Asianet Suvarna News Asianet Suvarna News

ದೆಹಲಿಯಲ್ಲಿ ರೆಡಿ ಆಗ್ತಿದೆ ಸಚಿವ ಸ್ಥಾನದ ಪಟ್ಟಿ, ಯಾರಿಗೆಲ್ಲ ಲಕ್?

ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿ ಪ್ರವಾಸ/  ವಿವಿಧ ಕೇಂದ್ರ ಸಚಿವರನ್ನು ಭೇಟಿ ಮಾಡಲಿರುವ ಸಿಎಂ/ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿಹಿಸುದ್ದಿ ಸಿಗುತ್ತಾ?/ ಯಡಿಯೂರಪ್ಪ ಜತೆಗೆ ದೆಹಲಿಗೆ ತೆರಳಿರುವ ಅನೇಕ ನಾಯಕರು

With hopes for Cabinet expansion CM Yediyurappa Delhi visit
Author
Bengaluru, First Published Sep 17, 2020, 5:08 PM IST

ನವದೆಹಲಿ(ಸೆ. 17)  ಸಚಿವ ಸ್ಥಾನದ ಆಕಾಂಕಕ್ಷಿಗಳಿಗೆ ಶುಕ್ರವಾರ ಸಿಹಿ ಸುದ್ದಿ ಸಿಗಲಿದೆಯಾ?  ಎಂಬ ಪ್ರಶ್ನೆ ಮೂಡಿದೆ. ಮೂರು ದಿನಗಳ ಭೇಟಿಗೆ ದೆಹಲಿಗೆ ಆಗಮಿಸಿರುವ ಸಿಎಂ ಯಡಿಯೂರಪ್ಪ, ಪ್ರಧಾನಿ ಮತ್ತು ನಡ್ಡಾ ಅವರನ್ನು ಶುಕ್ರವಾರ ಭೇಟಿಯಾಗಲಿದ್ದಾರೆ. ಇದೇ ವೇಳೆ ಸಂಪುಟ ವಿಸ್ತರಣೆ ಮತ್ತು ರಾಜ್ಯದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸುವುದಾಗಿ ಬಿಎಸ್ ವೈ ಹೇಳಿದ್ದಾರೆ. ಸಂಪುಟ ವಿಸ್ತರಣೆ ಅಥವಾ ಪುನರಚನೆಯ ಬಗ್ಗೆ ಹೈಕಮಾಂಡ್ ಸಲಹೆ ಪಡೆಯಲಿದ್ದೇನೆ ಎಂದಿದ್ದಾರೆ.

ಸೆ.17 ರಿಂದ ಮೂರು ದಿನಗಳ ಕಾಲ ದೆಹಲಿಯಲ್ಲಿ ತಂಗಲಿರುವ ಬಿಎಸ್ ವೈ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ವಿದೇಶಾಂಗ, ರಕ್ಷಣೆ, ಹಣಕಾಸು, ರೈಲ್ವೇ ಇಲಾಖೆ ಸೇರಿ ಎಂಟು ಮಂದಿ ಕೇಂದ್ರ ಸಚಿವರ ಭೇಟಿ ಮಾಡುವ ಕಾರ್ಯಕ್ರಮವೂ ನಿಗದಿಯಾಗಿದೆ.

ಸಚಿವ ಸ್ಥಾನ ಯಾರಿಗೂ ಸಿಗಬಹುದು? ಒಂದು ವಿಶ್ಲೇಷಣೆ ಇಲ್ಲಿದೆ

ಹಣಕಾಸು ಆಯೋಗದ ಮುಖ್ಯಸ್ಥರನ್ನು ಭೇಟಿ ಮಾಡಲಿರುವ ಬಿಎಸ್ ವೈಗುರುವಾರ  ಸಂಜೆ ಹಣಕಾಸು ಸಚಿವೆ ನಿರ್ಮಾಲ ಸೀತಾರಾಮನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಲಿದ್ದಾರೆ.  ಸೆ.18ರ ಬೆಳಗ್ಗೆ ಕರ್ನಾಟಕ ಭವನದ ನೂತನ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಸಂಸದರ ಜೊತೆ ಉಪಹಾರ  ಸೇವಿಸಲಿದ್ದು  ಹಲವು ಕೇಂದ್ರ ಸಚಿವರ ಭೇಟಿ  ಮಾಡಲಿದ್ದಾರೆ.

Follow Us:
Download App:
  • android
  • ios