ಬೆಂಗಳೂರು, (ಜ.21): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮತ್ತೆ ಸಚಿವರ ಖಾತೆಗಳ ಅದಲು-ಬದಲು ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.

ಹೌದು...ನೂತನ ಸಚಿವರುಗಳಿಗೆ ಸಿಎಂ ಖಾತೆ ಹಂಚಿಕೆ ಮಾಡಿದ್ದಾರೆ. ಇದರ ಜೊತೆ ಮಾ ಹಳೆ ಸಚಿವರ ಖಾತೆಯನ್ನೂ ಸಹ ಬದಲಾವಣೆ ಮಾಡಿದ್ದು, ಇದು ಅಸಮಾಧಾನಕ್ಕೆ ಕಾರಣವಾಗಿದೆ.

ಈ ಖಾತೆ ನಾನೇನು ಮಾಡಲಿ? ಬೇಡವೇ ಬೇಡ ಎಂದ ಸಚಿವ

ಎಂಟಿಬಿ ನಾಗರಾಜ್, ಸುಧಾಕರ್, ಗೋಪಾಲಯ್ಯ, ನಾರಾಯಣಗೌಡ, ಮಾಧುಸ್ವಾಮಿ ಸೇರಿದಂತೆ ಇನ್ನೂ ಕೆಲವರು ತಮ್ಮ ಖಾತೆ ಬಗ್ಗೆ ಅಸಮಾಧಾನಗೊಂಡಿದ್ದು, ಸಿಎಂ ಮೇಲೆ ಮುನಿಸಿಕೊಂಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಖಾತೆ ಹಂಚಿಕೆ  ಸಮಯದಲ್ಲಿ ಇದೆಲ್ಲಾ ಸಹಜ. ಎಲ್ಲರನ್ನೂ ಕರೆದು ಮಾತಾಡಿದ್ದೇನೆ. ಸ್ವಲ್ಪ ದಿನದ ಬಳಿಕ ಖಾತೆಗಳ ಅದಲು ಬದಲು ಮಾಡೋಣ ಎಂದು ಸ್ಪಷ್ಟಪಡಿಸಿದರು.

ಮಾಧುಸ್ವಾಮಿ, ಗೋಪಾಲಯ್ಯ ಎಲ್ಲರೂ ಸಮಾಧಾನವಾಗಿದ್ದಾರೆ. ಯಾರಿಗೂ ಅಸಮಾಧಾನವಿಲ್ಲ. ಅವರೆಲ್ಲರನ್ನೂ ಕರೆದು ನಾನು ಮಾತನಾಡುತ್ತೇನೆ. ಅವರು ಈಗ ನೀಡಿದ ಖಾತೆಯಲ್ಲಿ ಸ್ವಲ್ಪ ದಿವಸ ಕೆಲಸ ಮಾಡಲಿ. ಸರಿ ಹೋಗಲಿಲ್ಲ ಅಂದರೆ ಆಮೇಲೆ ಉತ್ತಮ ಖಾತೆ ನೀಡೋಣ ಎಂದು ಹೇಳಿದರು.