ಕರ್ನಾಟಕದಲ್ಲಿ ಬಿಜೆಪಿಯ ಮುಂದಿನ ಟಾರ್ಗೆಟ್ ಈ ಪ್ರದೇಶ.. ಗುಟ್ಟು ಬಿಚ್ಚಿಟ್ಟ ಅರುಣ್ ಸಿಂಗ್
* ನಾನು ಪಾರ್ಟಿ ಬಲಪಡಿಸುವ ಸಲುವಾಗಿ ಟೂರ್ ಮಾಡಿದ್ದೇನೆ
* ಹಳೆ ಮೈಸೂರು ಭಾಗದಲ್ಲಿ ಪಾರ್ಟಿ ಬಲಪಡಿಸಲು ಸಭೆ ಮಾಡಲಾಗಿದೆ
* ಜೊತೆಗೆ ಮೋದಿ ಸ್ಕೀಮ್ ಜನರಿಗೆ ತಲುಪಿಸಲು ಕಾರ್ಯಕರ್ತರಿಗೆ ಹೇಳಲಾಗಿದೆ
* ಮುಂಬರುವ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಸೀಟ್ ಗೊಲ್ಲೋದು ನಮ್ಮ ಗುರಿ
* ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪ್ರವಾಸ
ಬೆಂಗಳೂರು(ಸೆ. 02) ನಾನು ಪಾರ್ಟಿ ಬಲಪಡಿಸುವ ಸಲುವಾಗಿ ಟೂರ್ ಮಾಡಿದ್ದೇನೆ. ಹಳೆ ಮೈಸೂರು ಭಾಗದಲ್ಲಿ ಪಾರ್ಟಿ ಬಲಪಡಿಸಲು ಸಭೆ ಮಾಡಲಾಗಿದೆ. ಜೊತೆಗೆ ಮೋದಿ ಸ್ಕೀಮ್ ಜನರಿಗೆ ತಲುಪಿಸುವ ಸಲುವಾಗಿ ಕಾರ್ಯಕರ್ತರಿಗೆ ತಿಳಿಸಲಾಗಿದೆ. ಮುಂಬರುವ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಸೀಟ್ ಗೊಲ್ಲೋದು ನಮ್ಮ ಗುರಿ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಕುಮಾರಸ್ವಾಮಿಯವರ ಹೇಳಿಕೆ ಬಗ್ಗೆ ಈಗಾಗಲೇ ಮಾತಾಡಿದ್ದೇನೆ. ಮತ್ತೆ ಮತ್ತೆ ಯಾಕೆ ಕೇಳ್ತಿರಿ. ಗೌರವದಿಂದ ಅವರು ಮಾತನಾಡಬೇಕು. ನಾವು ಹಳೆ ಮೈಸೂರು ಹೆಚ್ಚು ಸೀಟ್ ಗೆಲ್ಲಲು ಸಂಪೂರ್ಣ ಶ್ರಮ ಹಾಕ್ತೇವೆ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲೂ ನಮ್ಮ ಹೋರಾಟ ಇರಲಿದೆ ಎಂದರು. .
ಅರುಣ್ ಸಿಂಗ್ ಗೆ ಠಕ್ಕರ್ ನೀಡಿದ ಕುಮಾರಸ್ವಾಮಿ
ಬೆಲೆ ಏರಿಕೆ ವಿಚಾರವನನ್ನು ಅರುಣ್ ಸಿಂಗ್ ಸಮರ್ಥನೆ ಮಾಡಿಕೊಂಡಿದ್ದಾರೆ. ಬಡವರಿಗೆ ಮೋದಿ ಸರ್ಕಾರ ಅನೇಕ ಯೋಜನೆ ಮಾಡಿದೆ. ರೈತರ ಅಕೌಂಟ್ ಗೆ ಆರು ಸಾವಿರ ಹಾಕ್ತಾ ಇದ್ದಾರೆ. ಆಯುಷ್ ಮಾನ್ ಭಾರತ ಯೋಜನೆಯಿಂದ ಜನರಿಗೆ ಅನುಕೂಲ ಆಗಿದೆ. ಜಲ ಮಿಷನ್ ಯೋಜನೆ ಮಾಡಲಾಗಿದೆ. ಈ ಎಲ್ಲಾ ಯೋಜನೆ ಮೂಲಕ ಬಡವರಿಗೆ ಅನುಕೂಲ ಆಗಿದೆ. ಸರ್ಕಾರಕ್ಕೆ ತೆರಿಗೆ ಸಂಗ್ರಹ ಆಗಬೇಕಿದೆ ಎಂದು ಪರೋಕ್ಷವಾಗಿ ದರ ಏರಿಕೆ ಸಮರ್ಥನೆ ಮಾಡಿಕೊಂಡರು.
ಡಿಸೆಲ್ ಪೆಟ್ರೋಲ್ ಬೆಲೆ ಇದು ತಾತ್ಕಾಲಿಕ ಏರಿಕೆ ಅಷ್ಟೆ. ಮುಂದಿನ ದಿನಗಳಲ್ಲಿ ಬೆಲೆ ಕಡಿಮೆ ಆಗಲಿದೆ. ಟೊಮೆಟೊ, ಪೆಟ್ರೊಲ್, ಡಿಸೆಲ್, ಈರುಳ್ಳಿ ಒಂದು ವಸ್ತುವಿನ ಬೆಲೆ ಮೇಲೆ ಮಾತ್ರ ಪ್ರಶ್ನೆ ಮಾಡಿದ್ರೆ ನಾನು ಉತ್ತರ ನೀಡೊಕೆ ಆಗೋದಿಲ್ಲ. ಯುಪಿಎ ಸರ್ಕಾರ ಇದ್ದಾಗಲೂ ಬೆಲೆ ಏರಿಕೆ ಆಗಿತ್ತು .ಆಗ ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್ ನೂರು ದಿನಗಳಲ್ಲಿ ಬೆಲೆ ಕಂಟ್ರೋಲ್ ಮಾಡೋದಾಗಿ ಹೇಳಿದ್ರು. ಆದ್ರೆ ಅದು ಅವರಿಂದ ಆಗಿರಲಿಲ್ಲ,ಶೇ 15 ರಷ್ಟು ಬೆಲೆ ಏರಿಕೆ ಆಗಿತ್ತು.. ಆದ್ರೆ ಮೋದಿ ಅವಧಿಯಲ್ಲಿ ಬೆಲೆ ನಿಯಂತ್ರಣದಲ್ಲಿ ಇದೆ. ಡಬಲ್ ಎಂಜಿನ್ ಸರ್ಕಾರ ನಡೆಯುತ್ತಿದೆ. ಅಭಿವೃದ್ಧಿ ಆಗ್ತಾ ಇದೆ ಎಂದು ಸಮರ್ಥನೆ ನೀಡಿದರು.