ಬೆಂಗಳೂರು, (ಫೆ.07): ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ರಿಸರ್ಚ್ ಇನ್‍ಸ್ಟಿಟ್ಯೂಟ್ (ಸಿಇಇಆರ್‍ಐ) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 38 ಪ್ರಾಜೆಕ್ಟ್ ಸಿಬ್ಬಂದಿಗಳನ್ನು ತಾತ್ಕಾಲಿಕ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು 10.2.2021ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುದ್ದೆ, ಸಂಖ್ಯೆ ವಿವರ
* ಪ್ರಾಜೆಕ್ಟ್ ಅಸೋಸಿಯೇಟ್-ಐಐ - 5
* ಪ್ರಾಜೆಕ್ಟ್ ಅಸೋಸಿಯೇಟ್-ಐಐ ಪಿಐಯು - 1
* ಪ್ರಾಜೆಕ್ಟ್ ಅಸೋಸಿಯೇಟ್-ಐ - 22
* ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ - 1
* ಸೀನಿಯರ್ ರಿಸರ್ಚ್ ಫೆಲೋ - 1
* ಜೂನಿಯರ್ ರಿಸರ್ಚ್ ಫೆಲೋ - 2
* ಪ್ರಾಜೆಕ್ಟ್ ಅಸಿಸ್ಟೆಂಟ್ - 6

ಶೈಕ್ಷಣಿಕ ಅರ್ಹತೆ: ಎಲೆಕ್ಟ್ರಾನಿಕ್ಸ್/ ಇಸಿಇ/ ಎಲೆಕ್ಟ್ರಾನಿಕ್ಸ್ ಆಯಂಡ್ ಇನ್‍ಸ್ಟ್ರುಮೆಂಟೇಷನ್/ ಮೆಕ್ಟ್ರೊನಿಕ್ಸ್/ ಫಿಜಿಕ್ಸ್, ವಿಎಲ್‍ಎಸ್‍ಐ ಡಿಸೈನ್/ ಮೈಕ್ರೋಎಲೆಕ್ಟ್ರೊನಿಕ್ಸ್/ ಎಂಬೆಡೆಡ್ ಸಿಸ್ಟಂ/ ಕಂಪ್ಯೂಟರ್ ಸೈನ್ಸ್, ರೊಬೋಟಿಕ್ಸ್/ ಮೆಕ್ಟ್ರೊನಿಕ್ಸ್/ ಇಇಇ/ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಆಯಂಡ್ ಕಮ್ಯುನಿಕೇಷನ್, ಎಲೆಕ್ಟ್ರಿಕಲ್, ಫುಡ್ ಟೆಕ್ನಾಲಜಿ, ಅಗ್ರಿಕಲ್ಚರ್ ಇಂಜಿನಿಯರಿಂಗ್, ಬಯೋಕೆಮಿಕಲ್, ಬಯೋಟೆಕ್ನಾಲಜಿ, ನ್ಯಾನೋ ಟೆಕ್ನಾಲಜಿ/ ಸೆಮಿಕಂಡಕ್ಟರ್‍ನಲ್ಲಿ ಬಿಇ, ಬಿ.ಟೆಕ್, ಎಂಇ, ಎಂ.ಟೆಕ್, ಡಿಪ್ಲೋಮಾ ಪದವಿ ಪಡೆದಿರಬೇಕು. ನೆಟ್, ಗೇಟ್, ಪಿಎಚ್‍ಡಿ ಪಡೆದವರಿಗೆ ಮೊದಲ ಆದ್ಯತೆ.

ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 35 ರಿಂದ 50 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 20,000 ರೂ.ನಿಂದ 42,000 ವರೆಗೆ ವೇತನ ಇದ್ದು, ಮನೆ ಬಾಡಿಗೆ ಭತ್ಯೆ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನದ ದಿನಾಂಕ, ಸ್ಥಳ ಮತ್ತು ಸಮಯವನ್ನು ಮೇಲ್ ಮೂಲಕ ತಿಳಿಸಲಾಗುವುದು.

ಅಧಿಸೂಚನೆಗೆ: https://bit.ly/3pRY39I
ಮಾಹಿತಿಗೆ: https://www.ceeri.res.in