ಸಿದ್ದರಾಮಯ್ಯ ಭೇಟಿಗೆ ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ

* ಸಿದ್ದರಾಮಯ್ಯ ಭೇಟಿಗೆ ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ
* ಅವರು ಯಾವಾಗಿದ್ದರೂ ನಮ್ಮ ಕಟ್ಟಾ ವಿರೋಧಿಗಳೇ
* ಬಾಗಲಕೋಟೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ..
 

Yediyurappa Clarifies Met Congress Leader Siddaramaiah at Bengaluru Airport rbj

ಬಾಗಲಕೋಟೆ, (ಜೂನ್.07): ಒಂದೆಡೆ ರಾಜ್ಯಸಭಾ ಚುನಾವಣೆ ರಂಗೇರಿದ್ದು, ಇದರ ಮಧ್ಯೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. ಅಲ್ಲದೇ ಕುಮಾರಸ್ವಾಮಿ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಇಂದು (ಮಂಗಳವಾರ) ಈ ಬಗ್ಗೆ ಬಾಗಲಕೋಟೆಯಲ್ಲಿ ಮಾಧ್ಯಮಗಳಿಗೆ ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ, ಅನಿರೀಕ್ಷಿತವಾಗಿ  ಸಿದ್ದರಾಮಯ್ಯ ಹೊರಟಿದ್ದರು,ಆಗ ನಾನು ಸಹ ಹೊರಟಿದ್ದೆ.ನಾನು ಕೂತಿದ್ದೆ ಅವರು ಸಹ ಬಂದರು.ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದ ಯಡಿಯೂರಪ್ಪ,ಬೇರೆ ಚರ್ಚೆ ಮಾಡುವ ಅಗತ್ಯವೇನಿದೆ. ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ,ನಮ್ಮ ಕಟ್ಟಾ ವಿರೋಧಿಗಳು ತಾನೆ ಅವರು. ಅವರ ಜೊತೆ ಯಾವುದೇ ಮಾತನಾಡುವ ಪ್ರಶ್ನೆ ಉದ್ಭವ ಆಗೋದಿಲ್ಲ,ನಾನು ಎಲ್ಲರ ಜೊತೆ ಸ್ನೇಹ ವಿಶ್ವಾಸ ಇಟ್ಟುಕೊಂಡಿದ್ದೇನೆ. ಅದರ ಬಗ್ಗೆ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯಸಭಾ ಚುನಾವಣೆ: ಕಾಂಗ್ರೆಸ್​ಗೆ ಓಪನ್ ಆಫರ್​ ಕೊಟ್ಟ ಕುಮಾರಸ್ವಾಮಿ

RSS ಟೀಕಿಸಿದ ಸಿದ್ದುಗೆ ಬಿಎಸ್‌ವೈ ಗುದ್ದು
ವಿರೋಧ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಗೌರವಯುತವಾಗಿ ನಡೆದುಕೊಳ್ತಾರೆ ಅನ್ನೋ ನಿರೀಕ್ಷೆ ಮಾಡಿದ್ವಿ ಆದರೆ RSS ಮತ್ತು ಚಡ್ಡಿ ಬಗ್ಗೆ ಮಾತನಾಡಿದರೆ ಸಿದ್ದರಾಮಯ್ಯಗೆ ಇರುವಷ್ಟು ಗೌರವ ಸಹ ಹಾಳಾಗುತ್ತೆ ಎಂದರು. 

 RSS ಬಗ್ಗೆ ಮಾತನಾಡುವುದರಿಂದ  ಸಿದ್ದರಾಮಯ್ಯನವರಿಗೆ  ಶೋಭೆ ಬರಲ್ಲ ಎಂದರು.ಇದೇ ಸಂದರ್ಭದಲ್ಲಿ,ಪಠ್ಯ ಪರಿಷ್ಕರಣೆ ವಿವಾದ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಲ್ಲ ಸರಿಪಡಿಸುತ್ತೇವೆಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ ಎಂದ ಯಡಿಯೂರಪ್ಪನವರು,ಪಠ್ಯ ಪರಿಷ್ಕರಣೆ ದೊಡ್ಡ ಗೊಂದಲ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಮುಳುಗುವ ಹಡಗು
ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ನೂತನ ಸಭಾಂಗಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯ ಸಮಾವೇಶದಲ್ಲಿ ಭಾಗವಹಿಸಿದ ಯಡಿಯೂರಪ್ಪ , ಬಿಜೆಪಿ ಅಭ್ಯರ್ಥಿಗಳಾದ ಅರುಣಕುಮಾರ ಶಹಾಪೂರ ಹಾಗೂ ಹನಮಂತ ನಿರಾಣಿ ಪರವಾಗಿ ನಿಂತು ಗೆಲ್ಲಿಸುವಂತೆ ಮನವಿ ಮಾಡಿದರು. 

ಇದೇ ವೇಳೆ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಎಸ್ವೈ, ಕಾಂಗ್ರೆಸ್ ಪಕ್ಷವೊಂದು ಮುಳುಗುವ ಹಡಗು, ಇತ್ತೀಚಿನ ಉತ್ತರ ಪ್ರದೇಶ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡರು. ಹೀಗಾಗಿ ಕಾಂಗ್ರೆಸ್ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಕರ್ನಾಟಕದಲ್ಲಿ ಸ್ವಲ್ಪ ಉಸಿರಾಡುತ್ತಿದೆ, ಅದು ಸಹ ನಿಲ್ಲಬೇಕು, ನಾನು ಮಾಜಿ ಸಿಎಂ ಆಗಿ ಮತಯಾಚನೆಗೆ ಬಂದಿದ್ದೇನೆ, ವಾಯವ್ಯ ಮತಕ್ಷೇತ್ರದ ಇಬ್ಬರು ಅಭ್ಯರ್ಥಿಗಳನ್ನ ಗೆಲ್ಲಿಸಿಕೊಡುವಂತೆ ಯಡಿಯೂರಪ್ಪ ಮನವಿ ಮಾಡಿದರು.
 ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ,ಮುರಗೇಶ ನಿರಾಣಿ ಸೇರಿ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರು ಹಾಗೂ ಬಿಜೆಪಿ ಪಕ್ಷದ‌ ಮುಖಂಡರು ಉಪಸ್ಥಿರಿದ್ದರು.

Latest Videos
Follow Us:
Download App:
  • android
  • ios