Asianet Suvarna News Asianet Suvarna News

ದೇಶದ ರಾಜಕೀಯವನ್ನೇ ಬದಲಾಯಿಸುತ್ತಾ ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆ!

ಬದಲಾಗ್ತಿದೆಯಾ ದೇಶದ ಪಾಲಿಟಿಕ್ಸ್‌?| ಕೊರೋನಾ ಸಂಕಷ್ಟದಲ್ಲಿ ಪ್ರತಿಯೊಂದು ಆರ್ಥಿಕ ವರ್ಗವೂ ಒಂದು ಹೆಜ್ಜೆ ಕೆಳಕ್ಕೆ ಇಳಿಯುತ್ತಿದೆ| ಆರ್ಥಿಕ ಪರಿಸ್ಥಿತಿ ದೇಶದ ಪಾಲಿಟಿಕ್ಸನ್ನೂ ಒಂದು ಸುತ್ತು ತಿರುಗಿಸಬಹುದೇ? 

will the economic crisis in india change the political depiction
Author
Bangalore, First Published May 22, 2020, 4:18 PM IST

ನವದೆಹಲಿ(ಮೇ.22): 1991ರಲ್ಲಿ ಮುಕ್ತ ಮಾರುಕಟ್ಟೆಗೆ ಭಾರತವನ್ನು ತೆರೆದ ಮೇಲೆ ತಯಾರಾದ ಮಧ್ಯಮ ವರ್ಗ ಹೆಚ್ಚುಕಡಿಮೆ ಬಲಪಂಥೀಯ ಚಿಂತನೆಗಳನ್ನೇ ಆರಾಧಿಸತೊಡಗಿತು. ಹೀಗಾಗಿ 89ರಲ್ಲಿ ಅಯೋಧ್ಯಾ ಆಂದೋಲನದ ಕಾಲದಲ್ಲಿ ‘ನಮಗೆ ಇದು ಸಂಬಂಧವಿಲ್ಲ.

ದಿನದ ರೊಟ್ಟಿಸಿಕ್ಕರೆ ಸಾಕು’ ಎನ್ನುತ್ತಿದ್ದ ಆರ್ಥಿಕವಾಗಿ ಮೇಲೆ ಸಾಗುತ್ತಿದ್ದ ವರ್ಗದ ಹೊಸ ತಲೆಮಾರು ಕೂಡ, 2014ರ ಹೊತ್ತಿಗೆ ‘ಮೋದಿ ಮೋದಿ’ ಅನ್ನತೊಡಗಿತ್ತು. ಕೇಜ್ರಿವಾಲ್‌ ಜೊತೆ ಅಣ್ಣಾ ಅಣ್ಣಾ ಎಂದು ಕೂಗಿದ್ದ ಇದೇ ಜನರಿಗೆ ಆಮ್‌ ಆದ್ಮಿಯಿಂದ ಭ್ರಮನಿರಸನವಾಗಿ ಮೋದಿ ಆಪ್ಯಾಯಮಾನವಾಗಿ ಕಾಣತೊಡಗಿದ್ದರು.

ನಿಜಕ್ಕೂ 20 ಲಕ್ಷ ಕೋಟಿ ಇದೆಯಾ? ಮತ್ತ್ಯಾಕೆ ಬಿಜೆಪಿ ಸಂಸದರಿಗೆ ಅಸಮಾಧಾನ!

ಆದರೆ ಕೊರೋನಾ ಸಂಕಷ್ಟದಲ್ಲಿ ಪ್ರತಿಯೊಂದು ಆರ್ಥಿಕ ವರ್ಗವೂ ಒಂದು ಹೆಜ್ಜೆ ಕೆಳಕ್ಕೆ ಇಳಿಯುತ್ತಿದೆ. ಪುಕ್ಕಟೆ ಹಂಚೋದು ತಪ್ಪು ಎನ್ನುತ್ತಿದ್ದ ಜನರೇ ಈಗ ಪ್ಯಾಕೇಜ್‌ ಕೊಡಿ ಎನ್ನುತ್ತಿದ್ದಾರೆ. ಸಿದ್ಧಾಂತ ಹೇಳುವುದು ಬೇರೆ, ಪರಿಸ್ಥಿತಿ ಆಡಿಸುವ ಆಟವೇ ಬೇರೆ ಅಲ್ಲವೇ?

ಹೀಗಿರುವಾಗ ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿ ದೇಶದ ಪಾಲಿಟಿಕ್ಸನ್ನೂ ಒಂದು ಸುತ್ತು ತಿರುಗಿಸಬಹುದೇ? ಈಗಲೇ ಹೇಳೋದು ಕಷ್ಟ. ಆದರೆ ರಾಜಕೀಯ, ಸಾಮಾಜಿಕ ಆಸಕ್ತರು ಸೂಕ್ಷ್ಮವಾಗಿ ಗಮನಿಸಲೇಬೇಕಾದ ವಿಷಯವಿದು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

Follow Us:
Download App:
  • android
  • ios