'ಮೂರು ಶಿಫ್ಟ್‌ನಲ್ಲಿ ಕೆಲಸ ಮಾಡಬೇಕು..' ಇನ್ಫ್ರಾ ಸೆಕ್ಟರ್‌ನ ಉದ್ಯೋಗಿಗಳಿಗೆ ನಾರಾಯಣ ಮೂರ್ತಿ ಮಾತು!

ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಬುಧವಾರ ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗೆ ಮುಂದಿನ 5-10 ವರ್ಷಗಳಲ್ಲಿ ಬೆಂಗಳೂರಿನ ಅಭಿವೃದ್ಧಿಯ ಅಗತ್ಯತೆಗಳ ಕುರಿತು ಚರ್ಚೆ ಮಾಡುವ ವೇಳೆ ನಾರಾಯಣ ಮೂರ್ತಿ ಈ ಮಾತು ಹೇಳಿದ್ದಾರೆ.
 

Infosys co founder Narayana Murthy proposal for infra sector employees Must work 3 shifts san

ಬೆಂಗಳೂರು (ನ.30): ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಅವರು, ಸರ್ಕಾರಗಳು ಆದ್ಯತೆಯ ಮೇಲೆ ಸಂಪೂರ್ಣವಾಗಿ ಮೂಲಸೌಕರ್ಯ ಯೋಜನೆಗಳನ್ನು ಮುಕ್ತಾಯ ಮಾಡುವತ್ತ ಗಮನಹರಿಸಬೇಕು ಎಂದು ಹೇಳಿದ್ದಾರೆ. ಆದ್ದರಿಂದ ಇನ್ಫ್ರಾ ಸೆಕ್ಟರ್‌ನ ಉದ್ಯಮಗಳು (ರಸ್ತೆ, ಸೇತುವೆ, ಸುರಂಗ ಸೇರಿದಂತೆ ಮೂಲಸೌಕರ್ಯ ಕ್ಷೇತ್ರದಲ್ಲಿ ಭಾಗಿಯಾದ ಉದ್ಯೋಗಿಗಳು)  ಒಂದರ ಬದಲು ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗೆ ಬುಧವಾರ ನಡೆದ ಸಂವಾದದಲ್ಲಿ ಮುಂದಿನ 5-10 ವರ್ಷಗಳಲ್ಲಿ ಬೆಂಗಳೂರಿನ ಅಭಿವೃದ್ಧಿಯ ಅಗತ್ಯತೆಗಳ ಕುರಿತು ಚರ್ಚಿಸುವಾಗ ನಾರಾಯಣ ಮೂರ್ತಿ ಈ ಮಾತನ್ನು ಹೇಳಿದ್ದಾರೆ. ತ್ವರಿತ ಮೂಲಸೌಕರ್ಯ ಅಭಿವೃದ್ಧಿಯ ಹೊರತಾಗಿ, ಅವರು ಆಂಗ್ಲ ಮಾಧ್ಯಮ ಶಾಲೆಗಳ ಪ್ರಾಮುಖ್ಯತೆಯನ್ನು ಮತ್ತು ನಗರದ ಪ್ರಗತಿಗೆ ಸರ್ಕಾರಗಳು ತ್ವರಿತವಾಗಿ ನಿರ್ಧಾರ ಮಾಡಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಭಾರತದ ಸಾಫ್ಟ್‌ವೇರ್ ರಫ್ತಿಗೆ ಮಹತ್ವದ ಕೊಡುಗೆ ನೀಡುವ ಬೆಂಗಳೂರು, ಸ್ಥಳೀಯ ಉದ್ಯೋಗದ ಮೇಲಿನ ಮಿತಿಯಿಂದಾಗಿ ಪ್ರತಿಭೆಗಳ ಸಂಪಾದನೆಯಲ್ಲಿ ಸವಾಲುಗಳನ್ನು ಎದುರಿಸುತ್ತಿದೆ.  ಪ್ರತಿಭಾ ಸಂಪನ್ಮೂಲಗಳನ್ನು ಹೆಚ್ಚಿಸಲು ಇಂಗ್ಲಿಷ್ ಮಾಧ್ಯಮ ಶಾಲೆಗಳ ಸ್ಥಾಪನೆಯನ್ನು ನಾರಾಯಣ ಮೂರ್ತಿ ಪ್ರಸ್ತಾಪಿಸಿದರು. ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಮೆಟ್ರೋದಂತಹ ಯೋಜನೆಗಳನ್ನು ತ್ವರಿತಗೊಳಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು ಮತ್ತು ಈ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮೂರು ಶಿಫ್ಟ್‌ನಲ್ಲಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

'ಮೂಲಸೌಕರ್ಯ ಉದ್ಯಮಗಳಲ್ಲಿನ ಉದ್ಯೋಗಿಗಳು ಮೂರು ಪಾಳಿಯಲ್ಲಿ ಕೆಲಸ ಮಾಡಬೇಕು, ಅವರು ಕೇವಲ ಒಂದು ಪಾಳಿಯಲ್ಲಿ ಕೆಲಸ ಮಾಡಬಾರದು ... ಬೆಳಿಗ್ಗೆ 11 ಗಂಟೆಗೆ ಬಂದು ನಂತರ ಸಂಜೆ 5 ಗಂಟೆಗೆ ಹೋಗುತ್ತಾರೆ. ಕನಿಷ್ಠ ಎಲೆಕ್ಟ್ರಾನಿಕ್ ಸಿಟಿ ರಸ್ತೆಯಲ್ಲಿ ಇವರು ಮೂರು ಪಾಳಿಗಳಲ್ಲಿ ಕೆಲಸ ಮಾಡಬೇಕು.  ಅಥವಾ ಈಗಾಗಲೇ ಅವರು ಮಾಡುತ್ತಲೂ ಇರಬಹುದು. ಈ ವಿಚಾರದಲ್ಲಿ ನಾನು ಸಂಪೂರ್ಣವಾಗಿ ತಪ್ಪಾಗಿಯೂ ಇರಬಹುದು" ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

"ಆದರೆ ಹೆಚ್ಚಿನ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಇತರ ರಾಷ್ಟ್ರಗಳಲ್ಲಿ ಜನರು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ನಾನು ಮೂರು ಪಾಳಿಗಳಿಗೆ ಭರವಸೆ ನೀಡಲು ಸಾಧ್ಯವಿಲ್ಲ, ಆದರೆ ನಾನು  ಎರಡು ಪಾಳಿಯ ಉದ್ಯೂಗಕ್ಕೆ ಖಂಡಿತವಾಗಿ ಭರವಸೆ ನೀಡುತ್ತೇನೆ' ಎಂದು ಹೇಳಿದ್ದಾರೆ. "ನಾವು ಆ ಎಲ್ಲಾ ದೇಶಗಳಿಗಿಂತ ಉತ್ತಮವಾಗಿರಲು ಬಯಸುತ್ತೇವೆ. ನಮ್ಮ ಜನರಿಗೆ ಮೂರು ಪಾಳಿಯಲ್ಲಿ ಕೆಲಸ ಮಾಡಿ ಎಂದು ನಾವು ಏಕೆ ಹೇಳಬಾರದು? ಮೂರು ಪಾಳಿಗಳಲ್ಲಿ ಕೆಲಸ ಮಾಡಬೇಕಾದಲ್ಲಿ ಉದ್ಯೋಗಿಗಳಿಗೆ ಏನು ಬೇಕು ಅನ್ನೋದನ್ನು ಕೇಳಿ. ಅದನ್ನು ಅವರಿಗೆ ಒದಗಿಸಿ. ಇದನ್ನು ಮಾಡಲು ನಾವು ಸಾಧ್ಯವಾದಲ್ಲಿ, ಚೀನಾಕ್ಕಿಂತ ವೇಗವಾಗಿ ಬೆಳೆಯಲು ಭಾರತಕ್ಕೆ ಏಕೆ ಸಾಧ್ಯವಿಲ್ಲ ಎನ್ನುವುದನ್ನು ನಾನು ಕೇಳುತ್ತೇನೆ' ಎಂದಿದ್ದಾರೆ.

 

ಐಟಿ ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿದೆ: ಇನ್ಫೋಸಿಸ್‌ ನಾರಾಯಣ ಮೂರ್ತಿ!

ಕಳೆದ ತಿಂಗಳು, ನಾರಾಯಣ ಮೂರ್ತಿ ಅವರು ರಾಷ್ಟ್ರದ ಯುವಕರು ವಾರದಲ್ಲಿ 70 ಗಂಟೆಗಳ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳುವ ಮೂಲಕ ವ್ಯಾಪಕ ಚರ್ಚೆಗೆ ಕಾರಣರಾಗಿದ್ದರು. ನಾರಾಯಣ ಮೂರ್ತಿ ಜಾಗತಿಕ ಮಟ್ಟದಲ್ಲಿ ಭಾರತದ ತುಲನಾತ್ಮಕವಾಗಿ ಕಡಿಮೆ ಕೆಲಸದ ಉತ್ಪಾದಕತೆಯನ್ನು ಎತ್ತಿ ತೋರಿಸಿದ್ದಾರೆ. ಮತ್ತು ಇತ್ತೀಚಿನ ದಶಕಗಳಲ್ಲಿ ಇತರ ರಾಷ್ಟ್ರಗಳು ಸಾಧಿಸಿದ ಯಶಸ್ಸಿಗೆ ಹೊಂದಿಕೆಯಾಗಲು ದೇಶದ ಕೆಲಸದ ಸಂಸ್ಕೃತಿಯಲ್ಲಿ ಪರಿವರ್ತಕ ಬದಲಾವಣೆಯ ಅಗತ್ಯವನ್ನು ತಿಳಿಸಿದ್ದಾರೆ.

ವಾರಕ್ಕೆ 70 ಗಂಟೆ ಕೆಲಸಕ್ಕೆ ಬೆಂಬಲ; ಪ್ರಧಾನಿ ಕೂಡ ದಿನಕ್ಕೆ 16 ಗಂಟೆ ಕೆಲಸ ಮಾಡ್ತಾರೆ ಎಂದ ಸಜ್ಜನ್‌ ಜಿಂದಾಲ್‌!

Latest Videos
Follow Us:
Download App:
  • android
  • ios