ಹಿಂದುತ್ವದ ಒಗ್ಗಟ್ಟಿಗೆ ಶಕ್ತಿ ತುಂಬುವ ಕೆಲಸ ಆಗಬೇಕು: ಅರುಣ್ ಕುಮಾರ್ ಪುತ್ತಿಲ
ಸನಾತವಾದ ಹಿಂದೂ ಧರ್ಮ, ಸಂಸ್ಕೃತಿ, ನಂಬಿಕೆ, ಶ್ರದ್ಧೆ ಯನ್ನು ಉಳಿಸುವ ನಿಟ್ಟಿನಲ್ಲಿ ನಾವು ಸಂಘಟಿತರಾಗಬೇಕು. ಹಿಂದುತ್ವಕ್ಕೆ ಕಾರ್ಯಕರ್ತರಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಆಗಬೇಕು ಎಂದು ಪ್ರಖರ ಹಿಂದುತ್ವವಾದಿ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಮೂಲ್ಕಿ (ಸೆ.28): ಸನಾತವಾದ ಹಿಂದೂ ಧರ್ಮ, ಸಂಸ್ಕೃತಿ, ನಂಬಿಕೆ, ಶ್ರದ್ಧೆ ಯನ್ನು ಉಳಿಸುವ ನಿಟ್ಟಿನಲ್ಲಿ ನಾವು ಸಂಘಟಿತರಾಗಬೇಕು. ಹಿಂದುತ್ವಕ್ಕೆ ಕಾರ್ಯಕರ್ತರಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಆಗಬೇಕು ಎಂದು ಪ್ರಖರ ಹಿಂದುತ್ವವಾದಿ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಕಿನ್ನಿಗೋಳಿ ಸಮೀಪದ ಎಸ್. ಕೋಡಿ ಕುಲಾಲ ಸಮಾಜ ಸೇವ ಸಂಘದ ಸಭಾಭವನದಲ್ಲಿ ಹಿಂದು ಧರ್ಮದ ಸಂಘಟನೆಯ ನಿಟ್ಟಿನಲ್ಲಿ ನಡೆದ ಪುತ್ತಿಲ ಪರಿವಾರದ ಕಾರ್ಯಕ್ರಮದಲ್ಲಿ ಮಾತನಾಡಿ ಇತ್ತೀಚಿನ ಸರ್ಕಾರದ ಹಿಂದೂ ವಿರೋಧಿ ಧೋರಣೆಗಳು ವಿದ್ಯಮಾನಗಳನ್ನು ಗಮನಿಸುವಾಗ ಹಿಂದು ಸಂಘಟನೆಗಳ ಕಾರ್ಯಕರ್ತರ ಗಡಿಪಾರು, ಕೇಸು ಹಾಕುವ , ಹಿಂದು ಶಕ್ತಿಗಳನ್ನು ದಮನ ಮಾಡುವ ಕೆಲಸ ಕೆಲವೂಂದು ಇಲಾಖೆಯ ಮೂಲಕವು ನಡೆಯುತ್ತಿದೆ.
ಮೋದಿ ಹಾಗೂ ಯೋಗಿಯಂತಹ ನಾಯಕರ ಅಗತ್ಯ ದೇಶಕ್ಕಿದೆ. ಇಡೀ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಹಿಂದುತ್ವವನ್ನು ಮತ್ತೆ ಸಂಘಟನೆಯಲ್ಲಿ ತೋಡಿಸಿಕೊಳ್ಳಲಾಗುವುದು ಎಂದು ಹೇಳಿದರು. ಪುತ್ತಿಲ ಪರಿವಾರದ ಸಂಘಟಕ ಉಮೇಶ್ ಮಾಹಿತಿ ನೀಡಿ, ಪ್ರತಿ ಗ್ರಾಮ ಮಟ್ಟದಲ್ಲಿ ಪುತ್ತಿಲ ಪರಿವಾರ ಸಂಘಟನೆ ಮಾಡಿ ಹಿಂದುತ್ವಕ್ಕೆ ಶಕ್ತಿ ಕೊಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು. ಕಟೀಲು ದೇವಸ್ಥಾನ ಪ್ರಧಾನ ಅರ್ಚಕ ಶ್ರೀಕರ ಆಸ್ರಣ್ಣ , ಅಕ್ಷಯ್ ತೋಕೂರು, ವಿಕ್ರಮ್ ತೋಕೂರು, ವಿನೋದ್ ತೋಕೂರು ಮತ್ತಿತರರು ಉಪಸ್ಥಿತರಿದ್ದರು.
ಕೋರ್ಟ್ ಹೊರಗೆ ಕಾವೇರಿ ಸಮಸ್ಯೆ ಪರಿಹಾರಕ್ಕೆ ನಾವು ಸಿದ್ಧ: ಸಿಎಂ ಸಿದ್ದರಾಮಯ್ಯ
ಸೌಜನ್ಯ ಪ್ರಕರಣದಲ್ಲಿ ಮರು ತನಿಖೆ ಮಾಡಬೇಕು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಮಾತನಾಡಿದ ಅವರು ಈ ಬಗ್ಗೆ ಇನ್ನು ನಿರ್ಧಾರ ಮಾಡಬೇಕು ಕಾಲಾವಕಾಶ ಇದೆ. ತಮಿಳುನಾಡಿನ ಸಚಿವ ಸ್ಟಾಲಿನ್ ಸನಾತನ ಹಿಂದೂ ಧರ್ಮದ ಬಗ್ಗೆ ಡೆಂಘಿ ಮಲೇರಿಯ ಹೋಲಿಕೆ ಮಾಡಿರುವುದು ನಾವು ಯೋಚನೆ ಮಾಡುವ ವಿಷಯವಾಗಿದೆ. ಹಿಂದೂ ಧರ್ಮ ದಮನ ಮಾಡುವ ನಿಟ್ಟಿನಲ್ಲಿ ಹೇಳಿಕೆಗಳು ಬರುತ್ತಿದೆ. ಮುಂದಿನ ದಿನಗಳಲ್ಲಿ ಜನರೆ ತಕ್ಕ ಉತ್ತರ ನೀಡಲಿದ್ದಾರೆ. ಇಡೀ ವಿಶ್ವಕ್ಕೆ ಕೊರೊನಾ ಸಂದರ್ಭ ಲಸಿಕೆ ತಯಾರಿ ವಿತರಣೆ ಮಾಡಿದ್ದು ಭಾರತ ಇದನ್ನು ಮರೆತಂತಿದೆ. ಸೌಜನ್ಯ ಪ್ರಕರಣದಲ್ಲಿ ಮರು ತನಿಖೆ ಮಾಡಬೇಕು ಕೇಸು ಹಾಕುವ ಸಂದರ್ಭ ಅಂದಿನ ಅಧಿಕಾರಿಗಳನ್ನು ಮತ್ತೆ ವಿಚಾರಣೆ ತನಿಖೆ ಮಾಡಬೇಕು ಎಂದು ಹೇಳಿದರು.