ಸಚಿವ ಸುಧಾಕರ್‌ ಚರಿತ್ರೆ ಬಗ್ಗೆ ನಿಮಗೆ ಗೊತ್ತಿಲ್ಲ: ಬಿಜೆಪಿ ಶಾಸಕರ ಬಳಿಯೇ 50 ಲಕ್ಷ ಕೇಳಿದ್ದಾರೆ: ಕುಮಾರಸ್ವಾಮಿ ಆರೋಪ

ಸಚಿವ ಸುಧಾಕರ್ ಮೆಡಿಕಲ್‌ ಕಾಲೇಜಿಗೆ ಬಿಜೆಪಿ ವಿಧಾನ ಪರಿಷತ್‌ ಸದಸ್ಯರೊಬ್ಬರ ಮಗಳನ್ನು ಅಸಿಸ್ಟಂಟ್‌ ಪ್ರೊಫೆಸರ್‌ ಆಗಿ ನೇಮಕ ಮಾಡಲು ಬರೋಬ್ಬರಿ 50 ಲಕ್ಷ ರೂ. ಕೇಳಿದ್ದಾರೆ.

You do not know about Minister Sudhakar history he asked BJP MLA for 50 lakhs bribe Kumaraswamuy sat

ಚಿಕ್ಕಮಗಳೂರು (ಫೆ.26): ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ನಾನು ಕೆದಕುವುದಿಲ್ಲ. ನನ್ನನ್ನು ಕೆಣಕಿದರೆ ಎಲ್ಲರ ಭ್ರಷ್ಟಾಚಾರವನ್ನು ದಾಖಲೆ ಸಮೇತ ಮುಂದಿಡುತ್ತೇನೆ. ಸಚಿವ ಸುಧಾಕರ್‌ ನಿನ್ನೆ ಮೊನ್ನೆ ಬಿಜೆಪಿಗೆ ಸೇರಿದ್ದಾನೆ. ಮೆಡಿಕಲ್‌ ಕಾಲೇಜಿಗೆ ಬಿಜೆಪಿ ವಿಧಾನ ಪರಿಷತ್‌ ಸದಸ್ಯರೊಬ್ಬರ ಮಗಳನ್ನು ಅಸಿಸ್ಟಂಟ್‌ ಪ್ರೊಫೆಸರ್‌ ಆಗಿ ನೇಮಕ ಮಾಡಲು ಬರೋಬ್ಬರಿ 50 ಲಕ್ಷ ರೂ. ಹಾಗೂ ಇತರೆ ವೈದ್ಯರ ಹುದ್ದೆಗೆ 20 ಲಕ್ಷ ರೂ. ಕೇಳುತ್ತಾನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಈ ಕುರಿತು ಚಿಕ್ಕಮಗಳೂರಿನಲ್ಲಿ ಪಂಚರತ್ನ ರಥಯಾತ್ರೆಯ ಎರಡನೇ ಮೂರನೇ ದಿನದ ಉದ್ಘಾಟನೆ ಯಾತ್ರೆ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಇತ್ತೀಚೆಗೆ ಆರೋಗ್ಯ ಸಚಿವ ಸುಧಾಕರ್‌ ಮಾಧ್ಯಮಗಳ ಮುಂದೆ ಕುಮಾರಸ್ವಾಮಿ ಕೇವಲ ಆರೋಪ ಮಾಡುತ್ತಾರೆ ಎಂದು ಹೇಳಿದ್ದಾರೆ. ಆದರೆ, ನೈಜವಾಗಿ ನಾನು ಆರೋಪ ಮಾಡುತ್ತಿಲ್ಲ. ಯಡಿಯೂರಪ್ಪ ಅವರು ಕೆಜೆಪಿ ಪಕ್ಷವನ್ನು ಕಟ್ಟಿದ್ದಾಗ ಬಸವರಾಜ ಬೊಮ್ಮಾಯಿ, ಕೆ.ಎಸ್. ಈಶ್ವರಪ್ಪ ಹಾಗೂ ಸದಾನಂದಗೌಡರ ಮೇಲೆ ದೊಡ್ಡ ಆರೋಪವನ್ನು ಮಾಡಿದ್ದಾರೆ. ಈ ಬಗ್ಗೆ ಕಟಿಂಗ್‌ ಇದೆ ಕೊಡಲಾ. ಸದಾನಂದಗೌಡರ ಮೇಲೆ 5 ಕೋಟಿ ರೂ. ಚೆಕ್‌ ವ್ಯವಹಾರದ ಬಗ್ಗೆ ಮಾತನಾಡಿದ್ದು, ಈ ಬಗ್ಗೆ ಸಾಬೀತು ಮಾಡದಿದ್ದರೆ ರಾಜಕೀಯ ನಿವೃತ್ತಿ ಕೊಡುವುದಾಗಿ ಹೇಳಿದ್ದಕ್ಕೆ ನನ್ನ ಬಳಿ ಕಟಿಂಗ್‌ ಇದೆ ಎಂದು ಹೇಳಿದರು.

ಬಿಜೆಪಿ, ಕಾಂಗ್ರೆಸ್‌ಗೆ ಅವಕಾಶ ಕೊಟ್ಟಿದ್ದೀರಿ; ಈ ಬಾರಿ ಜೆಡಿ​ಎ​ಸ್‌ಗೆ ಪೂರ್ಣ ಬಹುಮತ ನೀಡಿ: ಎಚ್‌ಡಿಕೆ

ಒಂದು ಹುದ್ದೆಗೆ 50 ಲಕ್ಷ ರೂ. ಕೇಳಿದ ಸುಧಾಕರ್: ಸಚಿವ ಸುಧಾಕರ್ ಹಳೆಯ ಚರಿತ್ರೆ ನಿಮಗೆ ಗೊತ್ತಿಲ್ಲ. ನಿನ್ನೆ, ಮೊನ್ನೆ ಹೋಗಿ ಸೇರಿಕೊಂಡು ಏನೇನು ಮಾಡಿದ್ದೀಯಾ ಎಂಬುದು ಎಲ್ಲರಿಗೂ ಜಗಜ್ಜಾಹೀರಾಗಿದೆ. ಒಂದು ಮೆಡಿಕಲ್‌ ಕಾಲೇಜಿಗೆ ಡಾಕ್ಟರ್‌ ನೇಮಕ ಮಾಡಲು 20 ಲಕ್ಷ ರೂ. ದುಡ್ಡು ವಸೂಲಿ ಮಾಡುತ್ತಿದ್ದಾರೆ. ನಿಮ್ಮ ಬಗ್ಗೆ ಚರ್ಚೆ ಮಾಡಬೇಕಾ ನಾನು. ಆಸ್ಪತ್ರೆಗಳ ಪರಿಸ್ಥಿತಿ ಹೇಗಿಟ್ಟಿದ್ದೀರಿ? ಮೆಡಿಕಲ್‌ ಕಾಲೇಜಿಗೆ ಅಸಿಸ್ಟಂಟ್‌ ಪ್ರೊಫೆಸರ್‌ ಆಗಿ ನೇಮಕ ಮಾಡಲು ಬಿಜೆಪಿಯ ಪ್ರಮುಖ ನಾಯಕರೊಬ್ಬರು ವಿಧಾನ ಪರಿಷತ್‌ನಲ್ಲಿ ಮುಖ್ಯವಾದ ಚೇರಿನಲ್ಲಿ ಕೂರುವವರ ಮಗಳಿಗೆ 50 ಲಕ್ಷ ರೂ. ಕೇಳಿದ್ದಾರೆ. ಎಲ್ಲಿಂದ ಹಣ ತರಬೇಕು ಎಂದು ಸಿಎಂ ಬಳಿ ಹೋಗಿ ಮನವಿ ಮಾಡಿದ್ದಾರೆ. ನನಗೆ ಕಾಣದಿರುವುದು ಯಾವುದೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿದಿದರು.

ಕರ್ನಾಟಕದ 6.5 ಕೋಟಿ ಜನರ ಆರೋಗ್ಯ ಹೊಣೆ ನನ್ನ ಪುಣ್ಯ: ಸಚಿವ ಸುಧಾಕರ್‌

ದಾಖಲೆ ಸಮೇತ ಪ್ರಕರಣ ಮುಂದಿಡುತ್ತೇನೆ: ರಾಜ್ಯದಲ್ಲಿ ನಾನು ಆರೋಪ ಮಾಡುತ್ತಿಲ್ಲ. ಬ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡ್ತಿಲ್ಲ. ನಾನು ಚರ್ಚೆ ಮಾಡಬೇಕೆಂದು ನೀವು ಕೆದಕಿದರೆ ಸಾಕಷ್ಟು ಪ್ರಕರಣಗಳನ್ನು ದಾಖಲೆ ಸಮೇತ ಹೊರತೆಗೆಯುತ್ತೇನೆ. ನಾನು ಗಾಳಿ ಉತ್ತರ ಕೊಡುವುದಿಲ್ಲ. ಕಾಂಗ್ರೆಸ್‌ಗೂ ನನಗೂ ವ್ಯತ್ಯಾಸ ಇದೆ. ಈ ಹಿಂದೆಯೇ ಭ್ರಷ್ಟಾಚಾರದ ಬಗ್ಗೆ ನಿರ್ಮೂಲನೆ ಮಾಡಲು ಮುಂದಾಗಿದ್ದೇನೆ. ಆದರೆ, ಎಷ್ಟೇ ಪ್ರಯತ್ನ ಮಾಡಿದರೂ ಇದು ವಿಫಲಯತ್ನವೆಂದು ತಿಳಿದು ಸುಮ್ಮನಾಗಿದ್ದೇನೆ. ಭ್ರಷ್ಟಾಚಾರವನ್ನು ಬಗೆದಷ್ಟೂ ಆಳವಾಗಿ ಹೋಗುಯತ್ತದೆ. ಇದಕ್ಕೆ ತಾರ್ಕಿಕ ಅಂತ್ಯ ಸಿಗುವುದಿಲ್ಲ ಎಂದು ಸುಮ್ಮನಾಗಿದ್ದೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರವನ್ನು ನಿಲ್ಲಿಸಲಿಕ್ಕೆ, ನನ್ನ ಕಾರ್ಯಕ್ರಮ ಏನೆಂದು ಹೇಳುತ್ತೇನೆ ಎಂದರು.

Latest Videos
Follow Us:
Download App:
  • android
  • ios