ಹೈದರಾಬಾದ್, (ಜ.01): ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ವೈಎಸ್ಆರ್ ಕಾಂಗ್ರೆಸ್ ಹಿರಿಯ ನಾಯಕ ಚಲ್ಲಾ ರಾಮಕೃಷ್ಣ ರೆಡ್ಡಿ ನಿಧನರಾಗಿದ್ದಾರೆ.

ಆಂಧ್ರಪ್ರದೇಶದ ವಿಧಾನಪರಿಷತ್ ಸದಸ್ಯ, ವೈಎಸ್ಆರ್ ಕಾಂಗ್ರೆಸ್ ಹಿರಿಯ ನಾಯಕ ಚಲ್ಲಾ ರಾಮಕೃಷ್ಣ ರೆಡ್ಡಿ ಅವರು  ಇಂದು (ಶುಕ್ರವಾರ) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೊರೋನಾ ಅತೀ ಹೆಚ್ಚು ಬಲಿ ಪಡೆದಿದ್ದು ಪುರುಷರನ್ನೋ-ಮಹಿಳೆಯರೋ? ಇಲಾಖೆ ವರದಿ ಪ್ರಕಟ!

ಮೊದಲಿಗೆ ರಾಮಕೃಷ್ಣ ರೆಡ್ಡಿ  ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಲಿಲ್ಲ.

72 ವರ್ಷದ ರಾಮಕೃಷ್ಣ ರೆಡ್ಡಿ ಅವರು ಪತ್ನಿ, ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.