ರಾಜ್ಯಸಭೆ ಎಲೆಕ್ಷನ್: ಹೈಕಮಾಂಡ್ ಕೊಟ್ಟ ಶಾಕ್‌ಗೆ ಮನೆ ಬಿಟ್ಟು ಬಾರದ ಯಡಿಯೂರಪ್ಪ

ಕರ್ನಾಟಕ ರಾಜ್ಯಸಭಾ ಚುನಾವಣೆಗೆ ಬಿಜೆಪಿ  ಅಚ್ಚರಿ ಅಭ್ಯರ್ಥಿ ಘೋಷಣೆ ಹಿನ್ನೆಲೆ ಸಿಎಂ ಬಿಎಸ್ ಯಡಿಯೂರಪ್ಪ ಗಪ್ ಚುಪ್ ಆಗಿದ್ದು, ಮನೆಯಿಂದ ಆಚೆ ಬಂದಿಲ್ಲ.

Yediyurappa Full Silent after BJP high command Final names Kadadi, Gasti as Rajya Sabha candidates

ಬೆಂಗಳೂರು, (ಜೂನ್.08): ರಾಜ್ಯಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಕಳುಹಿಸಿದ್ದ ಪಟ್ಟಿಯನ್ನು ತಿರಸ್ಕರಿಸಿರುವ ಹೈಕಮಾಂಡ್, ಇಬ್ಬರು ಸಾಮಾನ್ಯ ಕಾರ್ಯಕರ್ತರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.

ಬೆಳಗಾವಿಯ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಈರಣ್ಣ ಕಡಾಡಿ ಹಾಗೂ ಬಳ್ಳಾರಿ ಬಿಜೆಪಿ ಹಿಮದುಳಿದ ಮೋರ್ಚದ ಮಾಜಿ ಕಾರ್ಯದರ್ಶಿ ಅಶೋಕ್ ಗಸ್ತಿ ಅವರಿಗೆ ಮಣೆ ಹಾಕಿದೆ.

ಮಾಜಿ ಜಿ.ಪಂ ಅಧ್ಯಕ್ಷ, ಹಿಂದುಳಿದ ವರ್ಗ ಮೋರ್ಚದಲ್ಲಿ ಕೆಲ್ಸ ಮಾಡಿದವರಿಗೆ ರಾಜ್ಯಸಭಾ ಟಿಕೆಟ್

ಯಾರು ಊಹಿಸಲು ಸಾಧ್ಯವಿರದ ವ್ಯಕ್ತಿಗಳಿಗೆ ಟಿಕೆಟ್ ಘೋಷಣೆ ಮಾಡಿರುವುದು ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರನ್ನು ತಬ್ಬಿಬ್ಬಾಗುವಂತೆ ಮಾಡಿದೆ. ಅಲ್ಲದೇ ಬಿಎಸ್‌ ಯಡಿಯೂರಪ್ಪ ಅವರು ಅಚ್ಚರಿ ಅಭ್ಯರ್ಥಿಗಳ ಬಗ್ಗೆ ಗಪ್ ಚುಪ್ ಆಗಿ ಮನೆ ಸೇರಿದ್ದಾರೆ.

ಮನೆ ಸೇರಿದ ಬಿಎಸ್‌ವೈ
Yediyurappa Full Silent after BJP high command Final names Kadadi, Gasti as Rajya Sabha candidates

ಹೌದು.....ರಾಜ್ಯಸಭಾ ಚುನಾವಣೆಗೆ ಕರ್ನಾಟಕ ಬಿಜೆಪಿ ರಮೇಶ್ ಕತ್ತಿ, ಹಾಲಿ ಸದಸ್ಯ ಪ್ರಬಾಕ ಕೋರೆ ಮತ್ತು ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ಹೆಸರುಗಳನ್ನು ಫೈನಲ್ ಮಾಡಿ ಹೈಕಮಾಂಡ್‌ಗೆ ಕಳುಹಿಸಿತ್ತು.

ನಾವು ಕಳುಹಿಸಿರುವ ಮೂರು ಹೆಸರಗಳಲ್ಲಿ ಒಬ್ಬರಿಗೆ ಟಿಕೆಟ್ ಸಿಗುವ ಆಶಾಭಾವನೆಯಲ್ಲಿದ್ದರು. ಆದ್ರೆ, ರಾಜ್ಯ ಬಿಜೆಪಿ ಕೊಟ್ಟ ಪಟ್ಟಿಯನ್ನು ಹರಿದು ಎಸೆದ ಹೈಕಮಾಂಡ್ ಸಾಮಾನ್ಯರಲ್ಲಿ ಸಾಮಾನ್ಯರನ್ನು ಆಯ್ಕೆ ಮಾಡಿ ಅಚ್ಚರಿ ಮೂಡಿಸಿದೆ. ಇಂದು (ಸೋಮವಾರ) ಪಟ್ಟಿಯನ್ನು ನೋಡುತ್ತಿದ್ದಂತೆಯೇ ಫುಲ್ ಸೈಲೆಂಟ್ ಆದ ಸಿಎಂ ಯಡಿಯೂರಪ್ಪ, ಯಾರನ್ನೂ ಭೇಟಿಯಾಗದೆ, ನಿವಾಸದಿಂದ ಆಚೆ ಬರದೇ ತಮ್ಮ ಕಾವೇರಿ ನಿವಾಸದಲ್ಲೇ ಉಳಿದುಕೊಂಡಿದ್ದಾರೆ. 

ಕೊಪ್ಪಳದಲ್ಲೇ ಸಿಕ್ಕ ರಾಜ್ಯಸಭಾ ಅಚ್ಚರಿ ಅಭ್ಯರ್ಥಿಗೆ ಸಿಹಿ ತಿನ್ನಿಸಿದ ಬಿಜೆಪಿ ರಾಜ್ಯಾಧ್ಯಕ್ಷ

 ಈ ಮೂಲಕ ಹೈಕಮಾಂಡ್‌ ನಡೆಗೆ ಬಿಎಸ್‌ವೈಗೆ ಬೇಸರ ತಂದಿದ್ಯಾ? ಇಲ್ಲ ಪರೋಕ್ಷವಾಗಿ ಪರ್ಯಾಯ ನಾಯಕತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಕುರಿತು ಈ ಸೂಚನೆಯನ್ನು ನೀಡಿದ್ಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಒಂದು ಗುಂಪಿಗೆ ಫುಲ್ ಖಷ್
Yediyurappa Full Silent after BJP high command Final names Kadadi, Gasti as Rajya Sabha candidates

ಹೈಕಮಾಂಡ್ ತೆಗೆದುಕೊಂಡ ಅಚ್ಚರಿ ನಿರ್ಧಾರ ರಾಜ್ಯ ಬಿಜೆಪಿ ವಲಯದಲ್ಲಿ ದೊಡ್ಡ ಸಂಚಲನವನ್ನುಂಟು ಮಾಡಿದ್ದು, ಸಾಮಾನ್ಯ ಕಾರ್ಯಕರ್ತರಿಗೂ ಹೈಕಮಾಂಡ್ ಮಣೆ ಹಾಕಲಿದೆ ಎಂದು ಒಂದು ಗುಂಪು ಸಂಭ್ರಮ ಪಡುತ್ತಿದ್ದರೆ, ಮತ್ತೊಂದು ಗುಂಪು ಈ ಬೆಳವಣಿಗೆಯಿಂದ ತೀವ್ರ ಭ್ರಮನಿರಸನಕ್ಕೊಳಗಾಗಿದೆ.  

ರಾಜ್ಯಸಭಾ ಟಿಕೆಟ್ ಕೈತಪ್ಪಿದ್ರೂ ರಮೇಶ್ ಕತ್ತಿ ಫುಲ್ ಖುಷ್...!

ರಾಜ್ಯಸಭೆ ಟಿಕೆಟ್ ಪಡೆದವರಿಗೆ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳನ್ನ ಕೊರುತ್ತಿದ್ದರೆ. ಸಿಎಂ ಬಿಎಸ್‌ವೈ ಮಾತ್ರ ಸೈಲೆಂಟಾಗಿದ್ದಾರೆ. ಇದುವರೆಗೂ ಯಾವುದೇ ಟ್ವೀಟ್ ಆಗ್ಲಿ ದೂರವಾಣಿ ಕರೆಯಾಗಲಿ ಮಾಡದೇ ಸೈಲೆಂಟಾಗಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.

ರಾಜ್ಯಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಮೂಲಕ ಬಿಜೆಪಿ ಹೈಕಮಾಂಡ್, ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆ ಕುರಿತಂತೆ ಪರೋಕ್ಷ ಸೂಚನೆ ನೀಡಿದ್ಯಾ ಎನ್ನುವ ಚರ್ಚೆಗಳು ಸಹ ನಡೆಯುತ್ತಿವೆ.

ಒಟ್ಟಿನಲ್ಲಿ ಕರ್ನಾಟಕ ರಾಜ್ಯಸಭಾ ಚುನಾವಣೆ ಬಿಜೆಪಿ ಹೈಕಮಾಂಡ್ ತೆಗೆದುಕೊಂಡ ನಿರ್ಧಾರ ಎಲ್ಲರನ್ನ ಬೆಚ್ಚಿಬೀಳಿಸಿದಂತೂ ಸತ್ಯ.

Latest Videos
Follow Us:
Download App:
  • android
  • ios