Assembly Election: ಕಾಗೇರಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕೋದ್ಯಾರು?
ರಾಜ್ಯ ವಿಧಾನಸಭೆ ಅಧ್ಯಕ್ಷ, ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸತತವಾಗಿ ಏಳು ಬಾರಿ ಗೆಲುವು ಪಡೆಯುವ ಮೂಲಕ ಕ್ಷೇತ್ರದಲ್ಲಿ ದಾಖಲೆಯ ಗೆಲುವು ಸಾಧಿಸಿದ್ದು, ಈ ಬಾರಿ ಅವರ ಎದುರಾಳಿ ಯಾರಾಗಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಟಿಕೆಟ್ ಫೈಟ್
ವಸಂತಕುಮಾರ ಕತಗಾಲ
ಕಾರವಾರ (ಡಿ.3) : ರಾಜ್ಯ ವಿಧಾನಸಭೆ ಅಧ್ಯಕ್ಷ, ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸತತವಾಗಿ ಏಳು ಬಾರಿ ಗೆಲುವು ಪಡೆಯುವ ಮೂಲಕ ಕ್ಷೇತ್ರದಲ್ಲಿ ದಾಖಲೆಯ ಗೆಲುವು ಸಾಧಿಸಿದ್ದು, ಈ ಬಾರಿ ಅವರ ಎದುರಾಳಿ ಯಾರಾಗಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಅಂಕೋಲಾ ಕ್ಷೇತ್ರದಲ್ಲಿ ಮೂರು ಬಾರಿ, ಶಿರಸಿ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದಿರುವ ಕಾಗೇರಿ ವಿರುದ್ಧ ಹೊಸ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರಾ? ಅಥವಾ ಈ ಹಿಂದೆ ಸ್ಪರ್ಧಿಸಿದವರೇ ಮತ್ತೆ ಸೆಣಸಲಿದ್ದಾರೆಯೇ ಎನ್ನುವುದಕ್ಕೆ ಉತ್ತರ ಸದ್ಯದಲ್ಲಿಯೇ ದೊರೆಯಲಿದೆ.
Uttara Kannada: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಇನ್ನೂ ಸಲ್ಲಿಕೆಯಾಗಿಲ್ಲ ಪ್ರಸ್ತಾವನೆ!
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಕಾಗೇರಿ ಅವರ ವಿರುದ್ಧ ಮತ್ತೆ ಸ್ಪರ್ಧಿಸುವ ಉತ್ಸಾಹದಲ್ಲಿದ್ದಾರೆ. ಅರಣ್ಯ ಭೂಮಿ ಅತಿಕ್ರಮಣ ಹೋರಾಟಗಾರರ ಸಂಘದ ಅಧ್ಯಕ್ಷ ಎ.ರವೀಂದ್ರ ನಾಯ್ಕ ಸಹ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರೊಟ್ಟಿಗೆ ಶ್ರೀಪಾದ ಹೆಗಡೆ ಕಡವೆ, ಸುಷ್ಮಾ ರಾಜಗೋಪಾಲ, ದೀಪಕ ದೊಡ್ಡೂರು ಆಕಾಂಕ್ಷಿಗಳಾಗಿದ್ದಾರೆ.
ಭೀಮಣ್ಣ ನಾಯ್ಕ ಈ ಹಿಂದೆ ಕಾಗೇರಿ ವಿರುದ್ಧ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ನಂತರ ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಮ ಹೆಬ್ಬಾರ ವಿರುದ್ಧವೂ ಸೆಣಸಿ ಸೋಲು ಕಂಡಿದ್ದರು. ಅದಾದ ಮೇಲೆ ವಿಧಾನಪರಿಷತ್ ಚುನಾವಣೆಯಲ್ಲಿ ಗಣಪತಿ ಉಳ್ವೇಕರ ಎದುರು ಪರಾಭವಗೊಂಡಿದ್ದಾರೆ. ಇದರಿಂದ ಬೇರೊಬ್ಬ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆನ್ನುವುದು ಕೆಲವರ ವಾದ. ಆದರೆ ಪ್ರತಿಕೂಲ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಸ್ಪರ್ಧಿಸಬೇಕಾಗಿದ್ದರಿಂದ ಭೀಮಣ್ಣ ನಾಯ್ಕ ಸೋಲನ್ನು ಅನುಭವಿಸಬೇಕಾಯಿತು ಎನ್ನುವುದೂ ಅಷ್ಟೇ ಸತ್ಯ. ಏನೇ ಇದ್ದರೂ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಫೈಟ್ ಜೋರಾಗಿಯೇ ನಡೆಯುತ್ತಿದೆ.
ಮತ್ತೊಮ್ಮೆ ಕಾಗೇರಿ:
ಇನ್ನು ಬಿಜೆಪಿಯಿಂದ ಕೃಷ್ಣ ಎಸಳೆ, ಗುರುಪ್ರಸಾದ ಹೆಗಡೆ ಟಿಕೆಟ್ ಆಕಾಂಕ್ಷಿಗಳಾದರೂ ಕಾಗೇರಿ ಎದುರು ಪೈಪೋಟಿ ನಡೆಸಿ ಟಿಕೆಟ್ ಪಡೆಯುವುದು ಸುಲಭದ ಮಾತಲ್ಲ. ಇದರಿಂದ ಕಾಗೇರಿ ಅವರಿಗೆ ಟಿಕೆಟ್ ಸಿಗುವುದು ಖಚಿತ. ಜೆಡಿಎಸ್‌ನಿಂದ ಶಶಿಭೂಷಣ ಹೆಗಡೆ ಅವರನ್ನು ಹೊರತು ಪಡಿಸಿದರೆ ಬೇರಾವ ಪ್ರಬಲ ಅಭ್ಯರ್ಥಿಯೂ ಕಾಣಿಸುತ್ತಿಲ್ಲ. ಹೀಗಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶಶಿಭೂಷಣ ಹೆಗಡೆ ಅವರನ್ನೇ ಕಣಕ್ಕಿಳಿಸುವುದು ಅನಿವಾರ್ಯವಾಗಲಿದೆ.
Karnataka assembly election: ಹಳಿಯಾಳದಲ್ಲಿ ಘೋಟ್ನೇಕರ್ ನಡೆ ಕುತೂಹಲಕರ
ನಿರಂತರವಾಗಿ ಗೆಲ್ಲುತ್ತಿರುವ ವಿಶ್ವೇಶ್ವರ ಹೆಗಡೆ ಅವರನ್ನು ಸೋಲಿಸಲು ಇದುವರೆಗೆ ಭೀಮಣ್ಣ ನಾಯ್ಕ ಹಾಗೂ ಶಶಿಭೂಷಣ ಹೆಗಡೆ ಅವರು ಯಶಸ್ವಿಯಾಗಿಲ್ಲ. ಸದ್ಯದಲ್ಲಿಯೇ ಶಿರಸಿ ಕ್ಷೇತ್ರದ ಚುನಾವಣಾ ಕಣದ ಬಗ್ಗೆ ಸ್ಪಷ್ಟಚಿತ್ರಣ ದೊರೆಯಲಿದೆ.
ಶಿರಸಿ ಕ್ಷೇತ್ರ ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಬ್ರಾಹ್ಮಣರು ಹಾಗೂ ಈಡಿಗರು ನಿರ್ಣಾಯಕರಾಗಿದ್ದಾರೆ.
ಫೋಟೋ- ಕಾಗೇರಿ, ಭೀಮಣ್ಣ ನಾಯ್ಕ, ಶಶಿಭೂಷಣ ಹೆಗಡೆ