ಮೋದಿ ಬದಲು ಸ್ಥಳೀಯ ನಾಯಕತ್ವ ಟಾರ್ಗೆಟ್ ಈ ಸಲವೂ ಸಿಎಂ ಅಭ್ಯರ್ಥಿಯ ಘೋಷಣೆ ಇಲ್ಲ ವರ್ಷಾಂತ್ಯಕ್ಕೆ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆ
ಅಹಮದಾಬಾದ್ (ಜು.9): ವರ್ಷಾಂತ್ಯಕ್ಕೆ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯನ್ನು (Gujarat Assembly elections) ಗೆಲ್ಲಲೇಬೇಕು ಎಂದು ಹಟಕ್ಕೆ ಬಿದ್ದಿರುವ ಕಾಂಗ್ರೆಸ್ (Congress), ಆ ಕನಸು ಸಾಕಾರಕ್ಕೆ ಎರಡು ಮಹತ್ವದ ತಂತ್ರಗಾರಿಕೆಗಳನ್ನು ರೂಪಿಸಿದೆ. ಈ ಚುನಾವಣೆ ‘ಕಾಂಗ್ರೆಸ್ ವರ್ಸಸ್ ಪ್ರಧಾನಿ ನರೇಂದ್ರ ಮೋದಿ’ ಎಂದು ಬಿಂಬಿತವಾಗುವುದನ್ನು ತಡೆಯಲು ಪಕ್ಷದ ಒಟ್ಟಾರೆ ಪ್ರಚಾರ ಬಿಜೆಪಿಯ ಸ್ಥಳೀಯ ನಾಯಕತ್ವದ ವಿರುದ್ಧ ಇರುವಂತೆ ನೋಡಿಕೊಳ್ಳುವ ನಿಲುವಿಗೆ ಬಂದಿದೆ. ಇದೇ ವೇಳೆ, ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದೇ ಇರಲು ನಿರ್ಧಾರ ತೆಗೆದುಕೊಂಡಿದೆ.
ಗುಜರಾತ್ ಮಟ್ಟದಲ್ಲಿ ಬಿಜೆಪಿಗೆ (BJP) ಅತ್ಯಂತ ಪ್ರಭಾವಿ ಎನ್ನಬಹುದಾದ ನಾಯಕ ಇಲ್ಲ ಎಂಬುದು ಕಾಂಗ್ರೆಸ್ಸಿನ ನಂಬಿಕೆ. ಹೀಗಾಗಿ ಈ ಚುನಾವಣೆ ಮೋದಿ ವರ್ಸಸ್ ಕಾಂಗ್ರೆಸ್ ಎಂಬುದನ್ನು ತಪ್ಪಿಸಿ, ಸ್ಥಳೀಯ ಸಮಸ್ಯೆಗಳನ್ನು ಪ್ರಸ್ತಾಪಿಸಿ ಮತದಾರರ ಮನಗಗೆಲ್ಲಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ.
'ಬಿಜೆಪಿ ಸರ್ಕಾರದ ಅರಾಜಕತೆಯ ದಿನಗಳು' ಕಿರುಹೊತ್ತಿಗೆ ಬಿಡುಗಡೆ ಮಾಡಿದ SDPI
ಪ್ರಿಯಾಂಕಾ ಗಾಂಧಿ ವಾದ್ರಾ (priyanka gandhi vadra) ಸೇರಿದಂತೆ ಹಲವು ನಾಯಕರು ಇದ್ದ ಕಾಂಗ್ರೆಸ್ ಕಾರ್ಯಪಡೆ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಗುಜರಾತಿನಲ್ಲಿ ಕಳೆದ 24 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ.
2017ರಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಿತ್ತಾದರೂ 182 ಸದಸ್ಯ ಬಲದ ವಿಧಾನಸಭೆಯಲ್ಲಿ 77 ಸ್ಥಾನಗಳನ್ನಷ್ಟೇ ಗೆದ್ದಿತ್ತು. ಆದರೆ ಬಿಜೆಪಿ 99 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿತ್ತು.
Karnataka Assembly Election 2023; ಬೊಮ್ಮಾಯಿಗೆ ಬ್ರಾಂಡ್ ಸೆಟ್ ಮಾಡಲು ರಾಜ್ಯ ಬಿಜೆಪಿ ತಂತ್ರ!
ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕೆಲವು ಉನ್ನತ ನಾಯಕರನ್ನು ಒಳಗೊಂಡಿರುವ ಕಾಂಗ್ರೆಸ್ ಕಾರ್ಯಪಡೆ ಮುಂಬರುವ ರಾಜ್ಯ ಚುನಾವಣೆಗೆ ತಂತ್ರವನ್ನು ರೂಪಿಸಲು ಗುಜರಾತ್‌ನ ನಾಯಕರೊಂದಿಗೆ ಈ ವಾರದ ಆರಂಭದಲ್ಲಿ ದೆಹಲಿಯಲ್ಲಿ ಸಭೆ ನಡೆಸಿತ್ತು. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಚಿಸಿರುವ ಕಾರ್ಯಪಡೆಯಲ್ಲಿ ಹಿರಿಯ ನಾಯಕರಾದ ಪಿ ಚಿದಂಬರಂ, ಮುಕುಲ್ ವಾಸ್ನಿಕ್, ಕೆ ಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಇತರರು ಇದ್ದಾರೆ. ಗುಜರಾತ್ ಕಾಂಗ್ರೆಸ್ ಉಸ್ತುವಾರಿ ರಘು ಶರ್ಮಾ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಜಗದೀಶ್ ಠಾಕೂರ್, ವಿರೋಧ ಪಕ್ಷದ ನಾಯಕ ಸುಖರಾಮ್ ರಥ್ವಾ, ಇಬ್ಬರು ಗುಜರಾತ್ ಕಾಂಗ್ರೆಸ್ ಅಧ್ಯಕ್ಷರು - ಅರ್ಜುನ್ ಮೋಧ್ವಾಡಿಯಾ ಮತ್ತು ಅಮಿತ್ ಚಾವ್ಡಾ - ಮತ್ತು ವಕ್ತಾರ ಮನೀಶ್ ದೋಷಿ ಸಭೆಯಲ್ಲಿ ಭಾಗವಹಿಸಿದ್ದರು.
Koppal: ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ!
ಗುಜರಾತ್ ಚುನಾವಣೆಯು ಕೇಂದ್ರ ಸರ್ಕಾರ ರಚನೆಗಾಗಿ ಅಥವಾ ಪ್ರಧಾನಿ ಆಯ್ಕೆಗಾಗಿ ಅಲ್ಲದ ಕಾರಣ, ಈ ಚುನಾವಣೆಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಡುವಿನ ಜಗಳವಾಗಬಾರದು ಎಂದು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
2007 ರ ಗುಜರಾತ್ ಚುನಾವಣೆಯ ಪ್ರಚಾರದ ಸಮಯದಲ್ಲಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಪಿಎಂ ಮೋದಿಯವರನ್ನು "ಮೌತ್ ಕಾ ಸೌದಾಗರ್" (ಸಾವಿನ ವ್ಯಾಪಾರಿ) ಎಂದು ಕರೆದರು, 2002 ರ ಗೋಧ್ರಾ ನಂತರದ ಕೋಮು ಗಲಭೆ ಹಿನ್ನೆಲೆ ಇಟ್ಟುಕೊಂಡು ಮೋದಿಯವರು ಪ್ರಧಾನಿಯಾದ ನಂತರವೂ ಗುಜರಾತ್ ಚುನಾವಣಾ ಪ್ರಚಾರದ ಸಮಯದಲ್ಲಿ ಹಳೆಯ ಪಕ್ಷವು ಅವರ ಮೇಲೆ ದಾಳಿ ಮಾಡುತ್ತಲೇ ಇತ್ತು.
