* ಮಂಡ್ಯದಲ್ಲಿ ಯೂತ್ ಕಾಂಗ್ರೆಸ್ ಹೈಡ್ರಾಮ* ನೀತಿ ಸಂಹಿತೆ ನಡುವೆ ಮೈ ಶುಗರ್ ಸ್ವಚ್ಛತೆಗೆ ಪಟ್ಟು.* ಬ್ಯಾರಿಕೇಡ್ ತಳ್ಳಿ ಫ್ಯಾಕ್ಟರಿ ಪ್ರವೇಶಕ್ಕೆ ಯತ್ನ.* ನಲಪಾಡ್, ಐಶ್ವರ್ಯ ಮಹದೇವು ಸೇರಿದಂತೆ ಕೈ ನಾಯಕರ ಬಂಧನ.
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ.
ಮಂಡ್ಯ, (ಮೇ.15): ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹುಟ್ಟುಹಬ್ಬ ಹಿನ್ನೆಲೆ ಯೂತ್ ಕಾಂಗ್ರೆಸ್ ಸದಸ್ಯರು ಮಂಡ್ಯದ ಮೈಶುಗರ್ ಕಾರ್ಖಾನೆ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದರು. ಸ್ವಚ್ಚತೆ ಮಾಡಲು ಕಾರ್ಖಾನೆ ಆಡಳಿತ ಮಂಡಳಿ ಅನುಮತಿ ಕೊಟ್ಟರು, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ನೀತಿ ಸಂಹಿತೆ ಕಾರಣ ಪೊಲೀಸರು ಕಾರ್ಯಕ್ರಮ ನಡೆಸದಂತೆ ತಡೆಹಿಡಿದರು.
ಆದರೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್ ಕೆಲಕಾಲ ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ರು. ಬಳಿಕ ಪೊಲೀಸರ ಸರ್ಪಗಾವಲಿನ ನಡುವೆಯೇ ಬ್ಯಾರಿಕೇಡ್ ತಳ್ಳಿ ಕಾರ್ಖಾನೆ ಪ್ರವೇಶ ಮಾಡಲು ಯತ್ನಿಸಿದ ಕೈ ನಾಯಕರನ್ನ ಮಂಡ್ಯ ಪೊಲೀಸರು ಬಂಧಿಸಿ ಕರೆದೊಯ್ದರು.
ರಾಜ್ಯದಿಂದಲೇ ಶುರುನಾ "ಪ್ರಿಯಾಂಕಾ" ರಾಜಕೀಯದಾಟ? ಸಿದ್ದು ಸಿಎಂ ವ್ಯೂಹ.. ಡಿಕೆ "ಗಾಂಧಿ"ವ್ಯೂಹ..!
5 ಲಕ್ಷ ಕಮಿಷನ್ ನಾನೇ ಕೊಡ್ತೀನಿ, ಸ್ವಚ್ಛತೆ ಮಾಡಲು ಬಿಡಿ
ನೀತಿ ಸಂಹಿತೆ ನಡೆವೆಯೂ ಫ್ಯಾಕ್ಟರಿ ಸ್ವಚ್ಛತಾ ಕಾರ್ಯಕ್ಕಾಗಿ ಮಹಮದ್ ನಲಪಾಡ್ ಮಂಡ್ಯಕ್ಕೆ ಆಗಮಿಸಿದ್ರು, ಫ್ಯಾಕ್ಟರಿ ಸರ್ಕಲ್‌ನಿಂದ ಮೈಶುಗರ್ ಕಾರ್ಖಾನೆ ಮುಖ್ಯದ್ವಾರದ ವರೆಗೂ ಕಾಲ್ನಡಿಗೆ ಮೂಲಕ ಆಗಮಿಸಿದ ಕೈ ನಾಯಕರನ್ನು ಪೊಲೀಸರು ಅಡ್ಡಗಟ್ಟಿದ್ರು. ಈ ವೇಳೆ ಸಿಪಿಐ ಸಂತೋಷ್ ಕುಮಾರ್ ಜೊತೆ ವಾಗ್ವಾದಕ್ಕಿಳಿದ ನಲಪಾಡ್ ನಾವು ಸ್ವಚ್ಛತೆ ಮಾಡುವುದರಿಂದ ಕಾರ್ಖಾನೆಗೆ 10ಲಕ್ಷ ಉಳಿಯುತ್ತದೆ. ಟೆಂಡರ್ ಕರೆಯುವುದು ತಪ್ಪುತ್ತದೆ ಎಂದು ಸಿಬ್ಬಂದಿಗಳೆ ಹೇಳಿದ್ದಾರೆ. ಆದ್ರೆ ಟೆಂಡರ್ ಕರೆಯದೆ ಕಮಿಷನ್ ಸಿಗಲ್ಲ ಎಂದು ನಮ್ಮನ್ನ ತಡೆಯುತ್ತಿದ್ದೀರಾ.? 40% ಕಮಿಷನ್ ನಾನೇ ಕೊಡ್ತೀನಿ. 4ಲಕ್ಷ ಕೊಡ್ತೀನಿ ಕಾರ್ಖಾನೆ ಸ್ವಚ್ಛತೆಗೆ ಬಿಡಿ ಎಂದು ಚೆಕ್ ಪ್ರದರ್ಶನ ಮಾಡಿದ್ರು.
ಪೊಲೀಸರಿಗೆ ಗದರಿದ ನಲಪಾಡ್
ಮೈಶುಗರ್ ಫ್ಯಾಕ್ಟರಿ ಮುಂಭಾಗ ಸುಮಾರು 2 ಗಂಟೆಗಳ ಕಾಲ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಹೈಡ್ರಾಮ ನಡೆಯಿತು. ಬ್ಯಾರಿಕೇಡ್ ತಳ್ಳಿ ಕಾರ್ಖಾನೆ ಪ್ರವೇಶಕ್ಕೆ ಯತ್ನಿಸಿದ ಕಾಂಗ್ರೆಸ್ಸಿಗರನ್ನ ಪೊಲೀಸರು ಬಲವಂತವಾಗಿಯೇ ಡಿಆರ್ ವಾಹನಕ್ಕೆ ತುಂಬಿದ್ರು. ಈ ವೇಳೆ ಬ್ಯಾರಿಕೇಡ್ ಹತ್ತಲು ನಲಪಾಡ್ ಯತ್ನಿಸಿದ್ರು, ಕೊನೆಗೆ ನಲಪಾಡ್ ಕೈ ಕಾಲು ಹಿಡಿದು ಎತ್ತಿಕೊಂಡು ಹೋದ ಪೊಲೀಸರು ವಾಹನ ಹತ್ತಿಸಿದ್ರು. ಈ ವೇಳೆ ವಾಹನ ಒಳಹೋಗುವಂತೆ ನಲಪಾಡ್‌ರನ್ನ ಓರ್ವ ಪೊಲೀಸರು ತಳ್ಳಿದ್ರು, ಆದ್ರೆ ಪೊಲೀಸರ ವಿರುದ್ಧವೇ ಗರಂ ಆದ ನಲಪಾಡ್ ಏಕವಚನದಲ್ಲೇ ಅವಾಜ್ ಹಾಕಿದ್ರು.
