Asianet Suvarna News Asianet Suvarna News

'ನಾನು ಕುಳಿತುಕೊಳ್ಳುವವನಲ್ಲ'  ಲೀಲಾದೇವಿ ಪ್ರಸಾದ್ ಮಾತು ಸ್ಮರಿಸಿದ ದೇವೇಗೌಡರು!

* ನಾನು ಸಿಎಂ ಆದಾಗಿನಿಂದಲೇ ಲೀಲಾದೇವಿ ಆರ್ ಪ್ರಸಾದ್ ಹೇಳ್ತಾ‌ ಇದ್ದರು
* ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಅಂತಿದ್ರು
* ಅಂದು ಒಂದು ಸಭೆ ಮಾಡಿ ಹೆಣ್ಣು ಮಕ್ಕಳಿಗೆ ನೀಡಬೇಕಾದ ಸೌಲಭ್ಯದ ಬಗ್ಗೆ ಚರ್ಚೆ ಮಾಡಿದ್ವಿ
* ಹಳೆಯ  ದಿನಗಳನ್ನುನ ನೆನಪಿಸಿಕೊಂಡ ಮಾಜಿ ಪ್ರಧಾನಿ

women reservation former pm HD Deve Gowda remembers olden days mah
Author
Bengaluru, First Published Sep 2, 2021, 4:47 PM IST

ಬೆಂಗಳೂರು(ಸೆ. 02)  ನಾನು ಸಿಎಂ ಆದಾಗಿನಿಂದಲೇ ಲೀಲಾದೇವಿ ಆರ್ ಪ್ರಸಾದ್ ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಅಂತಿದ್ದರು.  ಅಂದು ಒಂದು ಸಭೆ ಮಾಡಿ ಹೆಣ್ಣು ಮಕ್ಕಳಿಗೆ ನೀಡಬೇಕಾದ ಸೌಲಭ್ಯದ ಬಗ್ಗೆ ಚರ್ಚೆ ಮಾಡಿದ್ವಿ. ಅದನ್ನೇ ಚುನಾವಣಾ ಪ್ರಣಾಳಿಕೆ ಮಾಡಿಕೊಂಡಿದ್ದೇವು. ಹೆಣ್ಣು ಮಕ್ಕಳಿಗೆ ಮೀಸಲಾತಿ ತರುವ ಬಗ್ಗೆ ಹೋರಾಟ ಮಾಡಿದೆವು.  ಕೆಲವು ರಾಜಕೀಯ ಪಕ್ಷಗಳು ಇದನ್ನು ವಿರೋಧ ಮಾಡಿದವು. ಆದರೆ ಸ್ಥಳೀಯ ಸಂಸ್ಥೆ ಗಳ ಚುನಾವಣೆಯಲ್ಲಿ ಹೆಣ್ಣು ಮಕ್ಕಳಿಗೆ ಮೀಸಲಾತಿ ತಂದೆವು ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದ್ದಾಆರೆ.

ಗೌಡರ ಭಾಷಣದ ವೇಳೆ  ಮಳೆ ಜೋರಾಗಿ  ಬಂದಿದೆ. ಈ ವೇಳೆ  ಸಭೆಯಲ್ಲಿದ್ದ ಮಹಿಳೆಯರು ಎದ್ದು ಹೊರಟಿದ್ದಾರೆ. ಆ ಸಂದರ್ಭದಲ್ಲಿ ಗೌಡರು ಇಂಥ ಮಾತು ಹೇಳಿದ್ದಾರೆ.

ಯಾರು ಪಕ್ಷಕ್ಕೆ ನಿಷ್ಠೆಯಿಂದ ಇರ್ತಾರೋ ಅಂತಹವರನ್ನು ಗುರುತಿಸುವ ಕೆಲಸ ಮಾಡಬೇಕು ಸೋತರೂ ಗೆದ್ದರೂ ಪಕ್ಷದಲ್ಲಿ ಇರ್ತೀನಿ ಅನ್ನೋರಿಗೆ ಟಿಕೆಟ್ ಕೊಡಬೇಕು. ನಾನು ಕುಳಿತುಕೊಳ್ಳುವವನಲ್ಲ. ಹೋರಾಟ ಮಾಡುವವನು. ಈ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವರು ಇದ್ದಾರೆ. ಬೆಂಗಳೂರಿನ ಕೊಳಚೆ ಪ್ರದೇಶ ನೋಡಿಕೊಂಡು ಬಂದವರ್ಯಾರೂ ಸಿಎಂ ಆಗಿಲ್ಲ. ನಾನು ಪ್ರತಿಯೊಂದು ಕೊಳಚೆ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದೇನೆ. ಪ್ರತಿ ಮನೆಗೂ ಅಕ್ಕಿ , ಸೀಮೆ ಎಣ್ಣೆ  ಕೊಟ್ಟಿದ್ದೇನೆ. ಕಾಂಗ್ರೆಸ್ ನವರು ಏನು ಮಾತಾಡ್ತಾರೆ ಎಲ್ಲಾ ಗೊತ್ತಿದೆ ಎಂದು ಠಕ್ಕರ್ ಕೊಟ್ಟರು.

ಕರ್ನಾಟಕದಲ್ಲಿ ಬಿಜೆಪಿಯ ಮುಂದಿನ ಟಾರ್ಗೆಟ್ ಬಿಚ್ಚಿಟ್ಟ ಅರುಣ್ ಸಿಂಗ್

ಇಪ್ಪತ್ತೆಂಟು ಕ್ಷೇತ್ರಗಳಿಗೆ ನಾವು ಅಭ್ಯರ್ಥಿ ಹಾಕ್ತೀವಿ. ಸೋತರೂ ಗೆದ್ದರೂ ತಲೆ ಕೆಡಿಸಿಕೊಳ್ಳಲ್ಲ. ಇಲ್ಲಿ ದೇವೇಗೌಡರಿಂದ ಅಥವಾ ಕುಮಾರಸ್ವಾಮಿಯಿಂದ ಪಕ್ಷ ಉಳಿಯೋದಲ್ಲ. ಲಕ್ಷಾಂತರ ಕಾರ್ಯಕರ್ತರು ಇದ್ದಾರೆ ಎಂದರು.

ನಾನು ಯಾರ ಪ್ರಭಾವ ತಂದರೂ ಬಿ ಫಾರ್ಮ್ ಕೊಡಲ್ಲ. ಕಾರ್ಯಕರ್ತರು ಯಾರು ಚೆನ್ನಾಗಿ ಕೆಲಸ ಮಾಡ್ತಾರೋ ಅವರಿಗೆ ಕೊಡ್ತೀನಿ. ಪ್ರಾಮಾಣಿಕವಾಗಿ ಶಕ್ತಿ ಮೀರಿ ಕೆಲಸ ಮಾಡ್ತೀನಿ. ಮುಸ್ಲಿಮರ ಕೈ ಬಿಡುವುದಿಲ್ಲ. ನಮಗೆ ಎಲ್ಲರೂ ಒಂದೇ ಯಾರನ್ನು ಕೈ ಬಿಡಲ್ಲ ಎಂದರು.

ಹಳೇ ಮೈಸೂರು ಭಾಗದ ಜೆಡಿಎಸ್ ನಾಯಕ ಜಿಟಿ ದೇವೇಗೌಡ ಪಕ್ಷ ತೊರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕೆಲ ದಿನಗಳ ಹಿಂದೆ ಮಾಜಿ ಸಿಎಂ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಕೈ ಹಿಡಿದಿದ್ದರು. 

Follow Us:
Download App:
  • android
  • ios