್ತಕಗಳನ್ನು ಮುದ್ರಿಸಲಾಗಿದ್ದು, ಅವರ ಸಾಧನೆ ಕುರಿತು ಚಿತ್ರಸಾಹಿತಿ ಕೆ.ಕಲ್ಯಾಣ್‌ ರಚಿಸಿರುವ ಗೀತೆಯನ್ನು ಲೋಕಾರ್ಪಣೆ ಮಾಡಲಾಗುವುದು. ಮಧ್ಯಾಹ್ನ 3 ಗಂಟೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಲಾಭ ನಷ್ಟದ ಕುರಿತು ಶೃಂಗ ಸಭೆಯನ್ನು ಏರ್ಪಡಿಸಲಾಗಿದ್ದು, ಸಚಿವ ಡಾ.ಸಿ.ಎನ್‌.ಅಶ್ವತ್ಥ್‌ ನಾರಾಯಣ ವಿಷಯ ಮಂಡನೆ ಮಾಡಲಿದ್ದಾರೆ.
ಏ.24ರ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರಿಗೆ ಮಠದ ಆವರಣದಲ್ಲಿ ನಿರಾಣಿ ಫೌಂಡೇಶನ್‌, ಜಿಲ್ಲಾ ಕೈಗಾರಿಕಾ ಕೇಂದ್ರ, ಎಥ್ನೋಟೆಕ್‌ ಅಕಾಡೆಮಿ ಬೆಂಗಳೂರು ಇವುಗಳ ಸಹಯೋಗದಲ್ಲಿ ಬೃಹತ್‌ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ವಿಪ್ರೋ, ಇಸ್ಫೋಸಿಸ್‌, ಟಾಟಾ ಮೋಟ​ರ್ಸ್‌, ಜೆಎಸ್‌ಡಬ್ಲೂ ಸೇರಿ 100ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ.

MGNREGA ನರೇಗಾ ಉದ್ಯೋಗದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ತಾರತಮ್ಯ

ಅಂದು ಮಧ್ಯಾಹ್ನ 3 ಗಂಟೆಗೆ ಪೀಠದ ವಚನಾನಂದ(Vachannand Swamiji) ಶ್ರೀಗಳ 4ನೇ ವರ್ಷದ ಪೀಠರೋಹಣ ಮಹೋತ್ಸವ ನಡೆಯಲಿದ್ದು, ಆದಿಚುಂಚನಗಿರಿಶ್ರೀ, ಪೇಜಾವರ ಶ್ರೀ, ಜೈನ ಸಮುದಾಯದ ಲೋಕೇಶ್‌ ಮುನಿಗಳು ಮತ್ತು ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ.

ಉದ್ಯೋಗ ಮೇಳಕ್ಕೆ ಮುರುಗೇಶ್ ನಿರಾಣಿ ಪ್ರೇರಣೆ

ಬೃಹತ್ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ(Murugesh Nirani) ಜನಸಾಮಾನ್ಯರಾಗಿದ್ದು ಉದ್ಯಮಿಯಾದವರು. ಅವರ ಸಂಸ್ಥೆಯ ಮೂಲಕ 75 ಸಾವಿರ ಜನರಿಗೆ ಉದ್ಯೋಗ ‌ನೀಡಲಾಗಿದೆ.ಅವರ ಪ್ರೇರಣೆಯಿಂದ ಉದ್ಯಮಿಯಾಗು ಉದ್ಯೋಗ‌ ನೀಡು ಎಂಬ ಗೋಷ್ಠಿಯನ್ನು ನಡೆಸಲಿದ್ದೇವೆ ಎಂದು ಶ್ರೀಗಳು ತಿಳಿಸಿದರು.
 

Latest Videos
Follow Us:
Download App:
  • android
  • ios