ಡಿಸಿಎಂ ಹುದ್ದೆ ಒಪ್ಪಲ್ಲ, ನಾನು ಸಿಎಂ ಆಕಾಂಕ್ಷಿ: ಬಿಜೆಪಿಗನ ಹೊಸ ವರಸೆ!
ಡಿಸಿಎಂ ಹುದ್ದೆ ಒಪ್ಪಲ್ಲ, ನಾನು ಸಿಎಂ ಆಕಾಂಕ್ಷಿ| ಎಂಟು ಬಾರಿ ಶಾಸಕನಾಗಿದ್ದೇನೆ ಹೀಗಾಗಿ ಸಿಎಂ ಆಗಲು ನಾನು ಅರ್ಹ| ಬಿಜೆಪಿಗನ ಹೊಸ ವರಸೆ
ಬೆಂಗಳೂರು[ಡಿ.13]: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆಗೆ ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲೇ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ವರಸೆ ತೆಗೆದಿದ್ದಾರೆ.
ಪಕ್ಷ ಹೇಳಿದರೆ ಡಿಸಿಎಂ ಪಟ್ಟಬಿಡಲು ನಾವು ರೆಡಿ!
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಂತ್ರಿ ಅಥವಾ ಮುಖ್ಯಮಂತ್ರಿ ಹುದ್ದೆ ಪಡೆಯುತ್ತೇನೆಯೇ ಹೊರತು ಉಪಮುಖ್ಯಮಂತ್ರಿ ಹುದ್ದೆ ಸ್ವೀಕರಿಸುವುದಿಲ್ಲ. ಎಂಟು ಬಾರಿ ಶಾಸಕನಾಗಿದ್ದೇನೆ. ಹೀಗಾಗಿ ಈ ಹಿಂದೆಯೂ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಎಂದು ಹೇಳಿದ್ದೆ. ಈಗಲೂ, ಮುಂದೆಯೂ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಎಂದು ಹೇಳಿದರು.
ಶರತ್ ಬಚ್ಚೇಗೌಡ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭೇಟಿ: ರಾಜಕೀಯದಲ್ಲಿ ಸಂಚಲನ!
ಇನ್ನು ಮಂತ್ರಿ ಆಗಲಿ, ಆಗದೇ ಇರಲಿ ಕ್ಷೇತ್ರದ ಶಾಸಕನಾಗಿ ಮುಂದುವರೆಯುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಅದಕ್ಕಾಗಿ ಯಾರ ಬಳಿಯೂ ಮನವಿ ಮಾಡಲು ಹೋಗುವುದಿಲ್ಲ ಎಂದು ತಿಳಿಸಿದರು.
ಡಿಸೆಂಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ