ಕುಮಾರಸ್ವಾಮಿಗೆ ಸಲಹೆ ನೀಡಿದ ಅನಿತಾ : ಬೇಡಿಕೆಗಳ ಪಟ್ಟಿ ಇಟ್ಟ ಶಾಸಕಿ

  • ಮಹಿಳೆಯರ ಬಗ್ಗೆ ಟೀಕೆಗಳೇ ಹೆಚ್ಚು ಆದರೆ ಅದರ ಬಗ್ಗೆ ಕೊರಗದಿರಿ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು. 
  • ರಾಮನಗರದಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ
Woman Should Become Strong and indipendent says Anitha kumaraswamy snr

ರಾಮನಗರ (ಸೆ.29):  ನಮ್ಮಲ್ಲಿ ಅನೇಕ‌ ಮಹಿಳೆಯರು ಸಾಧನೆ ಮಾಡಿದ್ದಾರೆ. ಸಾನಿಯಾ ಮಿರ್ಜಾ (Sania Mirza ) ಕೂಡ ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ದಾರೆ.  ಪುರುಷ ಪ್ರಧಾನ ಸಮಾಜವಾಗಿದೆ ನಮ್ಮದು. ಮಹಿಳೆಯರ ಬಗ್ಗೆ ಟೀಕೆಗಳೇ ಹೆಚ್ಚು ಆದರೆ ಅದರ ಬಗ್ಗೆ ಕೊರಗದಿರಿ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ (Anitha Kumaraswamy) ಹೇಳಿದರು. 

ರಾಮನಗರದಲ್ಲಿ (Ramanagara) ನಡೆಯುತ್ತಿರುವ ಜೆಡಿಎಸ್ (JDS) ಸಮಾವೇಶದಲ್ಲಿ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ, ಮಹಿಳೆಯರಿಗೆ ಅವಕಾಶ ಸಿಗೋದು ಕಡಿಮೆ. ಆದರೆ ನಾವು ಇಂಡಿಪೆಂಡೆಂಟ್ ಆಗಿ ಇರಬೇಕು. ಟೀಕೆ ಟಿಪ್ಪಣಿಗಳು ಹೆಚ್ಚಾಗಿಯೆ ಇರುತ್ತದೆ. ಆದರೆ ಅದರ ಬಗ್ಗೆ ಚಿಂತಿಸದೇ ಮುನ್ನುಗ್ಗಬೇಕು ಎಂದು ಸಲಹೆ ನೀಡಿದರು.  

ಮೀಸಲಾತಿ ವಿಚಾರದಲ್ಲಿ ದೇವೇಗೌಡರ ಕೊಡುಗೆ ಮೀಸಲಾತಿ ವಿಚಾರದಲ್ಲಿ ದೇವೇಗೌಡರ (HD Devegowda) ಕೊಡುಗೆ ಅಪಾರ. ಸ್ವತಂತ್ರವಾಗಿ ಮಹಿಳೆಯರು ಕೆಲಸ ನಿಭಾಯಿಸಲು ಕಲಿಯಬೇಕು. ದೇವರು ಅವಕಾಶ ಕೊಟ್ಟಿದ್ದಾನೆ ಆದರೆ ಇಂಡಿಪೇಂಡೆಂಟ್ ಆಗಿ ಬದುಕಬೇಕು. ಯಜಮಾನರನ್ನು ಕೇಳಬೇಕು ಎನ್ನುವುದನ್ನು ಬಿಡಿ ಸ್ವತಂತ್ರವಾಗಿ ಬದುಕಬೇಕು.  ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ ಎಲ್ಲಾ ಕ್ಷೇತ್ರಗಳಲ್ಲಿ ಇದ್ದಾರೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದರು.

'ಒಳ್ಳೆ ಕೆಲಸ ಮಾಡ್ತಿದ್ಯ, ಮಾಡವ್ವ ನಿಂಗೆ ಒಳ್ಳೇದಾಗ್ಲಿ' : ಅನಿತಾಗೆ ಸಿಕ್ಕ ವಿಶೇಷ ಆಶೀರ್ವಾದ

ರಾಜಕಾರಣ ಏನಾದರು ತಿಳಿದುಕೊಂಡರೆ ಅದು ದೇವೇಗೌಡರಿಂದ. ಬದಲಾವಣೆ ಪರ್ವ ಬಂದಿದೆ ಎನ್ನುವ ಭಾವನೆ ಇದೆ. ಜನರೂ ಕೂಡ ಬದಲಾವಣೆಯನ್ನು ಬಯಸುತ್ತಿದ್ದಾರೆ. ಬಡವರ, ರೈತರ ಪರ ಸರ್ಕಾರ ಮಾಡಬೇಕು. ಮುಂದಿನ ದೃಷ್ಟಿ ಇರುವ ರಾಜಕಾರಣಿ ಆಗಬೇಕು. ನಾವ್ಯಾರು ನಿರೀಕ್ಷಿಸದಂತ ಸ್ಥಾನ ದೇವೇಗೌಡರಿಗೆ ದೊರಕಿದೆ. ನಾನು ಅವರ ಸೊಸೆ ಒಂದು ಕಡೆಯಾದ್ರೆ ಅವರ ಅಪ್ಪಟ ಅಭಿಮಾನಿ. ಯಾವುದೇ ಒಂದು ವಿಚಾರಕ್ಕೆ ಬೇಜಾರಾದರೂ ಅವರ ಜೀವನ‌ ಮೆಲುಕು ಹಾಕಿದರೆ ಸಾಕು. ಏನೋ‌ ಒಂದು ರೀತಿಯಾದ ಸಮಾಧಾನ ಅಧಿಕಾರದಲ್ಲಿ ಇದ್ದಾಗ ಅನೇಕ ಸಮಾಜಮುಖಿ ಕಾರ್ಯ ಮಾಡಿದ್ದಾರೆ ಎಂದರು.

ಚಾಮುಂಡೇಶ್ವರಿ ಸೇಡು ತುಮಕೂರಿನಲ್ಲಿ ಸಮಾಪ್ತಿ...ಗೌಡ್ರು ಬಿಚ್ಚಿಟ್ಟ ರಹಸ್ಯ

ಕುಮಾರಸ್ವಾಮಿಗೆ ಸಲಹೆ :  ಕುಮಾರಸ್ವಾಮಿ (HD Kumaraswamy) ಸಿಎಂ ಆದಾಗ ಮಾಡಿದ್ದ ಕಾರ್ಯಕ್ರಮ ಗಳು. ಸರ್ಕಾರ ಬಂದರೆ ಮಾಡಬೇಕಿದ್ದ ಕೆಲಸಗಳ ಬಗ್ಗೆಯೂ ಈ ವೇಳೆ  ಅನಿತಾ ಕುಮಾರಸ್ವಾಮಿ ಗಮನ ಸೆಳೆದರು.

ಕೇವಲ ರೈತರ ಸಾಲ (Farmers Loan) ಮನ್ನಾ ಮಾಡಿದರೆ ಸಾಕೆ.? ಮಹಿಳೆಯರ ಸಾಲ ಮನ್ನಾ ಮಾಡಿ  ಎಂದು ಕೇಳುತ್ತಿದ್ದಾರೆ. ಮಹಿಳೆಯರಿಗೆ ವಿಶೇಷವಾದ ಕಾರ್ಯಕ್ರಮ‌ ಕೊಡಿ ಎಂದು ಕುಮಾರಸ್ವಾಮಿ ಗೆ ಸಲಹೆ ನೀಡಿದರು.  ಮಹಿಳೆಯರ ಸಾಲ ಮನ್ನಾ ಮಾಡಿ ಎಂದು ಸಲಹೆ ನೀಡಿದ್ದಲ್ಲದೇ. ಪಂಚರತ್ನ ಯೋಜನೆ ಮಾಡಲಾಗುತ್ತಿದೆ. ಜೊತೆಗೆ ಫ್ರೀ ಎಜುಕೇಷನ್ (Free Education) ಎನ್ನುವುದನ್ನು ಅನೌನ್ಸ್ ಮಾಡಿದರೆ ಇನ್ನೂ ಒಳ್ಳೆಯದು. ಫ್ರೀ‌ ಹೆಲ್ತ್ ಸ್ಕೀಮ್ ಮಾಡಿದರೆ ಅನುಕೂಲವಾಗುತ್ತದೆ.  ಪ್ರತಿ ಜಿಲ್ಲೆಯಲ್ಲೂ ಏನಾಗುತ್ತಿದೆ ಎಂದು ಮಾನಿಟರ್ ಮಾಡಬೇಕು. ಇದಕ್ಕಾಗಿ ಸೂಪರ್ ವೈಸರ್ ನೇಮಕ ಮಾಡಿದರೆ ಒಳ್ಳೆಯದು ಎಂದರು.

Latest Videos
Follow Us:
Download App:
  • android
  • ios