Asianet Suvarna News Asianet Suvarna News

ಕಾಂಗ್ರೆಸ್‌ ಗ್ಯಾರಂಟಿ: ಯುವಕರಿಗೆ ಉದ್ಯೋಗ ನೀಡಿ, ಸಿದ್ದು ಸರ್ಕಾರಕ್ಕೆ ಸಿರಿಗೆರೆ ಶ್ರೀಗಳ ಸಲಹೆ

ಸರಕಾರದ ಈ ಗ್ಯಾರಂಟಿಗಳ ಈಡೇರಿಕೆಗೆ 56 ಸಾವಿರ ಕೋಟಿ ಹಣ ಬೇಕಾಗುತ್ತದೆ. ಹಾಗಾಗಿ ಯುವಕರಿಗೆ ಏನಾದ್ರೂ ಕೆಲಸ ಅಸೈನ್ ಮಾಡಿ. ಗ್ರಾಮ ಹಾಗೂ ಪಟ್ಟಣ ಮಟ್ಟದಲ್ಲಿ ಯುವಕರಿಗೆ ಉದ್ಯೋಗ ನೀಡಿ ಅಂತ ನೂತನ ಸಚಿವ ಸಚಿವ ಈಶ್ವರ ಖಂಡ್ರೆಗೆ ಸಲಹೆ ನೀಡಿದ ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು

Give Employment to the Youth Shivamurthy Shivacharya Swamiji Advice to the Government grg
Author
First Published May 31, 2023, 9:27 AM IST

ಚಿತ್ರದುರ್ಗ(ಮೇ.31): ನಿರುದ್ಯೋಗಿ ಯುವಕರಿಗೆ 3000 ಹಣ ನೀಡಿ, ಆದ್ರೆ ಅವರಿಂದ ಸರಕಾರ ಕೆಲಸ ಪಡೆಯುವಂತಾಗಬೇಕು. ಇದರಿಂದ ಯುವಕರು ಕೆಲಸ ಮಾಡುವಂತಾಗಬೇಕು. ಸರಕಾರದ ಈ ಗ್ಯಾರಂಟಿಗಳ ಈಡೇರಿಕೆಗೆ 56 ಸಾವಿರ ಕೋಟಿ ಹಣ ಬೇಕಾಗುತ್ತದೆ. ಹಾಗಾಗಿ ಯುವಕರಿಗೆ ಏನಾದ್ರೂ ಕೆಲಸ ಅಸೈನ್ ಮಾಡಿ . ಗ್ರಾಮ ಹಾಗೂ ಪಟ್ಟಣ ಮಟ್ಟದಲ್ಲಿ ಯುವಕರಿಗೆ ಉದ್ಯೋಗ ನೀಡಿ ಅಂತ ನೂತನ ಸಚಿವ ಸಚಿವ ಈಶ್ವರ ಖಂಡ್ರೆಗೆ ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಸಲಹೆ ನೀಡಿದ್ದಾರೆ. 

ನಿರುದ್ಯೋಗಿ ಯುವಕರಿಗೆ 3000 ನಿರುದ್ಯೋಗ ಭತ್ಯೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿರಿಗೆರೆ ಶ್ರೀಗಳು, ಈ ಹಣ ಟ್ಯಾಕ್ಸ್ ಪೇಯರ್ಸ್ ಹಣವಾಗಿದೆ. ಹೀಗಾಗಿ ನಾವು ಈ ಸಲಹೆಗಳನ್ನ ನೀಡಿದ್ದೇವೆ ಅಂತ ಸರ್ಕಾರಕ್ಕೆ ತಿಳಿಸಿ ಅಂತ ಹೇಳಿದ್ದಾರೆ. 

ತಾಳ್ಮೆಯಿಂದ ಇರಿ, ಗ್ಯಾರಂಟಿ ಭರವಸೆ ಈಡೇರಿಸುತ್ತೇವೆ: ಲಕ್ಷ್ಮೀ ಹೆಬ್ಬಾಳ್ಕರ್

ಯುವಕರು ಮುಂದೆ ನಾವು ಸರಕಾರಿ ನೌಕರರೆಂದು ಭಾವಿಸಬಾರದು. ಅವರು ಮುಂದೆ ಕೆಲಸ ಖಾಯಂ ಮಾಡಿ ಅಂತಾರೆ. ಈ ವಿಚಾರ ಸದನದಲ್ಲಿ ಪ್ರಸ್ತಾಪ ಮಾಡಿ ಅಂತ ಸಿರಿಗೆರೆ ಮಠದ ಶ್ರೀ ತಿಳಿಸಿದ್ದಾರೆ. ಸರಕಾರದ ಮಟ್ಟದಲ್ಲಿ ವಿಚಾರ ಪ್ರಸ್ತಾಪ ಮಾಡುವುದಾಗಿ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ. 

ಈಶ್ವರ ಖಂಡ್ರೆ ಅವರು ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಮಠಕ್ಕೆ ಆಗಮಿಸಿ ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಆಶೀರ್ವಾದವನ್ನ ಪಡೆದುಕೊಂಡಿದ್ದಾರೆ. 

Follow Us:
Download App:
  • android
  • ios