ಬೆಂಗ್ಳೂರಲ್ಲಿ ವಿವಿಧ ಹುದ್ದೆಗೆ ಇಂಟರ್ ವ್ಯೂ: SSLC ಮುಗಿಸಿದವರೂ ಇದೆ ಚಾನ್ಸ್
ತಾತ್ಕಾಲಿಕ ವೈದ್ಯರು, ನರ್ಸ್, ಸ್ವಾಬ್ ಕಲೆಕ್ಟರ್ಸ್ ನೇಮಕಕ್ಕೆ ಬಿಬಿಎಂಪಿ, ನೇರ ಸಂದರ್ಶನಕ್ಕೆ ಆಹ್ವಾನಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, (ಏ.17): ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಸೋಂಕು ಉಲ್ಬಣ ಹಿನ್ನೆಲೆ BBMP ತಾತ್ಕಾಲಿಕ ವೈದ್ಯರು, ನರ್ಸ್, ಸ್ವಾಬ್ ಕಲೆಕ್ಟರ್ಸ್ ನೇಮಕಕ್ಕೆ ಮುಂದಾಗಿದೆ.
3 ತಿಂಗಳ ಅವಧಿಗೆ ನೇಮಕಕ್ಕೆ ನೋಟಿಫಿಕೆಶನ್ ಹೊರಡಿಸಿದ ಬಿಬಿಎಂಪಿ, ನೇರ ಸಂದರ್ಶನಕ್ಕೆ ಆಹ್ವಾನಿಸಿದೆ. ಇದೇ ಏಪ್ರಿಲ್ 19ರಿಂದ ಏಪ್ರಿಲ್ 21ರವರೆಗೆ ಸಂದರ್ಶನ ನಡೆಯಲಿದೆ.
ಸಂದರ್ಶನ ಬೆಂಗಳೂರು ದಕ್ಷಿಣ ವಲಯ ಜಯನಗರದ ವಲಯವಾರು ಬಿಬಿಎಂಪಿ ಕಚೇರಿಯಲ್ಲಿ ಬೆಳಿಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ
ಇನ್ನಷ್ಟು ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಏನೆಲ್ಲಾ ಅರ್ಹತೆಯಿರಬೇಕು..?
-MBBS ವೈದರು - ಭಾರತೀಯ ಮೆಡಿಕಲ್ ಕೌನ್ಸಿಲ್ನಿಂದ ಮಾನ್ಯತೆ ಪಡೆದಿರಬೇಕು (80 ಸಾವಿರ ಸಂಬಳ)
-BDS ವೈದ್ಯರು (Bachelor of Dental Surgery) - ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದಿರಬೇಕು (60 ಸಾವಿರ ಸಂಬಳ)
ಆಯುಷ್ ವೈದ್ಯರು - ಮಾನ್ಯತೆ ಪಡೆದ ಆಯುರ್ವೇದ ಯುನಿವರ್ಸಿಟಿಯಿಂದ BAMS or BUMS or BSMS or MHMS ಡಿಗ್ರಿ ಆಗಿರಬೇಕು (60 ಸಾವಿರ ಸಂಬಳ)
-ಲಸಿಕೆ ನೀಡಲು ಸ್ಟಾಫ್ ನರ್ಸ್ಗಳು - ಮಾನ್ಯತೆ ಪಡೆದ ನರ್ಸಿಂಗ್ ಕೌನ್ಸಿಲ್ನಲ್ಲಿ BSc/GNM/diploma ನೊಂದಾಯಿಸಿರಬೇಕು (20 ಸಾವಿರ ಸಂಬಳ)
-ಸ್ವಾಬ್ ಕಲೆಕ್ಟರ್ಸ್ - ಕನಿಷ್ಠ 10 ನೇ ತರಗತಿ ಪಾಸಾಗಿರಬೇಕು ( 19 ಸಾವಿರ ಸಂಬಳ)
ಈ ಎಲ್ಲಾ ಹುದ್ದೆಗಳಿಗೆ ಸಂದರ್ಶನದಲ್ಲಿ ಭಾಗಿಯಾಗುವವರಿಗೆ 50 ವರ್ಷ ದಾಟಿರಬಾರದು. ಅಲ್ಲದೇ ಕನ್ನಡದಲ್ಲಿ ಮಾತನಾಡಲು, ಓದಲು, ಬರೆಯಲು ಗೊತ್ತಿರಬೇಕು.