Asianet Suvarna News Asianet Suvarna News

ಪುತ್ರಿ ಶರ್ಮಿಳಾಗಾಗಿ ಪುತ್ರ ಜಗನ್‌ ಪಕ್ಷಕ್ಕೆ ಗುಡ್‌ಬೈ ಹೇಳಿದ ತಾಯಿ

ಆಂಧ್ರ ಸಿಎಂ ಜಗನ್‌ ಮೋಹನ್‌ ರೆಡ್ಡಿ ಅಧ್ಯಕ್ಷರಾಗಿರುವ ವೈಎಸ್‌ಆರ್‌ ಕಾಂಗ್ರೆಸ್‌ನ ಗೌರವಾಧ್ಯಕ್ಷೆ ಸ್ಥಾನಕ್ಕೆ ತಾಯಿ ವಿಜಯಮ್ಮ ರಾಜೀನಾಮೆ ನೀಡಿದ್ದಾರೆ. ವೈಎಸ್ಸಾರ್‌ ತೆಲಂಗಾಣ ಪಕ್ಷ ಕಟ್ಟಿರುವ ಪುತ್ರಿಗೆ ನೆರವಾಗುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ  ತಿಳಿಸಿದ್ದಾರೆ.

YS jagan mohan reddy mother quits YSRCP Post gow
Author
Bengaluru, First Published Jul 9, 2022, 10:55 AM IST

ಅಮರಾವತಿ (ಜು.9): ಪುತ್ರ ಜಗನ್‌ ಮೋಹನ್‌ ರೆಡ್ಡಿ (YS jagan mohan reddy ) ಅಧ್ಯಕ್ಷರಾಗಿರುವ ವೈಎಸ್‌ಆರ್‌  ಕಾಂಗ್ರೆಸ್‌ ( YSRCongress) ಪಕ್ಷದ ಗೌರವಾಧ್ಯಕ್ಷೆ ಸ್ಥಾನಕ್ಕೆ ಅವರ ತಾಯಿ ವಿಜಯಮ್ಮ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ವಿಜಯಮ್ಮ, ನನ್ನ ಪುತ್ರಿ ಶರ್ಮಿಳಾ ತಮ್ಮ ತಂದೆ ವೈ.ಎಸ್‌.ರಾಜಶೇಖರ ರೆಡ್ಡಿ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ತೆಲಂಗಾಣದಲ್ಲಿ ವೈಎಸ್‌ಆರ್‌ ತೆಲಂಗಾಣ ಪಕ್ಷ ಕಟ್ಟಿಕೊಂಡು ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ಈ ಹಂತದಲ್ಲಿ ಅವಳಿಗೆ ನೆರವಾಗುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಓರ್ವ ತಾಯಿಯಾಗಿ ನಾನು ಎಂದೆಂದಿಗೂ ಜಗನ್‌ ಜೊತೆಗಿರುತ್ತೇನೆ. ಆದರೆ ನಾನು ಒಂದೇ ಸಮಯದಲ್ಲಿ ಎರಡು ಪಕ್ಷದ ಕಾರ್ಯಕರ್ತೆಯಾಗಿರುವುದು ಹೇಗೆ ಎಂಬ ಗೊಂದಲ ಮೂಡಿತ್ತು. ಜೊತೆಗೆ ಇದು ಮುಂದಿನ ದಿನಗಳಲ್ಲಿ ವಿವಾದಕ್ಕೂ ಕಾರಣವಾಗುವ ಸಾಧ್ಯತೆ ಇತ್ತು.

ಮೋದಿ ದೂರ ಇಟ್ಟ ಗುಜರಾತ್‌ ಗೆಲ್ಲಲು ಕಾಂಗ್ರೆಸ್‌ ರಣತಂತ್ರ!

ಹೀಗಾಗಿ ಏಕಾಂಗಿಯಾಗಿ ಹೋರಾಡುತ್ತಿರುವ ಮಗಳ ಜೊತೆಗಿರುವ ಅನಿವಾರ್ಯತೆ ಹೆಚ್ಚು ಕಂಡುಬಂದ ಹಿನ್ನೆಲೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌್ನ ಗೌರವಾಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.

ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಜಗನ್‌ ಮತ್ತು ಅವರ ಸೋದರಿ ಶರ್ಮಿಳಾ ನಡುವೆ ಹಲವು ದಿನಗಳಿಂದ ತಿಕ್ಕಾಟ ನಡೆಯುತ್ತಿದೆ ಎನ್ನಲಾಗಿದೆ. ಅದರ ಬೆನ್ನಲ್ಲೇ ವಿಜಯಮ್ಮ ಕೂಡಾ ಕೆಲ ದಿನಗಳಿಂದ ಜಗನ್‌ರಿಂದ ದೂರವಾಗಿದ್ದರು.

Karnataka Assembly Election 2023; ಬೊಮ್ಮಾಯಿಗೆ ಬ್ರಾಂಡ್ ಸೆಟ್ ಮಾಡಲು ರಾಜ್ಯ ಬಿಜೆಪಿ ತಂತ್ರ!

ತಮ್ಮ ಕುಟುಂಬಕ್ಕೆ ಬೆಂಬಲ ನೀಡಿದ ವೈಎಸ್ಆರ್ ಅನುಯಾಯಿಗಳಿಗೆ ಅವರು ಧನ್ಯವಾದ ಅರ್ಪಿಸಿದರು. ವೈಎಸ್‌ಆರ್ ಅವರು ತಮ್ಮ ಎಲ್ಲ ಅನುಯಾಯಿಗಳನ್ನು ತಮ್ಮ ಕುಟುಂಬದವರಂತೆ ನೋಡಿಕೊಂಡರು. ಅವರು ಇಂದಿಗೂ ಜನಮನದಲ್ಲಿ ಜೀವಂತವಾಗಿದ್ದಾರೆ. ನಾನು ನಿಮ್ಮನ್ನು ಆಶೀರ್ವದಿಸಲು ಇಲ್ಲಿಗೆ ಬಂದಿದ್ದೇನೆ ಮತ್ತು ನನ್ನ ಕುಟುಂಬದೊಂದಿಗೆ ನಿಂತಿದ್ದಕ್ಕಾಗಿ ಮತ್ತು ಜನರ ಸೇವೆಗೆ ನಮಗೆ ಸಹಾಯ ಮಾಡಿದ್ದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ ಎಂದು ವಿಜಯಮ್ಮ  ಹೇಳಿದ್ದಾರೆ.

ಜನರ ಆಶೀರ್ವಾದದಿಂದ ವೈಎಸ್‌ಆರ್‌ಸಿಪಿ ಆರಂಭಿಸಲಾಗಿದ್ದು, ರಾಜ್ಯದ ಅಭಿವೃದ್ಧಿಯ ಏಕೈಕ ಉದ್ದೇಶದಿಂದ ತಮ್ಮ ಮಗ ಮುನ್ನಡೆಯುತ್ತಿದ್ದಾರೆ ಎಂದು ವಿಜಯಮ್ಮ ಹೇಳಿದರು. ''ಜಗನ್‌ಗೆ ಅಷ್ಟು ಸುಲಭವಾಗಿ ಯಶಸ್ಸು ಸಿಕ್ಕಿಲ್ಲ. ಅವರು ಸಾಕಷ್ಟು ಹೋರಾಟ ಮಾಡಿದರು.  ತನ್ನ ಮಗ ಯುವಕರಿಗೆ ಮಾದರಿ. ಬಡವರ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಜನಸಾಮಾನ್ಯ ಎಂದು ಈ ವೇಳೆ ಹೇಳಿದ್ದಾರೆ.

Follow Us:
Download App:
  • android
  • ios