Asianet Suvarna News Asianet Suvarna News

GitHub Layoffs ಇಂಡಿಯಾ ಗಿಟ್‌ಹಬ್‌ನಲ್ಲಿದ್ದ ಎಲ್ಲಾ ಇಂಜಿನಿಯರ್‌ಗಳ ವಜಾ!

ವಿಶ್ವದಾದ್ಯಂತ ಸಾಫ್ಟ್‌ವೇರ್ ಸಂಸ್ಥೆಗಳು ಉದ್ಯೋಗಿಗಳನ್ನು ವಜಾ ಮಾಡುತ್ತಿರುವ ನಡುವೆ ಮೈಕ್ರೋಸಾಫ್ಟ್‌ ಮಾಲೀಕತ್ವದ ಗಿಟ್‌ಹಬ್, ಭಾರತದಲ್ಲಿದ್ದ ತನ್ನ ಸಂಪೂರ್ಣ ಇಂಜಿನಿಯರಿಂಗ್‌ ಟೀಮ್‌ಅನ್ನೇ ವಜಾ ಮಾಡಿದೆ.
 

GitHub Owned by Microsoft Lays Off Entire Engineering Team In India san
Author
First Published Mar 28, 2023, 7:56 PM IST

ನವದೆಹಲಿ (ಮಾ.28): ಓಪನ್ ಸೋರ್ಸ್ ಡೆವಲಪರ್ ವೇದಿಕೆಯಾಗಿದ್ದ ಗಿಟ್‌ಹಬ್, ಭಾರತದಲ್ಲಿದ್ದ ತನ್ನ ಸಂಪೂರ್ಣ ಎಂಜಿನಿಯರಿಂಗ್ ತಂಡವನ್ನು ವಜಾ ಮಾಡಿದೆ. ಈ ತಂಡದಲ್ಲಿದ್ದ ಎಲ್ಲಾ ಇಂಜಿನಿಯರ್‌ಗಳು ಕೆಲಸ ಕಳೆದುಕೊಂಡಿದ್ದಾರೆ. ಕಂಪನಿಯ ಮರುಸಂಘಟನೆಯ ಯೋಜನೆಯ ಭಾಗವಾಗಿ ಗಿಟ್‌ಹಬ್‌ ಈಗಾಗಲೇ ಅಮೆರಿಕದಲ್ಲೂ ಸಾಕಷ್ಟು ಉದ್ಯೋಗಿಗಳನ್ನು ವಜಾ ಮಾಡಿದೆ. ಅಮೆರಿಕ ನಂತರ ಈ ಕಂಪನಿಯ 2ನೇ ಅತೀದೊಡ್ಡ ಡೆವಲಪರ್‌ಗಳ ಸಮುದಾಯ ಭಾರತದಲ್ಲಿತ್ತು. ಈಗ ಇಡೀ ತಂಡವನ್ನು ಗಿಟ್‌ಹಬ್‌ ವಜಾ ಮಾಡಿದ್ದು, ಕನಿಷ್ಠ 100 ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ ಎಂದು ಅಂದಾಜು ಮಾಡಲಾಗಿದೆ. ವಿಶ್ವದಾದ್ಯಂತ ಇಂಜಿನಿಯರಿಂಗ್‌/ಡೆವಲಪರ್‌ ಕ್ಷೇತ್ರಗಳಲ್ಲಿ ಜಾಗತಿಕ ಟೆಕ್‌ ವಜಾಗಳನ್ನು ಟ್ರ್ಯಾಕ್‌ ಮಾಡುವ ಟೆಕ್‌ ಬರಹಗಾರ ಗೆರ್ಗೆಲಿ ಒರೊಸ್ಜ್, ಗಿಟ್‌ಹಬ್‌ ಭಾರತದಲ್ಲಿನ ತನ್ನ ತಂಡವನ್ನು ಒಮ್ಮೆಲೆ ವಜಾ ಮಾಡಿದೆ ಎಂದು ಬರೆದುಕೊಂಡಿದ್ದಾರೆ. "ನಾವು 100 ಇಂಜಿನಿಯರ್‌ಗಳ ಬಗ್ಗೆ ಮಾತನಾಡುತ್ತಿದ್ದೇವೆ. ತಂಡವು ಇತರ ಸ್ಥಳಗಳಿಗಿಂತ ಚಿಕ್ಕದಾಗಿದೆ, ಬಹಳ ಕಡಿಮೆ ಆದ್ಯತೆಯ ವಿಷಯವನ್ನು ಹೊಂದಿರುವುದರಿಂದ ಇದನ್ನು ಮಾಡಲಾಗಿದೆ" ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

"(ಈಗ ಮಾಜಿ) ಗಿಟ್‌ಹಬ್ ಇಂಡಿಯಾ ಇಂಜಿನಿಯರ್‌ಗಳೊಂದಿಗೆ ಮಾತುಕತೆ ನಡೆಸಿದ ನಂತರ ವಜಾಗೊಂಡಿರುವುದನ್ನು ದೃಢಪಡಿಸಿರುವುದಾಗಿ ಒರೊಸ್ಜ್ ಹೇಳಿದ್ದಾರೆ. ಗಿಟ್‌ಹಬ್‌ನ ವಕ್ತಾರರು, ಫೆಬ್ರವರಿಯಲ್ಲಿ ಹಂಚಿಕೊಂಡ ಮರುಸಂಘಟನೆಯ ಯೋಜನೆಯ ಭಾಗವಾಗಿ, "ಕಾರ್ಯಪಡೆಯ ಕಡಿತವನ್ನು ಇಂದು ಮಾಡಲಾಗಿದೆ" ಎಂದು ತಿಳಿಸಿದ್ದಾರೆ.

ಇದು "ಅಲ್ಪಾವಧಿಯಲ್ಲಿ ನಮ್ಮ ವ್ಯವಹಾರವನ್ನು ರಕ್ಷಿಸಲು ಕಷ್ಟಕರವಾದ ಆದರೆ ಅಗತ್ಯವಾದ ನಿರ್ಧಾರಗಳಾಗಿವೆ. ಅದಲ್ಲದೆ, ನಮ್ಮ ಮರುಜೋಡಣೆಗಳ ಭಾಗವಾಗಿದೆ ಮತ್ತು ನಮ್ಮ ದೀರ್ಘಾವಧಿಯ ಕಾರ್ಯತಂತ್ರದಲ್ಲಿ ಹೂಡಿಕೆ ಮಾಡುವ ಸಾಮರ್ಥ್ಯವನ್ನು ನಮಗೆ ನೀಡುತ್ತದೆ" ಎಂದು ಕಂಪನಿ ವಕ್ತಾರ ತಿಳಿಸಿದ್ದಾರೆ.

ಮೈಕ್ರೋಸಾಫ್ಟ್ ಒಡೆತನದ ಓಪನ್ ಸೋರ್ಸ್ ಡೆವಲಪರ್ ಪ್ಲಾಟ್‌ಫಾರ್ಮ್ ಫೆಬ್ರವರಿಯಲ್ಲಿ ಕಂಪನಿಯ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ತನ್ನ ಉದ್ಯೋಗಿಗಳ ಶೇಕಡಾ 10 ರಷ್ಟು ವಜಾಗೊಳಿಸುವುದಾಗಿ ಘೋಷಣೆ ಮಾಡಿತ್ತು. ವಜಾಗಳನ್ನು ಘೋಷಣೆ ಮಾಡುವ ಮುನ್ನ ಜಿಟ್‌ಹಬ್‌ ಸುಮಾರು 3,000 ಉದ್ಯೋಗಿಗಳನ್ನು ಹೊಂದಿತ್ತು.

18000 ಸಿಬ್ಬಂದಿ ತೆಗೆದ ಅಮೆಜಾನ್‌ನಿಂದ ಮತ್ತೆ 9000 ಹುದ್ದೆ ಕಡಿತ

ಉದ್ಯೋಗಿಗಳಿಗೆ ಕಳುಹಿಸಿರುವ ಈಮೇಲ್‌ನಲ್ಲಿ ಗಿಟ್‌ಹಬ್‌ ಸಿಇಒ ಥಾಮಸ್ ಡೊಹ್ಮ್ಕೆ ಅವರು ಪ್ರತಿ ವ್ಯವಹಾರಕ್ಕೂ ನಿರಂತರ ಬೆಳವಣಿಗೆ ಮುಖ್ಯ ಎಂದು ಹೇಳಿದ್ದಾರೆ. "ಇಂದು, ನಾವು 100 ಮಿಲಿಯನ್ ಡೆವಲಪರ್‌ಗಳ ನೆಲೆಯಾಗಿದ್ದೇವೆ ಮತ್ತು ನಾಳಿನ ಜಗತ್ತಿಗೆ ನಾವು ಡೆವಲಪರ್-ಮೊದಲ ಎಂಜಿನಿಯರಿಂಗ್ ವ್ಯವಸ್ಥೆಯಾಗಬೇಕು. ನಾವು ನಮ್ಮ ಗ್ರಾಹಕರಿಗೆ ಗಿಟ್‌ಹಬ್‌ನೊಂದಿಗೆ ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು ಸಹಾಯ ಮಾಡುವುದನ್ನು ಮುಂದುವರಿಸಬೇಕು, ಅವರ ಕ್ಲೌಡ್ ಅಳವಡಿಕೆ ಪ್ರಯಾಣವನ್ನು ವೇಗಗೊಳಿಸುವುದು ಮತ್ತು ಸರಳಗೊಳಿಸುವುದು. ಪ್ರತಿದಿನ ಅವರನ್ನು ಬೆಂಬಲಿಸುವುದು ಮುಖ್ಯವಾಗಬೇಕು' ಎಂದು ಅವರು ಬರೆದಿದ್ದಾರೆ.

Meta Layoffs: ಎರಡನೇ ಸುತ್ತಿನಲ್ಲಿ 10,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಮೆಟಾ!

"ದುರದೃಷ್ಟವಶಾತ್, 2023ರ ಹಣಕಾಸು ವರ್ಷದ  ಅಂತ್ಯದ ವೇಳೆಗೆ ಗಿಟ್‌ಹಬ್‌ನ  ಉದ್ಯೋಗಿಗಳ ಶೇಕಡಾ 10 ರಷ್ಟು ಕಡಿತಕ್ಕೆ ಕಾರಣವಾಗುವ ಬದಲಾವಣೆಗಳನ್ನು ಒಳಗೊಂಡಿರುತ್ತದೆ. ನಾನು ಜನವರಿ 18 ರಂದು ಘೋಷಿಸಿದ ನೇಮಕಾತಿ ವಿರಾಮವು ಮುಂದಿನ ಘೋಷಣೆಯವರೆಗೂ ಜಾರಿಯಲ್ಲಿದೆ ಎಂದು ಅವರು ಬರೆದಿದ್ದಾರೆ. ಓಪನ್ ಸೋರ್ಸ್ ಡೆವಲಪರ್ ಪ್ಲಾಟ್‌ಫಾರ್ಮ್ ಜಾಗತಿಕವಾಗಿ 100 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಭಾರತದಲ್ಲಿ 10 ಮಿಲಿಯನ್‌ ಡೆವಲಪರ್‌ಗಳನ್ನು ಈ ಕಂಪನಿ ದಾಡಿದೆ. ಗಿಟ್‌ಹಬ್‌ನಲ್ಲಿ ಅಮೆರಿಕ ಬಳಿಕ 2ನೇ ಅತೀದೊಡ್ಡ ಡೆವಲಪರ್‌ ಸಮುದಾಯ ಭಾರತವಾಗಿದೆ.

Follow Us:
Download App:
  • android
  • ios