IT BPM Industry Jobs: ಭಾರತದ ಐಟಿ ವಲಯದಲ್ಲಿ ಮುಂದಿನ ವರ್ಷ 3.75 ಲಕ್ಷ ಉದ್ಯೋಗ ಸೃಷ್ಟಿ
- 2022 ರ ಹಣಕಾಸು ವರ್ಷದಲ್ಲಿ ಹೊಸದಾಗಿ 3.75 ಲಕ್ಷ ಉದ್ಯೋಗ ಸೃಷ್ಟಿ
- 44.7 ಲಕ್ಷದಿಂದ 48.5 ಲಕ್ಷಕ್ಕೆ ಏರಲಿದೆ ಐಟಿ ಉದ್ಯೋಗಿಗಳ ಸಂಖ್ಯೆ
- ಟೀಮ್‌ಲೀಸ್ ಡಿಜಿಟಲ್ ಸಂಸ್ಥೆ ಸಮೀಕ್ಷೆಯಿಂದ ಹೊರಬಿತ್ತು ಮಾಹಿತಿ
ಬೆಂಗಳೂರು(ಡಿ.27): ಭಾರತೀಯ ಮಾಹಿತಿ ತಂತ್ರಜ್ಞಾನ ಮತ್ತು ವಾಣಿಜ್ಯ ಪ್ರಕ್ರಿಯೆ ನಿರ್ವಹಣೆ (Information Technology and Business Process Management-IT BPM) ಉದ್ಯಮದಲ್ಲಿ 2022 ರ ಹಣಕಾಸು ವರ್ಷದಲ್ಲಿ ಹೊಸದಾಗಿ 3.75 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ವರದಿ ತಿಳಿಸಿದೆ. ಈ ಮೂಲಕ ಈ ಉದ್ಯಮ ವಲಯದಲ್ಲಿ ಕೆಲಸಗಾರರ ಸಂಖ್ಯೆ 2022 ರ ಆರ್ಥಿಕ ವರ್ಷದಲ್ಲಿ 4.85 ಮಿಲಿಯನ್ ಗೆ ಏರಿಕೆಯಾಗಲಿದೆ. ಕೋವಿಡ್ -19 ಸಾಂಕ್ರಾಮಿಕದ ಮಧ್ಯೆಯೂ ಐಟಿ ವಲಯದ ದಿಟ್ಟ ನಿರ್ಧಾರವು ತಂತ್ರಜ್ಞಾನ ಮತ್ತು ಡಿಜಿಟಲೀಕರಣದ ಪ್ರಾಮುಖ್ಯತೆ ಮತ್ತಷ್ಟು ಹೆಚ್ಚಿಸಿದೆ. ಐಟಿ ಉದ್ಯೋಗಿಗಳ ಸಂಖ್ಯೆ ಮಾರ್ಚ್ ವೇಳೆಗೆ 44.7 ಲಕ್ಷದಿಂದ 48.5 ಲಕ್ಷಕ್ಕೆ ಏರಲಿದೆ ಎಂದು ಟೀಮ್‌ಲೀಸ್ ಡಿಜಿಟಲ್ ಸಂಸ್ಥೆ ವರದಿ ತಿಳಿಸಿದೆ.
ಗುತ್ತಿಗೆ ಸಿಬ್ಬಂದಿ ಮುಖ್ಯಸ್ಥರು ಮತ್ತು ವಿಷಯ ತಜ್ಞರು ಸೇರಿದಂತೆ 100ಕ್ಕೂ ಹೆಚ್ಚಿನ ಉದ್ಯೋಗದಾತರ ಜೊತೆ ಮಾತುಕತೆ ನಡೆಸಿ, ಸಮೀಕ್ಷೆ ನಡೆಸಿ ಟೀಮ್‌ಲೀಸ್ ಡಿಜಿಟಲ್ ಸಂಸ್ಥೆ ಪ್ರಸ್ತುತ ವರದಿಯನ್ನು ಸಿದ್ದ ಮಾಡಿದೆ. ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದು ಕಾರ್ಪೋರೇಟ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಅಭ್ಯರ್ಥಿಗಳು ಕೂಡ ಈ ವ್ಯವಸ್ಥೆಗೆ ಮುಕ್ತವಾಗಿ ತೆರೆದುಕೊಳ್ಳುತ್ತಿದ್ದಾರೆ ಎಂದು ಟೀಮ್‌ಲೀಸ್ ಡಿಜಿಟಲ್ ಸಂಸ್ಥೆ ಸಿದ್ದಪಡಿಸಿದ ವರದಿಯಲ್ಲಿದೆ. ಸುಮಾರು 10-15 ಪ್ರತಿಶತದಷ್ಟು ಐಟಿ-ಬಿಪಿಎಂ ಸೇರುವವರು ಪೂರ್ಣ ಸಮಯದ ಉದ್ಯೋಗದಿಂದ ಬಂದವರು ಎಂದು ವರದಿ ಉಲ್ಲೇಖಿಸಿದೆ.
2021-22 ನೇ ಸಾಲಿನ ಆರ್ಥಿಕ ವರ್ಷದಲ್ಲಿ 48.5 ಲಕ್ಷ ಉದ್ಯೋಗ ತಲುಪುವ ನಿಟ್ಟಿನಲ್ಲಿ ಹೊಸದಾಗಿ 3.75 ಲಕ್ಷ ಉದ್ಯೋಗಿಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
INDIAN MILITARY ACADEMY RECRUITMENT 2022: ಇಂಜಿನಿಯರಿಂಗ್ ಪದವೀಧರರಿಗೆ ಭರ್ಜರಿ ಅವಕಾಶ
ಡಿಜಿಟಲ್ ಕೌಶಲ್ಯಗಳ (digital skills) ಮೇಲೆ ಹೆಚ್ಚಿನ ಬೇಡಿಕೆ ಇದ್ದು, ಕಳೆದ 2021ನೇ ವರ್ಷಕ್ಕಿಂತ ಈ ಸಾಲಿನ ಹಣಕಾಸು ವರ್ಷದಲ್ಲಿ 7.5 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. ಡಿಜಿಟಲ್ ಸ್ಕಿಲ್ಸ್‌ಗಾಗಿ ಗುತ್ತಿಗೆ ಸಿಬ್ಬಂದಿಯ ಬೇಡಿಕೆಯು ಶೇಕಡಾ 50 ರಷ್ಟು ಹೆಚ್ಚಲಿದೆ ಎಂದು ವರದಿ ತಿಳಿಸಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 19 ರಷ್ಟು ಹೆಚ್ಚು ಎಂದು ತಿಳಿದುಬಂದಿದೆ.
ಡಿಜಿಟಲ್ ಕೌಶಲ್ಯಗಳಿಗೆ ನಿರೀಕ್ಷೆಗಿಂತ ಹೆಚ್ಚಿನ ಬೇಡಿಕೆ ಇರುವಾಗ ಪೂರೈಕೆಯ ಅಂತರವೂ ಇದೆ. ಡೇಟಾ ಇಂಜಿನಿಯರಿಂಗ್ , ಡೇಟಾ ಸೈನ್ಸ್, ಯಂತ್ರ ಕಲಿಕೆ ಮತ್ತು ಕೃತಕ ಬುದ್ಧಿಮತ್ತೆ ಕೌಶಲ್ಯಗಳಿಗೆ ಬೇಡಿಕೆ ಮತ್ತು ಪೂರೈಕೆ ಅಂತರವು ಹೆಚ್ಚುತ್ತಿದೆ ಎಂದು ವರದಿಯಿಂದ ತಿಳಿದುಬಂದಿದೆ.
Wipro Recruitment 2022: ಎಂಜಿನಿಯರಿಂಗ್ ಅಭ್ಯರ್ಥಿಗಳಿಗೆ ವಿಪ್ರೋ ಭರ್ಜರಿ ಆಫರ್
ಐಟಿ ಬಿಪಿಎಂ ಉದ್ಯಮವು ಮುಂದಿನ 5 ವರ್ಷಗಳಲ್ಲಿ 10 ಮಿಲಿಯನ್ ಉದ್ಯೋಗಿಗಳನ್ನು ತಲುಪಲು ಸಿದ್ಧವಾಗಿದೆ ಮತ್ತು ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ಸಂಖ್ಯೆ ಶೇ.3 ರಿಂದ ಶೇ.6 ಕ್ಕೆ ಏರುವ ನಿರೀಕ್ಷೆಯಿದೆ ಎನ್ನಲಾಗಿದೆ.
ನಾಸ್ಕಾಂ ವರದಿಯಲ್ಲೇನಿತ್ತು?
ಕಳೆದ ಜೂನ್ ನಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮ ಸಂಸ್ಥೆ ನಾಸ್ಕಾಂ ಭಾರತದ 5 ಐಟಿ ಸಂಸ್ಥೆಗಳು 2021-22ನೇ ಸಾಲಿನಲ್ಲಿ 96 ಸಾವಿರ ಮಂದಿಗೆ ಉದ್ಯೋಗ ನೀಡಲು ಮುಂದಾಗಿದೆ ಎಂದು ಹೇಳಿತ್ತು. ತಂತ್ರಜ್ಞಾನ ವಿಕಸನ, ಹೆಚ್ಚು ಯಾಂತ್ರೀಕೃತಗೊಂಡಾಗ ಸಾಂಪ್ರದಾಯಿಕ ಐಟಿ ಉದ್ಯೋಗಗಳು ಮತ್ತು ಪಾತ್ರಗಳ ಸ್ವರೂಪಗಳು ಕೂಡ ವಿಕಸನಗೊಳ್ಳುತ್ತವೆ ಹಾಗೂ ಹೊಸ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಐಟಿ ಉದ್ಯಮ ಸಂಸ್ಥೆ ಹೇಳಿತ್ತು. ನಾಸ್ಕಾಂ ಪ್ರಕಾರ ಭಾರತದಲ್ಲಿ ವ್ಯವಹಾರ ಪ್ರಕ್ರಿಯೆ ನಿರ್ವಹಣೆ(ಬಿಪಿಎಂ) ಉದ್ಯಮವು 1.4 ದಶಲಕ್ಷಕ್ಕೂ ಹೆಚ್ಚು ಜನರನ್ನು ಉದ್ಯೋಗದಲ್ಲಿರಿಸಿಕೊಂಡಿದೆ. ಭಾರತದ ಐಟಿ ವಲಯವು ಗ್ರಾಹಕರಿಗೆ ಹೊಸ ಅನುಭವ ನೀಡುವ ಗುರಿ ಹೊಂದಿದೆ.