ಏನೂ ಮಾಡದೇ ಸಿಗುತ್ತೆ ಸಂಬಳ ! ಭಿನ್ನವಾಗಿದೆ ಈತನ ಗಳಿಕೆ ಮೂಲ

ಜನರ ಅವಶ್ಯಕತೆಗೆ ತಕ್ಕಂತೆ ಕೆಲಸ ಮಾಡಿದ್ರೆ ಬ್ಯುಸಿನೆಸ್ ಸಕರ್ಸ್ ಆಗುವ ಜೊತೆಗೆ ಲಾಭವೂ ಹೆಚ್ಚಾಗುತ್ತದೆ. ಈ ಜಪಾನ್ ಹುಡುಗ ಕೆಲ್ಸ ಮಾಡ್ದೆ ಹಣ ಸಂಪಾದನೆ ಮಾಡ್ತಿದ್ದಾನೆ. ಡು ನಥಿಂಗ್ ಗೈ ಸಂಪಾದನೆ ವರ್ಷಕ್ಕೆ ಕೋಟಿ ಮೇಲಿದೆ. 
 

Do nothing Guy earns more than 6 crores in a year roo

ಜನರು ಮಾಡೋಕೆ ಕೆಲಸ ಇಲ್ಲ, ನಿರುದ್ಯೋಗ (Unemployment) ಅಂತ ಸರ್ಕಾರದ ಮೇಲೆ ಹೊಣೆ ಹಾಕಿ ಮನೆಯಲ್ಲಿ ಆರಾಮಾಗಿ ಕುಳಿತುಕೊಳ್ತಾರೆ. ಬುದ್ದಿ ಇದ್ರೆ ಎಲ್ಲಿ, ಏನು ಬೇಕಾದ್ರೂ ಮಾಡ್ಬಹುದು. ಇದಕ್ಕೆ ಜಪಾನ್ ಈ ವ್ಯಕ್ತಿ ಉತ್ತಮ ನಿದರ್ಶನ. ಈತ ಕೆಲಸ ಅಂತ ಏನೂ ಮಾಡೋದಿಲ್ಲ. ಹಾಗಂತ ನಿರುದ್ಯೋಗಿ ಅಲ್ಲ. ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುವ ಈತ ವರ್ಷಕ್ಕೆ 6 ಕೋಟಿಗೂ ಹೆಚ್ಚು ದುಡಿತಾನೆ. ಈತನ ಗಳಿಕೆ ಮೂಲ ಭಿನ್ನವಾಗಿದ್ರೂ ಇಂಟರೆಸ್ಟಿಂಗ್ ಆಗಿದೆ. 

ಜಪಾನ್ (Japan) ನಿವಾಸಿ ಶೋಜಿ ಮೊರಿಮೊಟೊ  (Shoji Morimoto ) ಈತನ ಹೆಸರು. ಅವನನ್ನು  ಜಪಾನ್‌ನಲ್ಲಿ  ಡು ನಥಿಂಗ್ ಗೈ (Do Nothing Guy) ಎಂದೇ ಕರೆಯುತ್ತಾರೆ. ಆತ ತನ್ನದೇ ಸ್ಟೈಲ್ ನಲ್ಲಿ ಹಣ ಸಂಪಾದನೆ ಮಾಡ್ತಾನೆ. ಜನರ ಜೊತೆ ಸಮಯ ಕಳೆಯೋದೇ ಆತನ ಉದ್ಯೋಗ. ಅದಕ್ಕೆ ದೊಡ್ಡ ಮೊತ್ತವನ್ನು ಸಂಭಾವನೆ ರೀತಿ ಪಡೆಯುತ್ತಾನೆ. ಆತ ಜಪಾನ್ ನಲ್ಲಿ ಎಷ್ಟು ಪ್ರಸಿದ್ಧಿ ಪಡೆದಿದ್ದಾನೆ ಅಂದ್ರೆ ಆತನ ಅಪಾಯಿಂಟ್ಮೆಂಟ್ ಗೆ ಜನ ಕಾಯ್ತಾರೆ.

ನಿದ್ರೆ ಮಾಡಿದ್ರೆ 9 ಲಕ್ಷ ಸಿಗುತ್ತೆ, ಸಂಪಾದಿಸಿದ ಬೆಂಗಳೂರಿನ ಮಹಿಳೆ, ಅಷ್ಟಕ್ಕೂ ಸ್ಲೀಪ್‌ ಇಂಟರ್ನ್ಶಿಪ್‌ ಅಂದ್ರೇನು?

ಶೋಜಿ ಮೊರಿಮೊಟೊ, ಜನರಿಗೆ ಭಾವನಾತ್ಮಕ ಬೆಂಬಲ ನೀಡ್ತಾನೆ. ಅವರ ಒಂಟಿತನವನ್ನು ದೂರ ಮಾಡುವ ಕೆಲಸವನ್ನು ಶೋಜಿ ಮೊರಿಮೊಟೊ ಮಾಡ್ತಾನೆ. ಒಂಟಿಯಾಗಿರುವ ವ್ಯಕ್ತಿಗಳ ಜೊತೆ ಓಡಾಡುವ ಶೋಜಿಯನ್ನು ಭೇಟಿಯಾಗಿ, ಆತನ ಕಾಂಟ್ರೆಕ್ಟ್ ತೆಗೆದುಕೊಂಡು ಹಣ ನೀಡ್ತಾರೆ. ಶೋಜಿ ಮೊರಿಮೊಟೊ ಜನರ ಜೊತೆ ಲಂಚ್ ಗೆ ಹೋಗ್ತಾನೆ, ಒಂದ್ಕಡೆ ಕುಳಿತುಕೊಂಡು ಅವರ ಮಾತು ಕೇಳ್ತಾನೆ. ಆದ್ರೆ ಯಾವುದೇ ಸಲಹೆಯನ್ನು ಅವರಿಗೆ ನೀಡೋದಿಲ್ಲ. ಅವರ ಯಾವುದೇ ಕೆಲಸವನ್ನು ಮಾಡೋದಿಲ್ಲ. ಅವರ ಜೊತೆ ಯಾವುದೇ ದೈಹಿಕ ಕೆಲಸದಲ್ಲಿ ಪಾಲ್ಗೊಳ್ಳೋದಿಲ್ಲ. ಕೇವಲ ಶೋಜಿ ಪ್ರೆಸೆನ್ಸ್ ಮಾತ್ರ ಜನರು ಬಯಸ್ತಾರೆ. 

ಏನೂ ಮಾಡದಿರುವುದೇ ನನ್ನ ಕೆಲಸ ಎಂದು ಶೋಜಿ ಮೊರಿಮೊಟೊ ಹೇಳಿದ್ದಾನೆ. ಜಪಾನ್ ನಲ್ಲಿ ಶೋಜಿ ಮೊರಿಮೊಟೊ ಈ ಕೆಲಸವೇ ಅವನ ಪ್ರಸಿದ್ಧ ಹೆಚ್ಚಿಸಿದೆ. ಸೋಶಿಯಲ್ ಮೀಡಿಯಾದಲ್ಲೂ ಆತನ ಚರ್ಚೆ ಆಗ್ತಿರುತ್ತದೆ. ಶೋಜಿ ಮೊರಿಮೊಟೊ ಕೆಲಸಕ್ಕೆ ಸೋಶಿಯಲ್ ಮೀಡಿಯಾದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಶೋಜಿ ಮೊರಿಮೊಟೊ ಸೇವೆಯನ್ನು ಜನರು ಇಷ್ಟಪಟ್ಟಿದ್ದಾರೆ. 

ಎಲ್ಲ ಆಫರ್ ಶೋಜಿ ಮೊರಿಮೊಟೊ ಒಪ್ಪಿಕೊಳ್ಳೋದಿಲ್ಲ. ತಮಗೆ ಖುಷಿ ನೀಡುವುದಾದ್ರೆ ಮಾತ್ರ ಅವರು ಕಾಂಟ್ರೆಕ್ಟ್ ಗೆ ಸಹಿ ಹಾಕ್ತಾರೆ. ಶಾರೀರಿಕ ಸಂಬಂಧ ಬೆಳೆಸುವುದನ್ನು ಅವರು ನಿರಾಕರಿಸುತ್ತಾರೆ. ಸಂಗೀತದಲ್ಲಿ ಅವರಿಗೆ ಹೆಚ್ಚು ಮಾಹಿತಿ ಇರದ ಕಾರಣ ಶೋಜಿ ಮೊರಿಮೊಟೊ, ಸಂಗೀತ ಕಛೇರಿಗೆ ಹೋಗೋದಿಲ್ಲ. ನಮ್ಮ ಕೆಲಸ ಬಗ್ಗೆ ಹೆಮ್ಮೆಪಡ್ತಾರೆ ಶೋಜಿ ಮೊರಿಮೊಟೊ. ಒಂಟಿಯಾಗಿರುವ ಜನರಿಗೆ ನನ್ನ ಪ್ರೆಸೆನ್ಸ್ ಖುಷಿ ನೀಡುತ್ತದೆ. ಒಬ್ಬರನ್ನು ಸಂತೋಷವಾಗಿಡೋದು ನನ್ನ ಕೆಲಸ ಎನ್ನುತ್ತಾರೆ ಶೋಜಿ ಮೊರಿಮೊಟೊ.

ಶೇ.51ರಷ್ಟು ಭಾರತೀಯರಿಂದ ವಾರಕ್ಕೆ 49 ಗಂಟೆಗಿಂತಲೂ ಅಧಿಕ ಕೆಲಸ: ಕಾರ್ಮಿಕ ಸಂಸ್ಥೆ ವರದಿ

ಜಪಾನ್ ಜನರಿಗೆ ನೆರವಾದ ಶೋಜಿ ಮೊರಿಮೊಟೊ : ಜಪಾನ್ ನಲ್ಲಿ ಒಂಟಿಯಾಗಿರು ಜನರ ಸಂಖ್ಯೆ ಹೆಚ್ಚಾಗಿದೆ. ವರದಿ ಒಂದರ ಪ್ರಕಾರ, ಮನೆಯಲ್ಲಿ ಒಂಟಿಯಾಗಿದ್ದ ಸುಮಾರು 40 ಸಾವಿರ ಜನರು ಸಾವನ್ನಪ್ಪಿದ್ದಾರೆ. 4 ಸಾವಿರಕ್ಕೂ ಹೆಚ್ಚು ಜನರ ಸಾವು, ಅವರು ಸತ್ತ 1 ತಿಂಗಳ ನಂತ್ರ ಗೊತ್ತಾಗಿದೆ. ಜಪಾನ್ ನಲ್ಲಿ ವೃದ್ಧರ ಸಂಖ್ಯೆ ಜಾಸ್ತಿ ಇದೆ. ಅವರೆಲ್ಲ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಅವರ ವೃದ್ಧಾಪ್ಯದಲ್ಲಿ ಜೊತೆಗಿರುವ ಜನರಿಲ್ಲ. ಮನೆಯಲ್ಲಿ ಒಬ್ಬರೇ ಇರುವ ಕಾರಣ ಅವರು ಸಾವನ್ನಪ್ಪಿದ್ರೂ ಇತರರಿಗೆ ಇದು ತಿಳಿಯೋದಿಲ್ಲ. ಶೋಜಿ ಮೊರಿಮೊಟೊ, ಒಂಟಿ ಜನರ ಜೊತೆ ಕಾಲ ಕಳೆಯುತ್ತಿರೋದು ಅನೇಕರಿಗೆ ಅನುಕೂಲವಾಗಿದೆ. 

Latest Videos
Follow Us:
Download App:
  • android
  • ios