ಎಸ್.ನಿಜಲಿಂಗಪ್ಪ ಇಲ್ಲದಿದ್ದರೆ ಕರ್ನಾಟಕ ಏಕೀಕರಣ ಆಗುತ್ತಿರಲಿಲ್ಲ: ಸಂಸದ ಬೊಮ್ಮಾಯಿ

ಮಾಜಿ ಮುಖ್ಯಮಂತ್ರಿ ದಿ. ಎಸ್. ನಿಜಲಿಂಗಪ್ಪ ಅವರು ಇಲ್ಲದಿದ್ದರೆ ಕರ್ನಾಟಕ ಏಕೀಕರಣ ಆಗುತ್ತಿರಲಿಲ್ಲ. ರಾಜಕೀಯವಾಗಿ ಬಣಜಿಗ ಸಮಾಜ ದೊಡ್ಡ ಕೊಡುಗೆ ದೊಡ್ಡದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Without S Nijalingappa Karnataka would not have been unified Says MP Basavaraj Bommai gvd

ಸವಣೂರು (ಜು.15): ಮಾಜಿ ಮುಖ್ಯಮಂತ್ರಿ ದಿ. ಎಸ್. ನಿಜಲಿಂಗಪ್ಪ ಅವರು ಇಲ್ಲದಿದ್ದರೆ ಕರ್ನಾಟಕ ಏಕೀಕರಣ ಆಗುತ್ತಿರಲಿಲ್ಲ. ರಾಜಕೀಯವಾಗಿ ಬಣಜಿಗ ಸಮಾಜ ದೊಡ್ಡ ಕೊಡುಗೆ ದೊಡ್ಡದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ಸವಣೂರು ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಸವಣೂರು ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಲಾದ ತಾಲೂಕು ಬಣಜಿಗ ಸಮಾಜದ ದ್ವಿತೀಯ ಸಮಾವೇಶದ ಪ್ರಯುಕ್ತ ನೂತನ ಸಂಸದರಿಗೆ ಸನ್ಮಾನ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಮಾಜಕ್ಕೆ ಕೂಡುವುದು ಕಳಿಯುವುದು ಕಲಿಸಿದವರು ನೀವು. ಸಮಾಜಕ್ಕೆ ಲೆಕ್ಕ ಹೇಳಿಕೊಟ್ಟರು ನೀವು. ನಾವು ನಿಮಗೆ ಋಣಿಯಾಗಿರಬೇಕು. ವ್ಯಾಪಾರ ವ್ಯವಹಾರ ಹೇಗಿರಬೇಕು ಎಂದು ಕಲಿಸಿದವರು ನೀವು, ರೈತ ಬಾಂಧವರಿಗೆ ಹೊಲದಲ್ಲಿ ಬೆಳೆದು ಸುಗ್ಗಿ ಮಾಡಿದರೆ ಅವನ ಕೆಲಸ ಮುಗಿಯಿತು. ಅದನ್ನು ಮಾರಾಟ ಮಾಡುವ ಕೆಲಸವನ್ನು ನೀವು ಮಾಡುತ್ತೀರಿ, ಕೆಲವು ಸಾರಿ ನಮ್ಮ ಕಾಯಕ ನಾವು ಮಾಡುತ್ತೇವೆ. ಅದರ ಮಹತ್ವ ನಮಗೆ ಗೊತ್ತಿರುವುದಿಲ್ಲ ಎಂದರು. ರಾಜಕೀಯವಾಗಿ ಬಣಜಿಗ ಸಮಾಜ ದೊಡ್ಡ ಕೊಡುಗೆ ಕೊಟ್ಟಿದೆ. ದಿವಂಗತ ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರು ಇಲ್ಲದಿದ್ದರೆ ಕರ್ನಾಟಕ ಏಕೀಕರಣ ಆಗುತ್ತಿರಲಿಲ್ಲ. 

ಬೆಂಗಳೂರು ಕಾನ್ವೆಂಟ್‌ ಮಾದರಿಯಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿ: ಸಚಿವ ಎಂ.ಬಿ.ಪಾಟೀಲ್‌

ಹಳೆ ಕರ್ನಾಟಕ, ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಒಂದು ಮಾಡಿದವರು ನಿಜಲಿಂಗಪ್ಪನವರು. ಅವರು ಶಿಗ್ಗಾಂವಿ‌ ಕ್ಷೇತ್ರಕ್ಕೆ ಬಂದು ಅವಿರೋಧವಾಗಿ ಆಯ್ಕೆಯಾಗಿ ಇಲ್ಲಿಂದ ಮುಖ್ಯಮಂತ್ರಿಯಾದರು. ಅವರಿಗೂ ಈ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ ಇದೆ ಎಂದರು. ಅವರು ಸಾಮಾಜಿಕ ಜೀವನ, ಆರ್ಥಿಕ ಬದುಕು, ಶಿಕ್ಷಣದಲ್ಲಿ ನಾಯಕತ್ವ ವಹಿಸಿದ್ದರು. ಆರವತ್ತರ ದಶಕದಲ್ಲಿದ್ದ ನಾಯಕತ್ವ ಈಗ ಇಲ್ಲ. ಆ ನಾಯಕತ್ವವನ್ನು ಮತ್ತೆ ಪಡೆಯಲು ಸಂಘಟನೆ ಮುಖ್ಯವಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮೊದಲು ವೀರಶೈವ ಸಮುದಾಯಗಳಲ್ಲಿ ನಾಯಕತ್ವ ಪಡೆದರೆ ನಂತರ ಸಮಾಜದಲ್ಲಿ ರಾಜಕೀಯ ನಾಯಕತ್ವ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೆಎಲ್‌ಇ ಸಂಸ್ಥೆ ಸ್ಥಾಪನೆ ಅತ್ಯಂತ ಮಹತ್ವದ ಕಾರ್ಯವಾಗಿದ್ದು, ಅದನ್ನು ಕಟ್ಟುವಲ್ಲಿ ಈ ಸಮಾಜದ ಪ್ರಮುಖರ ಪಾತ್ರ ಮಹತ್ವದ್ದು, ಅದು ಬೇರೆ ಬೇರೆ ಪ್ರದೇಶದಲ್ಲಿ ನಿರಂತರವಾಗಿ ಮುಂದುವರೆಯಬೇಕು. ಈ ಸಮಾಜದ ಜೊತೆಗೆ ಯಾರು ಒಡನಾಟ ಹೊಂದಿದ್ದಾರೆ ಅವರು ಬೇರೆ ಬೇರೆ ಕ್ಷೇತ್ರದಲ್ಲಿಯೂ ಮುಂದೆ ಬಂದಿದ್ದಾರೆ. ಈ ಸಮಾಜದ ಎರಡು ಅಕ್ಷರ ಶುಭ ಲಾಭ ಎಲ್ಲಿ ಶುಭ ಇರುತ್ತದೆಯೋ ಅಲ್ಲಿ ಲಾಭ ಇರುತ್ತದೆ. ಸಮುದಾಯದ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಏನು ಸಹಾಯ ಬೇಕೊ ಅದನ್ನು ಕೊಡಿಸುವ ಕೆಲಸ ಮಾಡುತ್ತೇನೆ. ನೀವು ನನಗೆ ಎಷ್ಟು ಶಕ್ತಿ ಕೊಟ್ಟಿದ್ದೀರಿ ಅಂದರೆ, ನನ್ನ ಸ್ಥಾನ ಇರಲಿ ಇಲ್ಲದಿರಲಿ, ನಿಮ್ಮ ಸೇವೆ ಮಾಡುವ ಶಕ್ತಿ ಕೊಟ್ಟಿದ್ದೀರಿ. ಅಧಿಕಾರಕ್ಕೂ ಸೇವೆಗೂ ಸಂಬಂಧ ಇಲ್ಲ. ನೀವು ಕೊಟ್ಟಿರುವ ಶಕ್ತಿಯನ್ನು ನಿಮ್ಮ ಪರವಾಗಿ ಬಳಕೆ ಮಾಡುತ್ತೇನೆ ಎಂದು ಹೇಳಿದರು.

ಸಿಎಂ, ಡಿಸಿಎಂ ಮಧ್ಯೆ ಏನು ಚರ್ಚೆ ಆಗುತ್ತೆ ಅನ್ನೋದನ್ನ ಸಲೀಂ ಅಹ್ಮದ್ ತಿಳಿದುಕೊಳ್ಳಲಿ: ಸಂಸದ ಬೊಮ್ಮಾಯಿ

ಮನುಷ್ಯನಿಗೆ ಉಪಕಾರ ಸ್ಮರಣೆ ಬಹಳ ಮುಖ್ಯ. ನನ್ನ ನಿಮ್ಮ ನಡುವಿನ ಸಂಬಂಧ ನಿರಂತರವಾಗಿ ಇರಬೇಕು ಎಂದರೆ ಉಪಕಾರ ಸ್ಮರಣೆ ಮುಖ್ಯವಾಗಿದೆ. ಬರುವ ದಿನಗಳಲ್ಲಿ ಈ ಸಮಾಜಕ್ಕೆ ನನ್ನಿಂದ ಏನಾದರೂ ಸಹಾಯ ಬೇಕಿದ್ದರೆ ನನ್ನ ಬಳಿ ಬಂದರೆ ನಾನು ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ನಿಮ್ಮ ಒಬ್ಬ ಸಹೋದರ ದೆಹಲಿಗೆ ಹೋದರೂ ಶಿಗ್ಗಾಂವಿ ಸವಣೂರಿನಲ್ಲಿ ನಿಮ್ಮ ಸೇವೆ ಮಾಡುತ್ತಾನೆ ಎಂದು ತಿಳಿಯಿರಿ, ಸಮಾಜದ ಸ್ವಾಮೀಜಿಗಳ ಮಾರ್ಗದರ್ಶನ ಹಾಗೂ ಆಶೀರ್ವಾದದಿಂದ ಸಮಾಜದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ ಶೆಟ್ಟರ್ , ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಸಮಾಜದ ಹಲವಾರು ಪ್ರಮುಖರು, ಮುಖಂಡರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios