Asianet Suvarna News Asianet Suvarna News

ಕೆಲಸ ಬಿಡಲೇ ಬೇಕೆ? ಹಾಗಿದ್ದರೆ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ

ಬಹುದಿನಗಳಿಂದ ಮಾಡುತ್ತಿರುವ ಉದ್ಯೋಗವನ್ನು ತೊರೆದು ನಮ್ಮದೇ ಆದ ಹಾದಿಯಲ್ಲಿ ನಡೆಯುವ ಸಮಯ ಒಂದಲ್ಲ ಒಂದು ದಿನ ಬರುತ್ತದೆ. ಆಗ ನೀವು ಖಂಡಿತವಾಗಿಯೂ ಈ ಕೆಳಗಿನ ಪ್ರಶ್ನೆಗಳನ್ನು ನಿಮ್ಮೊಳಗೇ ಕೇಳಿಕೊಂಡು, ಉತ್ತರ ಪಡೆದು ಮುಂದುವರಿಯಿರಿ.

Before quitting your job, ask yourself these questions
Author
Bengaluru, First Published Aug 15, 2021, 2:56 PM IST
  • Facebook
  • Twitter
  • Whatsapp

ನಿಮ್ಮ ವೃತ್ತಿಜೀವನದಲ್ಲಿ ಒಂದು ಸಮಯ ಬರುತ್ತದೆ- ನಿಮ್ಮ ಸ್ವಂತ ಉದ್ಯಮವನ್ನು ಸ್ಥಾಪಿಸುವುದು, ಸಹಭಾಗಿತ್ವದಲ್ಲಿ ಆರಂಭಿಸುವುದು, ಸುರಕ್ಷಿತ ಕಚೇರಿ ಕೆಲಸ ಬಿಟ್ಟು ಕನ್ಸಲ್ಟೇಶನ್ ಅಥವಾ ಫ್ರೀಲ್ಯಾನ್ಸ್ ಕೆಲಸ ಆರಂಭಿಸುವುದು- ಹೀಗೆ. ನೀವು ಉತ್ತಮ ಹಾದಿಯ ಕಡೆ ಹೋಗುವ ಚಿಂತನೆ ನಡೆಸಿದ್ದೀರಾದರೂ, ಇದು ಬಹಳಷ್ಟು ಅಪಾಯಗಳನ್ನೂ ಒಳಗೊಂಡಿರುತ್ತದೆ. ನೀವು ಅತ್ಯಂತ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಮತ್ತು ಯಶಸ್ಸಿನ ಭರವಸೆ ಆ ಕ್ಷಣದಲ್ಲಿ ಇರುವುದಿಲ್ಲ. ಅಥವಾ, ವಿಪರೀತ ಕೆಲಸದ ಒತ್ತಡ, ವಿಷಪೂರಿತ ಕೆಲಸದ ವಾತಾವರಣ, ಭಾವನಾತ್ಮಕ ಒತ್ತಡ ಇತ್ಯಾದಿಗಳ ಕಾರಣದಿಂದಾಗಿ ನೀವು ಈಗಿನ ಜಾಬ್ ಬಿಟ್ಟುಬಿಡುವ ಬಗ್ಗೆ ಯೋಚಿಸುತ್ತಿರಬಹುದು. ಆದರೂ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಿ.

1. ಈಗಿನ ಕೆಲಸದಲ್ಲಿ ಏನು ಬದಲಾಯಿಸಬೇಕು? 

ನೀವು ಕೆಲಸ ಬಿಡುವ ಮೊದಲು, ನೀವು ಅದರಲ್ಲೇ ಉಳಿಯಲು ಬಯಸಿದ್ದರೆ, ಮಾಡುವ ಕೆಲಸವನ್ನೇ ಭಿನ್ನವಾಗಿ ಮಾಡುವುದನ್ನು ಅಭ್ಯಾಸ ಮಾಡಬೇಕು. ಈ ಬದಲಾವಣೆಗಳು ಅಸಾಧ್ಯ ಅಥವಾ ಅವಾಸ್ತವವಾಗಿರಬಹುದು. ಆದರೆ ಅದನ್ನು ರೂಢಿಸಲು ಯತ್ನಿಸುವ ಮೂಲಕ ನೀವು ಕೆಲಸದ ಉದ್ದೇಶವನ್ನೇ ಬದಲಾಯಿಸಬಹುದು. ಆಗ ಅದು ನಿಮಗೆ ಸಂತೋಷ ಕೊಡಬಹುದು. ನಿಮಗೆ ಬೇಕಾದುದನ್ನು ಪಡೆಯಬಹುದು. ಆದರೂ ಅದು ಸಾಧ್ಯವಾಗದಿದ್ದರೆ, ಬೇರೆ ಕೆಲಸದತ್ತ ಮುಂದುವರಿಯಬಹುದು.

2. ಈಗಿನ ಕೆಲಸವನ್ನು ಚೆನ್ನಾಗಿ ಮಾಡಲು ಎಲ್ಲ ಕ್ರಮಗಳನ್ನು ನಾನು ತೆಗೆದುಕೊಂಡಿದ್ದೇನೆಯೇ?

ನಿಮ್ಮ ಪರಿಸ್ಥಿತಿಯು ತೀರಾ ಕೆಟ್ಟಿಲ್ಲ ಮತ್ತು ಅದನ್ನು ನಿರ್ವಹಿಸಬಹುದೆಂದು ನಿಮಗೆ ತಿಳಿದಿದ್ದರೆ, ಅದನ್ನು ಸುಧಾರಿಸಲು ನೀವು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಯೋಚಿಸಿ. ನಿಮ್ಮ ಮೇಲಧಿಕಾರಿಯ ಜೊತೆಗೆ ಧನಾತ್ಮಕ ವರ್ತನೆ ಮತ್ತು ಹೆಚ್ಚು ಸ್ಪಷ್ಟವಾಗಿ ಸಂವಹನ ಮಾಡಲು ಪ್ರಯತ್ನಿಸಿ. ಬಹುಶಃ ವೇಳಾಪಟ್ಟಿ ಬದಲಾವಣೆ ಅಥವಾ ನಿಮ್ಮ ಕೆಲಸದ ಹೊರೆ ಕಡಿಮೆ ಮಾಡುವುದರಿಂದ ಧನಾತ್ಮಕ ವ್ಯತ್ಯಾಸ ಅಗಬಹುದು.

ಗ್ರಾಚ್ಯುಟಿ ಲೆಕ್ಕ ಹಾಕೋದು ಹೇಗೆ? ಇಲ್ಲಿದೆ ನೋಡಿ ಸರಳ ಸೂತ್ರ…

3. ಕೆಲಸ ಬಿಡುವುದರಿಂದ ಯಾವ ಸಮಸ್ಯೆ ಪರಿಹಾರವಾಗುತ್ತದೆ?

ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಇತರ ಸಂಗತಿಗಳಿಂದಾಗಿ ನಿಮ್ಮ ಕೆಲಸದಲ್ಲಿ ನೀವು ಅತೃಪ್ತರಾಗಿದ್ದೀರಾ? ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ಇನ್ನೂ ಗುರುತಿಸಲು ಸಾಧ್ಯವಾಗಿಲ್ಲದ ಯಾವುದಾದರೂ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಅದಕ್ಕೆ ನಿಮ್ಮ ಕೆಲಸಕ್ಕಿಂತಲೂ ನಿಮ್ಮ ಸ್ವಭಾವವೇ ಕಾರಣ ಆಗಿರುವ ಸಾದ್ಯತೆ ಹೆಚ್ಚಿದೆ. ಸ್ವಲ್ಪ ಆತ್ಮಾವಲೋಕನ ಮಾಡಲು ಸಮಯವನ್ನು ಮೀಸಲಿಡಿ. ಕೆಲಸ ಬಿಡುವುದರಿಂದ ಅದನ್ನು ಪರಿಹರಿಸಲಾಗದು. 

4. ನನ್ನ ಕೆಲಸ ಬಿಟ್ಟರೆ ಜೀವನಕ್ಕಾಗಿ ಏನು ಮಾಡಬಹುದು?

ಇದು ನಿಮ್ಮನ್ನು ನೀವು ಕೇಳಿಕೊಳ್ಳಬೇಕಾದ ದೊಡ್ಡ ಪ್ರಶ್ನೆ. ನಿಮ್ಮ ಆದ್ಯತೆಗಳನ್ನು ವಿವರಿಸಿಕೊಳ್ಳಿ. ನೀವು ವೃತ್ತಿ ಬದಲಾವಣೆ ಮಾಡಲು ಯೋಚಿಸುತ್ತಿದ್ದರೆ, ಮುಂದಾಗಲಿರುವ ಎಲ್ಲಾ ಹಂತಗಳ ಬಗ್ಗೆ ಯೋಚಿಸಿ. ವೃತ್ತಿ ಬದಲಾಯಿಸುವುದು, ಕಲಿಕೆಗೆ ಹಿಂತಿರುಗುವುದು, ಆದಾಯ ಕಡಿತ, ಅಥವಾ ಮತ್ತೆ ಕೆಳಗಿನಿಂದ ಶುರು ಮಾಡುವುದು- ಹೀಗೆ ನಾನಾ ವಿಧಗಳು ಉಂಟಾಗಬಹುದು.

ಪೊಲೀಸ್‌ ಹುದ್ದೆಗಾಗಿ 1.36 ನಿಮಿಷದಲ್ಲಿ 400 ಮೀ. ಓಡಿದ ಎರಡೂವರೆ ತಿಂಗಳ ಗರ್ಭಿಣಿ

5. ಆರ್ಥಿಕವಾಗಿ ಸ್ಥಿರವಾಗಿದ್ದೀನಾ? 

ನಿಮ್ಮ ಉದ್ಯೋಗವನ್ನು ತೊರೆಯಲು ನೀವು ಆರ್ಥಿಕವಾಗಿ ಸಿದ್ಧವಾಗಿದ್ದೀರಾ ಎಂದು ನೀವು ಮಾತ್ರ ನಿರ್ಧರಿಸಬಹುದು. ಈಗ ನಿಮ್ಮ ಬಳಿ ಏನೂ ಇಲ್ಲ, ಹೊಸ ಉದ್ಯೋಗವನ್ನು ಹೊಂದಿದ ನಂತರ ಹಣಕಾಸು ಗಳಿಸಬಹುದು ಎಂದುಕೊಳ್ಳುವುದು ಸರಿಯಲ್ಲ. ಯಾವ ವೆಚ್ಚಗಳನ್ನು ತಾತ್ಕಾಲಿಕವಾಗಿ ಕಡಿತಗೊಳಿಸಬಹುದು ಎಂಬುದರ ಕುರಿತು ಯೋಚಿಸಿ. ಯಾವ ಹಂತದಲ್ಲಿ ಖರ್ಚು ಕಡಿತಗೊಳಿಸಲು ಸಾಧ್ಯವಿಲ್ಲ? ಒಂದಷ್ಟು ಕಾಲ ಬೇರೆ ಕೆಲಸ ಯಶಸ್ವಿಯಾಗದಿದ್ದರೂ ನಾನು ಹೇಗೆ ಆರ್ಥಿಕ ಭದ್ರತೆಯನ್ನು ಪಡೆಯಬಹುದು? ಯೋಚಿಸಿ. 

ಆಫೀಸ್‌ನಿಂದ ಬಂದು ಈ ಕೆಲಸ ಮಾಡಿದ್ರೆ, ರಾತ್ರಿ ಆರಾಮ ಸಿಗುತ್ತೆ

6. ನನ್ನ ಕುಟುಂಬ ಮತ್ತು ಸ್ನೇಹಿತರ ಬೆಂಬಲ ನನಗೆ ಇದೆಯೇ?

ನಿಮ್ಮ ಕೆಲಸವನ್ನು ತ್ಯಜಿಸುವುದು ನಿಮ್ಮ ಜೀವನದಲ್ಲಿರು ಇತರರ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ನೀವು ಮೊದಲು ನಿಮ್ಮ ಕುಟುಂಬದೊಂದಿಗೆ ಪ್ರಾಮಾಣಿಕ ಸಂವಾದ ನಡೆಸುವುದು ಬಹಳ ಮುಖ್ಯ. ನಿಮ್ಮ ಸಂಗಾತಿ ಅಥವಾ ಮಕ್ಕಳು ನಿಮ್ಮ ಕೆಲವು ವೆಚ್ಚ ಕಡಿತ ಯೋಜನೆಗಳಲ್ಲಿ ಸಹಾಯ ಮಾಡಬೇಕಾಗಬಹುದು ಅಥವಾ ಭಾಗವಹಿಸಬೇಕಾಗಬಹುದು.

Follow Us:
Download App:
  • android
  • ios