ಬೆಂಗಳೂರು, [ಜ.27]: ಸಂಪುಟ ವಿಸ್ತರಣೆ ಯಾವಾಗ ಎಂದು ಚಾತಕ ಪಕ್ಷಿಗಳಂತೆ ಕಾದಿದ್ದವರಿಗೆ ಕೊನೆಗೂ ಗುಡ್ ನ್ಯೂಸ್ ಕೊಟ್ಟಿದ್ದ ಬಿಎಸ್‌ವೈ ದಿಢೀರನೇ ತಮ್ಮ ವರಸೆ ಬದಲಿಸಿದ್ದಾರೆ.

ಅಳೆದು ತೂಗಿ, ಸಂಪುಟ ವಿಸ್ತರಣೆ ಪಟ್ಟಿ ಫೈನಲ್ ಮಾಡಿರುವ ಸಿಎಂ ಯಡಿಯೂರಪ್ಪ, ಈ ತಿಂಗಳ ಅಂತ್ಯದೊಳಗೆ ಸಂಪುಟ ವಿಸ್ತರಣೆ ಎಂದಿದ್ದರು. ಆದ್ರೆ, ಇದೀಗ ಬಿಎಸ್ ವೈ ಇದೀಗ ದಿಢೀರ್ ವರಸೆ ಬದಲಿಸಿದ್ದರಿಂದ ಮುಂದಿನ ತಿಂಗಳು ಅಂದ್ರೆ ಫೆಬ್ರವರಿ ಮೊದಲ ವಾರ ಸಂಪುಟ ವಿಸ್ತರಣೆಯಾಗುವ ಎಲ್ಲಾ ಸಾಧ್ಯತೆಗಳಿವೆ. 

ಮಂತ್ರಿಗಿರಿ ಕನಸು ಕಾಣುತ್ತಿರುವರಿಗೆ ಗುಡ್‌ ನ್ಯೂಸ್‌ ಕೊಟ್ಟ ಸಿಎಂ

ದೆಹಲಿಗೆ ಹೋಗಲು ಬಿಎಸ್ವೈ ತಯಾರಿ 
ಹೌದು...ಯಡಿಯೂರಪ್ಪ ಅವರು ಈ ಬಾರಿ ದೆಹಲಿಗೆ ಹೋಗದೇ ಸಂಪುಟ ವಿಸ್ತರಣೆ ಮಾಡುತ್ತಾರೆ ಎನ್ನಲಾಗಿತ್ತು. ಆದ್ರೆ, ಇದೀಗ ಬಿಎಸ್ ವೈ ದೆಹಲಿಗೆ ಹೋಗಲು ಎಲ್ಲಾ ತಯಾರಿ ನಡೆಸಿದ್ದಾರೆ. ಈ ಬಗ್ಗೆ ಸುವರ್ಣ ನ್ಯೂಸ್ ಗೆ ಅಧಿಕೃತ ಮಾಹಿತಿ ಸಿಕ್ಕಿದೆ.

ಜನವರಿ 30 ರಂದು ದೆಹಲಿ ವಿಮಾನ ಏರಲು ಯಡಿಯೂರಪ್ಪ ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಎಲ್ಲಾ ಪೂರ್ವ ನಿಗದಿತ ಕಾರ್ಯಕ್ರಮಗಳನ್ನ ರದ್ದು ಮಾಡಲು ಸೂಚಿಸಿದ್ದಾರೆ,

ಜ.30ಕ್ಕೆ ಹೊರಟು 31 ರಂದು ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಚರ್ಚೆ ನಡೆಸುವ ಬಗ್ಗೆ ಬಿಎಸ್ವೈ ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಹೈಕಮಾಂಡ್ ಓಕೆ ಎಂದರೆ ಫೆಬ್ರವರಿ ಮೊದಲ ವಾರದಲ್ಲಿ ವಿಸ್ತರಣೆ ಆಗಲಿದೆ.
  
ಇಲ್ಲದಿದ್ದರೆ ದೆಹಲಿ ಚುನಾವಣೆ ವರೆಗೂ ಸಂಪುಟ ಸರ್ಕಸ್ ನಡೆಯಲಿದೆ. ಎಲ್ಲದಕ್ಕೂ ಸ್ಪಷ್ಟ ಉತ್ತರ ಸಿಗುವುದು ಸಿಎಂ ದೆಹಲಿ ಭೇಟಿ ಬಳಿಕವಷ್ಟೆ. ಅಲ್ಲಿವರೆಗೂ ಕಾದು ನೋಡಬೇಕಷ್ಟೆ.