ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸಾಕಿದ್ದೇ ನಾನು  ಅವರಿಗಾಗಿ ನಾನು ಡ್ರೈವರ್‌ ಆಗಿದ್ದೆ. ಆದರೂ ಬ್ರದರ್‌ ಬ್ರದರ್‌ ಎನ್ನುತ್ತಲೇ ಕತ್ತು ಕೊಯ್ದರು 

 ಆಲಮೇಲ/ವಿಜಯಪುರ (ಅ.25): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD kumaraswamy) ಅವರನ್ನು ಸಾಕಿದ್ದೇ ನಾನು. ಅವರಿಗಾಗಿ ನಾನು ಡ್ರೈವರ್‌ (Driver) ಆಗಿದ್ದೆ. ಆದರೂ ಬ್ರದರ್‌ ಬ್ರದರ್‌ ಎನ್ನುತ್ತಲೇ ಕತ್ತು ಕೊಯ್ದರು ಎಂದು ಬೆಂಗಳೂರಿನ (Bengaluru) ಚಾಮರಾಜಪೇಟೆ (ChamarajaPete) ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್‌ ಅಹ್ಮದ್‌ ಖಾನ್‌ (zameer ahmed khan) ಟೀಕಾ ಪ್ರಹಾರ ನಡೆಸಿದ್ದಾರೆ. ಅಲ್ಲದೆ ಜೆಡಿಎಸ್‌ನದು (JDS) ಸೂಟ್‌ಕೇಸ್‌ ರಾಜಕಾರಣ. ಸಿಂದಗಿಯಲ್ಲಿ ಸೂಟ್‌ಕೇಸ್‌ ಪಡೆದುಕೊಂಡು ಮುಸ್ಲಿಂ ಅಭ್ಯರ್ಥಿ ನಿಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌(congress) ಅಭ್ಯರ್ಥಿ ಅಶೋಕ ಮನಗೂಳಿ ಪರ ಸಿಂದಗಿ ಕ್ಷೇತ್ರದ ವಿವಿಧೆಡೆ ಮತಯಾಚನೆ ಮಾಡಿದ ಅವರು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ (HD Devegowda) ಋುಣ ನನ್ನ ಮೇಲಿದೆ. ನಾನು ದೇವೇಗೌಡರಿಂದ ಶಾಸಕನಾಗಿದ್ದೇನೆಯೇ ಹೊರತು ಎಚ್‌ಡಿಕೆಯಿಂದಲ್ಲ ಎಂದರು.

'ಬೊಗಳುವ ನಾಯಿಗಳಿಗೆಲ್ಲ ಉತ್ತರ ನೀಡಲಿಕ್ಕೆ ಆಗುತ್ತಾ'

ಜೆಡಿಎಸ್‌ನದು ಸೂಟ್‌ಕೇಸ್‌ ರಾಜಕಾರಣ. ಸಿಂದಗಿಯಲ್ಲಿ ಸೂಟ್‌ಕೇಸ್‌ ಪಡೆದುಕೊಂಡು ಮುಸ್ಲಿಂ ಅಭ್ಯರ್ಥಿ ನಿಲ್ಲಿಸಿದರು. ಬಸವ ಕಲ್ಯಾಣದಲ್ಲಿ 10 ಕೋಟಿ ಪಡೆದು ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದರು. ಬಿಜೆಪಿ (BJP) ಜತೆ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದ್ದಾರೆ. ಯಾವ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ಸಿನಿಂದ (Congress) ಗೆಲ್ಲುತ್ತಾರೋ ಆ ಕ್ಷೇತ್ರದಲ್ಲಿ ಅದೇ ಸಮುದಾಯದವರಿಗೆ ಜೆಡಿಎಸ್‌ ಟಿಕೆಟ್‌ ಕೊಟ್ಟು ಬಿಜೆಪಿಗೆ ಅನುಕೂಲ ಮಾಡಿಕೊಡುತ್ತದೆ. ಇದಕ್ಕೆ ಪ್ರತಿಯಾಗಿ ಬಿಜೆಪಿಯಿಂದ ‘ಸೂಟ್‌ಕೇಸ್‌’ ಪಡೆಯುತ್ತಾರೆ.

2004ರಲ್ಲಿ ಕುಮಾರಸ್ವಾಮಿ (Kumaraswamy) ಅವರಿಗೆ ಏನು ಆದಾಯ ಇತ್ತು? 2008ರಲ್ಲಿ .360 ಕೋಟಿ ಆದಾಯ ತೋರಿಸಿದ್ದಾರೆ. ಅಲ್ಪಸಂಖ್ಯಾತ ನಾಯಕರನ್ನು ಮುಗಿಸಿದ್ದು ಎಚ್‌ಡಿಕೆಯೇ ಹೊರತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅಲ್ಲ ಎಂದರು.

ಜಮೀರ್ ಬಿಚ್ಚಿಟ್ಟ HDK ಸದಾಶಿವನಗರ ಗೆಸ್ಟ್ ಹೌಸ್ ರಹಸ್ಯ!

ಜೆಡಿಎಸ್‌ನವರು ಯಾವಾಗಲೂ ಮುಸ್ಲಿಂ (Muslim) ಸಮುದಾಯದ ಮುಖಂಡರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಅತೀ ಹೆಚ್ಚು ಅನ್ಯಾಯ ಮಾಡಿದ ಪಕ್ಷವೆಂದರೆ ಜೆಡಿಎಸ್‌. ಅದರಲ್ಲೂ ಕುಮಾರಸ್ವಾಮಿ ಇದಕ್ಕೆ ಮುಖ್ಯ ಕಾರಣಕರ್ತರು. ಈ ವಿಷಯಕ್ಕೆ ಸಂಬಂಧಿಸಿದಂತೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.