ನಿರ್ಮಲಾ ಸೀತಾರಾಮನ್ ಏಕೆ ರಾಜೀನಾಮೆ ಕೊಡ್ತಿಲ್ಲ: ರಾಮಲಿಂಗಾರೆಡ್ಡಿ
ಗೋದ್ರಾ ಗಲಭೆ ಸಂದರ್ಭದಲ್ಲಿ ಮೋದಿ, ಸಚಿವ ಅಮಿತ್ ಷಾ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಚುನಾವಣಾ ಬಾಂಡ್ ಮೂಲಕ ಸುಲಿಗೆ ಆರೋಪದಡಿ ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ ಐಆರ್ ದಾಖಲಾಗಿದೆ. ಅವರೇಕೆ ರಾಜೀನಾಮೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಜಮಖಂಡಿ(ಸೆ.29): ಬಿಜೆಪಿಯವರು ಸಿದ್ದರಾಮಯ್ಯ ರಾಜೀನಾಮೆ ಕೇಳುವುದು ಸರಿಯಲ್ಲ. ಮೊದಲಿಗೆ ತಮ್ಮ ಪಕ್ಷದವರ ರಾಜೀನಾಮೆ ಕೇಳಲಿ. ಸಿಎಂ ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪ ಡಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗೋದ್ರಾ ಗಲಭೆ ಸಂದರ್ಭದಲ್ಲಿ ಮೋದಿ, ಸಚಿವ ಅಮಿತ್ ಷಾ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಚುನಾವಣಾ ಬಾಂಡ್ ಮೂಲಕ ಸುಲಿಗೆ ಆರೋಪದಡಿ ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ ಐಆರ್ ದಾಖಲಾಗಿದೆ. ಅವರೇಕೆ ರಾಜೀ ನಾಮೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.
ಕೋರ್ಟ್ ತೀರ್ಪಿಗೆ ಗೌರವ ಇದೆ, ಆದ್ರೆ ಸಿದ್ದರಾಮಯ್ಯ ರಾಜೀನಾಮೆ ಕೊಡೋದಿಲ್ಲ: ರಾಮಲಿಂಗಾ ರೆಡ್ಡಿ
ತಮ್ಮ ಪಕ್ಷದವರು ರಾಜೀನಾಮೆ ಕೊಡದೇ ಇದ್ದಾಗ ಬಿಜೆಪಿಯವರು ಮತ್ತೊಂದು ಪಕ್ಷದವರ ರಾಜೀನಾಮೆ ಕೇಳುವುದು ಎಷ್ಟು ಸಮಂಜಸ?. ತಮ್ಮ ಪಕ್ಷದವರ ಹಗರಣಗಳು ಬಂದಾಗ ಮಳ್ಳರಂತೆ ವರ್ತಿಸಿ, ಮತ್ತೊಬ್ಬರ ರಾಜೀನಾಮೆ ಕೇಳುವುದು ಸರಿಯೇ ಎಂದು ಪ್ರಶ್ನಿಸಿದರು.