* ಬಿಎಸ್ ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ* ಮುಖ್ಯಮಂತ್ರಿ ಯಡಿಯೂರಪ್ಪ ಬೆನ್ನಿಗೆ ನಿಂತ ಸ್ವಾಮೀಜಿಗಳು* ಸಿಎಂ ಯಡಿಯೂರಪ್ಪ ಜೀ ಕಿ ಜೈ ಎಂದು ಘೋಷಣೆ 

ಬೆಂಗಳೂರು, (ಜು.21): ಕೆಲವು ಸ್ವಾಮೀಜಿಗಳು ಸಿಎಂ ಯಡಿಯೂರಪ್ಪ ಜೀ ಕಿ ಜೈ ಎಂದು ಘೋಷಣೆ ಕೂಗುವ ಮೂಲಕ ಮುಖ್ಯಮಂತ್ರಿ ಬಿಎಸ್‌ವೈಗೆ ಬೆಂಬ ಸೂಚಿಸಿರುವ ಪ್ರಸಂಗ ನಡೆದಿದೆ. 

ಇಂದು (ಬುಧವಾರ) ರಾಜ್ಯದ ಮೂಲೆ ಮೂಲೆಯಿಂದ ಸ್ವಾಮೀಜಿಗಳು ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಸಿಎಂ. ಬಿ.ಎಸ್. ಯಡಿಯೂರಪ್ಪ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದರು.

ಶಾಸಕಾಂಗ ಸಭೆ ರದ್ದಾದ ಬೆನ್ನಲ್ಲೇ ಬಿಜೆಪಿಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ

ಬಳಿಕ ಸಿಎಂ ನಿವಾಸ ಕಾವೇರಿಯಿಂದ ಹೊರಬರುತ್ತಿದ್ದಂತೆಯೇ ಸ್ವಾಮೀಜಿಯೊಬ್ಬರು ಯಡಿಯೂರಪ್ಪ ಜೀ ಕಿ ಜೈ ಎಂದು ಘೋಷಣೆ ಕೂಗಿದರು. ಇದಕ್ಕೆ ಜೊತೆಗಿದ್ದ ಕೆಲ ಸ್ವಾಮೀಜಿಗಳು ಸಣ್ಣ ಧ್ವನಿಯಲ್ಲಿ ಜೈ ಎಂದು ಧ್ವನಿಗೂಡಿಸಿದರು.

ನಾಯಕತ್ವ ಬದಲಾವಣೆ ಖಚಿತ ಎನ್ನಲಾಗುತ್ತಿದ್ದಂತೆಯೇ ಯಡಿಯೂರಪ್ಪ ಪರ ಒಟ್ಟಾಗಿ ಇಡೀ ವೀರಶೈವ-ಲಿಂಗಾಯತ ಸಮುದಾಯ ನಿಂತಿದೆ. 
 ಸಿಎಂ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆಯಾಗುತ್ತದೆ ಎಂಬ ಚರ್ಚೆ ತಾರಕಕ್ಕೇರಿದ ಬೆನ್ನಲ್ಲೇ ಕಾವೇರಿ ನಿವಾಸಕ್ಕೆ ಸ್ವಾಮೀಜಿಗಳ ದಂಡೇ ಹರಿದುಬರುತ್ತಿದ್ದು, ಯಡಿಯೂರಪ್ಪ ಪರ ಹೇಳಿಕೆ ನೀಡುತ್ತಿದ್ದಾರೆ.