IT ಕಂಪನಿಗಳಿಂದ ಪದವೀಧರರಿಗೆ 1 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶ!

-IT ಕ್ಷೇತ್ರದಲ್ಲಿವೆ 1 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳು
-Wipro,Infosys ಕಂಪನಿಗಳಿಂದ ನೇಮಕಾತಿ ಆರಂಭ
-ಕಾಲೇಜುಗಳಿಂದ ಪಾಸ ಔಟ್‌ ಆದ ಫ್ರೇಶರ್ಸ್‌ಗೆ ಆದ್ಯತೆ

IT giants to hire 1 lakh garduate freshers

ಕೊರೊನಾ ವೈರಸ್ ಲಾಕ್‌ಡೌನ್ ನಂತರ ದೇಶಾದ್ಯಂತ ಐಟಿ ಕ್ಷೇತ್ರದಲ್ಲಿ ಉದ್ಯೋಗ (IT Jobs) ಅವಕಾಶಗಳು ಹೆಚ್ಚಿವೆ. ಇದರಿಂದ ಕಾಲೇಜುಗಳಿಂದ ಹೊಸದಾಗಿ ಹೊರಬರುವ ಪದವೀಧರರಿಗೆ ಅವಕಾಶಗಳು ಹೆಚ್ಚಿದ್ದು ವಿವಧ ಅಂತಾರಾಷ್ಟ್ರೀಯ ಐಟಿ  ಕಂಪನಿಗಳು ಹೊಸಬರಿಗೆ (Freshers) ಮಣೆ ಹಾಕುತ್ತಿವೆ. ಭಾರತದ ಅಗ್ರಗಣ್ಯ ಐಟಿ ಕಂಪನಿಗಳಾದ ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್‌(TCS), ಇನ್ಫೋಸಿಸ್‌ (Infosys), ವಿಪ್ರೋ(Wipro)  ಮತ್ತು ಎಚ್‌ಸಿಎಲ್ ಟೆಕ್ನೊಲೊಜಿಸ್(HCL Technologies) ನೇಮಕ ಪ್ರಕ್ರಿಯೆಗಳನ್ನು ಆರಂಭಿಸಿದ್ದು ಪದವಿ ಮುಗಿಸಿ ಕಾಲೇಜಿನಿಂದ ಪಾಸ್‌ ಔಟ್‌ ಆದ ವಿದ್ಯಾರ್ಥಿಗಳಿಗೆ  ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ. ಈ ಬಗ್ಗೆ ಹಲವು ಕಂಂಪನಿಗಳು ಈಗಾಗಲೇ ಸುತ್ತೋಲೆಗಳನ್ನು ಹೊರಡಿಸಿವೆ. ಮುಂಬರುವ ದಿನಗಳಲ್ಲಿ ವಿಪ್ರೋ, ಟೆಕ್‌ ಮಹೀಂದ್ರಾ ಸೇರಿದಂತೆ ಅಂತಾರಾಷ್ಟ್ರೀಯ ಐಟಿ ದಿಗ್ಗಜ ಕಂಪನಿಯಾದ Capgemeni ಕೂಡ ತಂತ್ರಜ್ಞಾನ ವಿಷಯಗಳಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಿವೆ.

TCS
ಭಾರತದ ಅತ್ಯಂತ ಡೊಡ್ದ ಐಟಿ ಕಂಪನಿಯಾದ ಟಿಸಿಎಸ್‌  ಮುಂಬರುವ ತಿಂಗಳುಗಳಲ್ಲಿ 35,000 ಕ್ಕೂ ಹೆಚ್ಚು ನೇಮಕಾತಿಗಳನ್ನು ಮಾಡುವುದಾಗಿ ತಿಳಿಸಿದೆ. TCS ತನ್ನ ಗುರಿಯಂತೆ 35,000 ನೇಮಕಾತಿಗಳನ್ನು ಮಾಡಿದರೆ, ಹಣಕಾಸು ವರ್ಷದಲ್ಲಿ ಒಟ್ಟು 78,000 ನೇಮಕಾತಿಗಳನ್ನು ಪೂರ್ಣಗೊಳಿಸುತ್ತದೆ. ಹಣಕಾಸು ವರ್ಷದ ಮೊದಲರ್ಧ ಭಾಗದಲ್ಲಿ ಟಿಸಿಎಸ್‌ ಸುಮಾರು 43 ಸಾವಿರಕ್ಕೂ ಹೆಚ್ಚು ಪದವೀಧರರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ. 5 ಲಕ್ಷಕ್ಕೂ ಹೆಚ್ಚು ನೌಕರರನ್ನು ಹೊಂದಿರುವ ಟಿಸಿಎಸ್ ಖಾಸಗಿ ವಲಯದಲ್ಲಿ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಯಾಗಿದೆ.

Infosys
ನೌಕರರ ಪೂರೈಕೆಯಲ್ಲಿ ತೊಂದರೆ ಅನುಭವಿಸುತ್ತಿರುವ ಇನ್ಫೋಸಿಸ್‌ ಈಗಾಗಲೇ ಹಣಕಾಸು  ವರ್ಷದಲ್ಲಿ 45,000 ಪದವೀಧರನ್ನು ನೇಮಕಾತಿ ಮಾಡುವ ಭರವಸೆ ನೀಡಿದೆ. 35,000 ಉದ್ಯೋಗಾವಕಾಶಗಳ ಭರವಸೆ ನೀಡಿದ್ದ ಇನ್ಫೋಸಿಸ್‌ ಈಗ ಈ ಸಂಖ್ಯೆಯನ್ನು ಹೆಚ್ಚಿಸಿದೆ. ಜೂನ್‌ ತಿಂಗಳ ಅಂತ್ಯದಲ್ಲಿ ಇನ್ಫೋಸಿಸ್‌ ಒಟ್ಟು 2.67 ಲಕ್ಷ ಉದ್ಯೋಗಿಗಳನ್ನು ಹೊಂದಿತ್ತು. 

FSSAIನಲ್ಲಿ 223 ಹುದ್ದೆಗಳಿಗೆ ನೇರ ನೇಮಕಾತಿ

Wipro
ಹಣಕಾಸು ವರ್ಷದ ಎರಡನೇ ಅರ್ಧವಾರ್ಷಿಕದಲ್ಲಿ ವಿಪ್ರೋ 8,000 ಕ್ಕೂ ಫ್ರೇಶರ್ಸ್‌ಗಳನ್ನು ನೇಮಕಾತಿ ಮಾಡಿದೆ. ʼನಾವು ಇದೇ ವೇಗದಲ್ಲಿ ನೇಮಕಾತಿಗಳನ್ನು ಮುಂದುವರೆಸುತ್ತೇವೆ, ಮುಂದಿನ ಹಣಕಾಸು ವರ್ಷದಲ್ಲಿ 25,000 ಕ್ಕೂ ಹೆಚ್ಚು ಫ್ರೇಶರ್ಸ್‌ಗಳನ್ನು ನೇಮಕಾತಿ ಮಾಡಲಾಗುವುದುʼ ಎಂದು ವಿಪ್ರೋ ಸಂಸ್ಥೆಯ ಸಿಇಓ ಮತ್ತು ಎಮ್‌ಡಿ (CEO and MD) ಥೀಯರಿ ಡೆಲಪೊರ್ಟ್‌ (Thierry Delaporte) ತಿಳಿಸಿದ್ದಾರೆ. ವಿಪ್ರೋ ಒಟ್ಟು 2  ಲಕ್ಷಕ್ಕೂ ಅಧಿಕ ಐಟಿ ಉದ್ಯೋಗಿಗಳನ್ನು ಹೊಂದಿದ್ದು ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ.

HCL Technologies
ಇತರ ಐಟಿ ಕಂಪನಿಗಳಂತೆ ಎಚ್‌ಸಿಎಲ್ ಕೂಡ ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸುತ್ತಿದೆ. ಸುಮಾರು 20,000 -20,000 ಕಾಲೇಜ್‌ ಫ್ರೆಶರ್ಸ್‌ಗಳನ್ನು ನೇಮಕಾತಿ ಮಾಡಲಾಗುವುದು ಎಂದು ಎಚ್‌ಸಿಎಲ್‌ ತಿಳಿಸಿದೆ. ಐಟಿ ಕ್ಷೇತ್ರಗಳ ಸೇವೆಗಳ ಬೇಡಿಕೆಗಳು ಹಚ್ಚಾಗುತ್ತಿರುವ ನಿಟ್ಟಿನಲ್ಲಿ ಹೆಚ್ಚೆಚ್ಚು ನೇಮಕಾತಿಗಳನ್ನು ಮಾಡಲಾಗುವುದು ಎಂದು ಎಚ್‌ಸಿಎಲ್ ತಿಳಿಸಿದೆ. 

11 ಬ್ಯಾಂಕುಗಳ 7855 ಹುದ್ದೆಗಳಿಗೆ IBPS ನೇಮಕಾತಿ, ಅರ್ಜಿ ಸಲ್ಲಿಸಿ

ಒಟ್ಟಿನಲ್ಲಿ ಕಾಲೇಜಿನಿಂದ ಪದವಿ ಪಡೆದು ಪಾಸ್‌ ಔಟ್‌ ಅಗುವ ವಿದ್ಯಾರ್ಥಿಗಳಿಗೆ ಐಟಿ ಕಂಪನಿಗಳಲ್ಲಿ ಸಾಕಷ್ಟು ಅವಕಾಶಗಳ ಸೃಷ್ಟಿಯಾಗಿವೆ.  ಮೊದಲ ಲಾಕಡೌನ್‌ನ ಆರಂಭದಿಂದ ಬಹುತೇಕ ಐಟಿ ಕಂಪನಿಗಳು  ವರ್ಕ್‌ ಫ್ರಾಮ್‌ ಹೋಮ (Work From Home) ಆರಂಭ ಮಾಡಿದ್ದವು. ಕಳೆದ ಕೆಲವು ತಿಂಗಳುಗಳಿಂದ ಕೊರೊನಾ ಆತಂಕ ತಗ್ಗಿದ ಹಿನ್ನೆಲೆಯಲ್ಲಿ ಐಟಿ ಉದ್ಯೋಗಿಗಳು ತಮ್ಮ ಕಚೇರಿಗಳತ್ತ ಮುಖ ಮಾಡುತ್ತಿದ್ದೂ ಐಟಿ ಕಂಪನಿಗಳು ಕೂಡ ಎಂಪ್ಲಾಯಿಗಳನ್ನು ಬರ ಮಾಡಿಕೊಳ್ಳುವ ಉತ್ಸುಕತೆಯಲ್ಲಿವೆ. ಈ ಮಧ್ಯೆ ಐಟಿ ಕ್ಷೇತ್ರೆಕ್ಕೆ ಹೊಸದಾಗಿ ಪದಾರ್ಪಣೆ ಮಾಡಲಿಚ್ಛಿಸುವ ಆಕಾಂಕ್ಷಿಗಳಿಗೂ ಕೂಡ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ.

Latest Videos
Follow Us:
Download App:
  • android
  • ios