ಹುಬ್ಬಳ್ಳಿ, (ಜ.03): ಸಿಎಂ ಬದಲಾವಣೆ ಪಕ್ಕಾ ಆಗುತ್ತೆ. ಆದ್ರೆ, ಯಾವಾಗ ಗೊತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಸಿಎಂ ಬದಲಾವಣೆ ಇಲ್ಲ. ಯಡಿಯೂರಪ್ಪನವರೇ ಸುಪ್ರೀಂ ಎಂದು ಸ್ವತಃ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಇಂದು (ಭಾನುವಾರ) ಕಾರ್ಯಕರಣಿ ಸಭೆ ಮುಗಿದ ಬಳಿಕ ಹೇಳಿದ್ದಾರೆ.

ಆದ್ರೆ, ಇತ್ತ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯುವುದು ಪಕ್ಕಾ ಎಂದು ಹೇಳಿದರು. BSY ಪೂರ್ಣಾವಧಿ ಸಿಎಂ ಎಂಬ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​​​ ಹೇಳಿಕೆಗೆ ಅವರು ತೆಗೆದು ಹಾಕುತ್ತೇವೆ ಎಂದು ಹೇಳುವುದಕ್ಕೆ ಆಗುತ್ತಾ? ಎಂದು ಸಿದ್ದರಾಮಯ್ಯ ಟಾಂಗ್​ ಕೊಟ್ಟರು.

ಸಭೆ ಬಳಿಕ ರಾಜ್ಯ ಬಿಜೆಪಿ ಉಸ್ತುವಾರಿ ಮಹತ್ವದ ಘೋಷಣೆ: ಸಿಎಂ, ಸಚಿವಾಕಾಂಕ್ಷಿಗಳಿಗೆ ಬಿಗ್ ಶಾಕ್

ಬಿಜೆಪಿ ಸರ್ಕಾರ ತನ್ನ ಅವಧಿ ಪೂರ್ಣಗೊಳಿಸುತ್ತೆ‌. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಆಗಲ್ಲ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಾವೇ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಹಳೇ ಮೈಸೂರು, ರಾಜ್ಯದಲ್ಲಿ ನಾವೇ ನಂಬರ್ 1. ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಕಿಡಿಕಾರಿದು.

ಮೀಸಲಾತಿ ಕೇಳೋದು ತಪ್ಪಲ್ಲ. ನಾನು ಸಿಎಂ ಆಗಿದ್ದಾಗ 4 ಸಮುದಾಯಗಳನ್ನ ಶಿಫಾರಸ್ಸು ಮಾಡಿದ್ದೆ‌. ಈಶ್ವರಪ್ಪ ಸದ್ಯ ಕೇಂದ್ರ ಸರ್ಕಾರವನ್ನ ಕೇಳಲಿ. ಕುರುಬ ಸಮುದಾಯವನ್ನ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದು, RSS ಹಾಗೂ ಈಶ್ವರಪ್ಪರ ಕುತಂತ್ರ. ಬಿಜೆಪಿಯ ಸರ್ಕಾರವಿದೆ, ಈಶ್ವರಪ್ಪ ಹೋರಾಟ ಮಾಡೋದು ಬಿಟ್ಟು ಮೀಸಲಾತಿ ಕೊಡಿಸಲಿ ಎಂದರು.