Asianet Suvarna News Asianet Suvarna News

ಬಿಜೆಪಿ ಅವಧಿಯ ಕೋವಿಡ್‌ ವೇಳೆ ವ್ಯಾಪಕ ಅಕ್ರಮ: ಕ್ರಿಮಿನಲ್ ಕೇಸ್ ಹಾಕಿ ಎಂದ ಆಯೋಗ

ಬಿಜೆಪಿ ಅವಧಿಯ ಕೊರೋನಾ ಹಗರಣ ಆರೋಪದ ಕುರಿತು ತನಿಖೆ ನಡೆಸಿದ ನ್ಯಾ। ಜಾನ್‌ ಮೈಕಲ್‌ ಕುನ್ಹ ನೇತೃತ್ವದ ವಿಚಾರಣೆ ಆಯೋಗವು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಧ್ಯಂತರ ವರದಿ ಸಲ್ಲಿಕೆ ಮಾಡಿದೆ. 

Widespread illegality during BJP eras Covid Commission to file criminal case gvd
Author
First Published Sep 1, 2024, 5:59 AM IST | Last Updated Sep 1, 2024, 5:59 AM IST

ಬೆಂಗಳೂರು (ಸೆ.01): ಬಿಜೆಪಿ ಅವಧಿಯ ಕೊರೋನಾ ಹಗರಣ ಆರೋಪದ ಕುರಿತು ತನಿಖೆ ನಡೆಸಿದ ನ್ಯಾ। ಜಾನ್‌ ಮೈಕಲ್‌ ಕುನ್ಹ ನೇತೃತ್ವದ ವಿಚಾರಣೆ ಆಯೋಗವು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಧ್ಯಂತರ ವರದಿ ಸಲ್ಲಿಕೆ ಮಾಡಿದೆ. ಮಧ್ಯಂತರ ವರದಿಯಲ್ಲಿ ಒಟ್ಟು 7,223.58 ಕೋಟಿ ರು. ಮೊತ್ತದ ಖರೀದಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಹೇಳಲಾಗಿದೆ. 

ಒಟ್ಟು ಖರೀದಿಗಳ ಪೈಕಿ ಆರೋಗ್ಯ ಇಲಾಖೆಯ 1,754.34 ಕೋಟಿ ರು., ಎನ್‌ಎಚ್ಎಂ1,406.56 ಕೋಟಿ ರು., ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ 918.34 ಕೋಟಿ ರು., ಕರ್ನಾಟಕ ಡ್ರಗ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯ (ವೈದ್ಯಕೀಯ ಸಲಕರಣೆ) 1,394.59 ಕೋಟಿ ರು., ಕರ್ನಾಟಕ ಡ್ರಗ್ ಲಾಜಿಸ್ಟಿಕ್ ಅಂಡ್ ವೇರ್‌ ಹೌಸಿಂಗ್‌ ಸೊಸೈಟಿಯ ಔಷಧ ಖರೀದಿಗೆ 569.02 ಕೋಟಿ ರು., ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯ 264.37 ಕೋಟಿ ರು., ಬಿಬಿಎಂಪಿ ಕೇಂದ್ರ ವಲಯದ 732.41 ಕೋಟಿ ರು., ದಾಸರಹಳ್ಳಿ ವಲಯದ 26.26 ಕೋಟಿ ರು., ಪೂರ್ವ ವಲಯದ 78.09 ಕೋಟಿ ರು., ಮಹದೇವಪುರ ವಲಯದ 48.57 ಕೋಟಿರು., ರಾಜರಾಜೇಶ್ವರಿನಗರ ವಲಯದ ವ್ಯಾಪ್ತಿಯಲ್ಲಿನ 31.03 ಕೋಟಿ ರು. ಖರೀದಿ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಯಾವ್ಯಾವ ಹಂತದಲ್ಲಿ ಎಷ್ಟೆಷ್ಟು ಅಕ್ರಮ ನಡೆದಿದೆ ಎಂಬ ಬಗ್ಗೆ ವರದಿ ನೀಡಿದೆ. 

ಇನ್ನು ಬಿಬಿಎಂಪಿಯಲ್ಲಿ ಬಾಕಿ ಉಳಿದಿರುವ ನಾಲ್ಕು ವಲಯ ಹಾಗೂ 31 ಜಿಲ್ಲೆಗಳಲ್ಲಿನ ವೆಚ್ಚಗಳ ಬಗ್ಗೆ ಸರ್ಕಾರ ವಿಸ್ತರಣೆ ಮಾಡಿರುವ ದಿನಾಂಕದ ಒಳಗಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವುದಾಗಿ ಆಯೋಗ ತಿಳಿಸಿರುವುದಾಗಿ ಮೂಲಗಳು ಮಾಹಿತಿ ನೀಡಿವೆ. ರಾಜ್ಯ ಸರ್ಕಾರದ ಮೇಲೆ ಮುಡಾ, ಕೆಐಎಡಿಬಿ ಸೇರಿದಂತೆ ಹಲವು ಆರೋಪ ಕೇಳಿ ಬರುತ್ತಿವೆ. ಈ ಹಂತದಲ್ಲಿ ಹಿಂದಿನ ಸರ್ಕಾರದ ಅಕ್ರಮಗಳ ಕುರಿತು ತನಿಖೆಗೆ ರಚಿಸಿದ್ದ ಆಯೋಗವು ಮಧ್ಯಂತರ ವರದಿ ನೀಡಿದ್ದು, ತೀವ್ರ ಕುತೂಹಲ ಮೂಡಿಸಿದೆ. 

ರಾಜಭವನ ಚಲೋ: ಎಚ್‌ಡಿಕೆ, ನಿರಾಣಿ, ಜೊಲ್ಲೆ, ಗಣಿ ರೆಡ್ಡಿ ಪ್ರಾಸಿಕ್ಯೂಷನ್‌ಗೆ ಗೌರ್‍ನರ್‌ ಬಳಿ ಪಟ್ಟು

2023ರ ಆಗಸ್ಟ್ ತಿಂಗಳಲ್ಲಿ ಜಾನ್ ಮೈಕಲ್ ಕುನ್ನ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿದ ಸರ್ಕಾರವು ಕೊರೋನಾ ನಿರ್ವಹಣೆ, ಔಷಧ, ಉಪಕರಣ, ಸಾಮಗ್ರಿ ಖರೀದಿ, ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳ ಕುರಿತು ಮೂರು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಿತ್ತು. ಕೋವಿಡ್ ಅವ್ಯವಹಾರದ ತನಿಖೆಗೆಂದು ರಚಿಸಲಾಗಿರುವ ಆಯೋಗದ ಅವಧಿಯನ್ನು ಆರು ತಿಂಗಳು ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಶನಿವಾರ ಸಲ್ಲಿಕೆ ಮಾಡಿರುವುದು ಮಧ್ಯಂತರ ವರದಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

Latest Videos
Follow Us:
Download App:
  • android
  • ios