Asianet Suvarna News Asianet Suvarna News

ಛಾನ್ಸೆ ಇಲ್ಲ, ಪ್ರಧಾನಿ ನರೇಂದ್ರ ಮೋದಿಗೆ ಅನ್ವಯವಾಗಲ್ಲ 75 ಪ್ಲಸ್ ರೂಲ್ಸ್

ಪ್ರಧಾನಿ ನರೇಂದ್ರ ಮೋದಿಗೆ 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಶುಭಾಷಯಗಳ ಸುರಿಮಳೆಯೇ ಹರಿದು ಬರ್ತಿದ್ದು, ನರೇಂದ್ರ ಮೋದಿ ನಿವೃತ್ತಿಯಾಗ್ತಾರಾ ಎಂಬ ಪ್ರಶ್ನೆ ಮತ್ತೆ ಎದ್ದಿದೆ. ಛಾನ್ಸೆ ಇಲ್ಲ ಎನ್ನುವ ಬಿಜೆಪಿ ಮುಂದೆ ಇಷ್ಟೆಲ್ಲ ಕಾರಣ ಇದೆ. 
 

Why 75 plus rule does not apply PM Narendra Modi roo
Author
First Published Sep 17, 2024, 11:35 AM IST | Last Updated Sep 17, 2024, 11:35 AM IST

ಭಾರತದ ಪ್ರಧಾನಿ ನರೇಂದ್ರ ಮೋದಿ (Indian Prime Minister Narendra Modi) ಗೆ ಇಂದು 75 ನೇ ಹುಟ್ಟುಹಬ್ಬದ (birthday) ಸಂಭ್ರಮ. ಮೋದಿ, ಮೂರನೇ ಅವಧಿಗೆ ಪ್ರಧಾನಿಯಾಗಿದ್ದು, ಭಾರತವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. 2014ರಿಂದ ಭಾರತದ ಪ್ರಧಾನಿಯಾಗಿರು ನರೇಂದ್ರ ಮೋದಿ, ಅನೇಕ ಬದಲಾವಣೆಗಳನ್ನು ಜಾರಿಗೆ ತಂದ್ರು. ಅದ್ರಲ್ಲಿ 75 ವರ್ಷ ಮೇಲ್ಪಟ್ಟ ನಾಯಕರಿಗೆ ಸಂಪುಟದಲ್ಲಿ ಸ್ಥಾನ ನೀಡದಿರುವುದು ಸೇರಿದೆ.

2014ರಲ್ಲಿ ಲಾಲ್ ಕೃಷ್ಣ ಅಡ್ವಾಣಿ (Lal Krishna Advani) ಮತ್ತು ಮುರಳಿ ಮನೋಹರ್ ಜೋಷಿ (Murali Manohar Joshi) ಅವರನ್ನು ದೂರವಿಟ್ಟಿದ್ದ ಮೋದಿ, ಮಧ್ಯಪ್ರದೇಶದಲ್ಲೂ ಈ ನಿಮಯ ಮುಂದುವರೆಸಿದ್ರು. 80 ದಾಟಿದ ನಂತರ ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೂ ಯಾವುದೇ ಜವಾಬ್ದಾರಿಯನ್ನು ನೀಡಲಾಗಿಲ್ಲ. ಹಾಗಿದ್ರೆ ಮೋದಿಗೂ ಈ ನಿಯಮ ಅನ್ವಯವಾಗುತ್ತಾ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಿತ್ತು. 

ಮೋದಿ ಎಂಬ ವಿಶ್ವದ ಧೀಮಂತ ನಾಯಕ, ವಿದೇಶಗಳ ದೃಷ್ಟಿಯಲ್ಲಿ ಭಾರತಕ್ಕೆ ಮನ್ನಣೆ ತಂದುಕೊಟ್ಟ ನಾಯಕ: ವಿಜಯೇಂದ್ರ

2024 ಲೋಕಸಭೆ ಚುನಾವಣೆ (Lok Sabha Election) ವೇಳೆ ಮಧ್ಯಂತರ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ಚುನಾವಣಾ ಪ್ರಚಾರಕ್ಕೆ ಮರಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದ್ರ ಬಗ್ಗೆ ಮಾತನಾಡಿದ್ದರು. ಸೆಪ್ಟೆಂಬರ್ 17ರಂದು ಮೋದಿಗೆ 75 ವರ್ಷವಾಗಲಿದೆ. ನೀವು ಈಗ ಮೋದಿಗೆ ಮತ ಹಾಕಿದ್ರೆ ಅದು ಅಮಿತ್ ಷಾ ಅವರಿಗೆ ಮತ ಹಾಕಿದಂತೆ. ಮೋದಿ 75 ವರ್ಷವಾಗ್ತಿದ್ದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ್ತಾರೆ ಎಂದಿದ್ದರು. ಈ ಚರ್ಚೆಗೆ, ಪ್ರಚಾರದ ವೇಳೆಯೇ ಅಮಿತ್ ಷಾ ತೆರೆ ಎಳೆದಿದ್ದರು. ನರೇಂದ್ರ ಮೋದಿಗೆ 75 ವರ್ಷವಾಗ್ತಿದ್ದಂತೆ ಅವರು ರಾಜೀನಾಮೆ ನೀಡ್ತಾರೆಯೇ ಎಂದು ಪ್ರಶ್ನೆ ಮಾಡ್ಬೇಕಾಗಿಲ್ಲ,ನರೇಂದ್ರ ಮೋದಿ, ರಾಜೀನಾಮೆ ನೀಡದೆ ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದಿದ್ದರು. ಬಿಜೆಪಿ ನಿಯಮದಲ್ಲಿ ಎಲ್ಲೂ ಈ ಬಗ್ಗೆ ಬರೆಯಲಾಗಿಲ್ಲ ಎಂದು ಅಮಿತ್ ಷಾ ಸ್ಪಷ್ಟನೆ ನೀಡಿದ್ರು.

75 ಪ್ಲಸ್ ಆದ್ರೂ ಮೋದಿ ಪ್ರಧಾನಿ ಸ್ಥಾನಕ್ಕೆ ಏಕೆ ಯೋಗ್ಯ? :  ನರೇಂದ್ರ ಮೋದಿ ಎಲ್ಲ ನಾಯಕರಂತಲ್ಲ. ಅವರ ವಯಸ್ಸು ಬರಿ ಲೆಕ್ಕಕ್ಕೆ ಮಾತ್ರ ಎಂಬುದು ಎಲ್ಲರಿಗೂ ತಿಳಿದ ಸಂಗತಿ. 75ನೇ ವಯಸ್ಸಿನಲ್ಲೂ 25ರ ಯುವಕನಂತೆ ಓಡಾಡುವ ನರೇಂದ್ರ ಮೋದಿ ಸಾಕಷ್ಟು ವಿಶೇಷ ಗುಣಗಳನ್ನು ಹೊಂದಿದ್ದಾರೆ. ಮೋದಿ ನಾಯಕತ್ವ ಶೈಲಿ ಪರಿಣಾಮಕಾರಿ ಮತ್ತು ಕ್ರಿಯಾಶೀಲವಾಗಿದೆ. ಸಾರ್ವಜನಿಕರ ಮಧ್ಯೆ ಇದ್ದು ಅವರ ಸಮಸ್ಯೆ ಅರಿಯುವ ಪ್ರಯತ್ನವನ್ನು ಮೋದಿ ಮಾಡ್ತಾರೆ. ಪ್ರಧಾನಿ ಮೋದಿಯವರ ಸಂವಹನ ಕೌಶಲ್ಯವು ತುಂಬಾ ಪ್ರಬಲವಾಗಿದೆ. ಅವರು ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ.  ಸಾರ್ವಜನಿಕರಿಗೆ ನೇರವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾರೆ. ಪ್ರಧಾನಿ ಮೋದಿ ದೂರದೃಷ್ಟಿ ಹೊಂದಿದ್ದು, ಅವರ ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ  ಮತ್ತು  ಡಿಜಿಟಲ್ ಇಂಡಿಯಾದಂತಹ ಯೋಜನೆಗಳು ಇದಕ್ಕೆ ಸ್ಪಷ್ಟ ಉದಾಹರಣೆ. ಇದೇ ಇತರ ನಾಯಕರಿಗಿಂತ ಅವರನ್ನು ಭಿನ್ನವಾಗಿ ನಿಲ್ಲಿಸಿದೆ. ಭಾರತದ ಅಂತರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಮೋದಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಭಾರತದ ಜಾಗತಿಕ ಸ್ಥಾನಮಾನವನ್ನು ಸುಧಾರಿಸಿದೆ. ಈ ಎಲ್ಲಾ ಅಂಶಗಳು ಒಟ್ಟಾಗಿ ಮೋದಿಯನ್ನು ಅನನ್ಯ ಮತ್ತು ಪ್ರಭಾವಿ ನಾಯಕನನ್ನಾಗಿ ಮಾಡಿದೆ.  

ವಿದೇಶ ಪ್ರವಾಸದಲ್ಲಿ ಪ್ರಧಾನಿ ಮೋದಿ ಧರಿಸುವ ಇಷ್ಟದ 3 ಬಣ್ಣದ ಸೂಟ್‌ಗಳಿವು!

75ನೇ ವಯಸ್ಸಿನಲ್ಲೂ ಮೋದಿ ಫಿಟ್ನೆಸ್ ಮತ್ತು ಆರೋಗ್ಯವಾಗಿರಲು ಅವರ ದಿನಚರಿ, ಯೋಗ, ಧ್ಯಾನ, ಆಹಾರ ಕ್ರಮ ಕಾರಣ. ನಿತ್ಯ ಯೋಗ ಮಾಡುವ ಪ್ರಧಾನಿ, ಸಮತೋಲಿತ ಆಹಾರವನ್ನು ಸೇವನೆ ಮಾಡ್ತಾರೆ. ಮಾನಸಿಕ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡುವ ಅವರು, ಅತ್ಯಂತ ಶಿಸ್ತುಬದ್ಧ ದಿನಚರಿ ರೂಢಿಸಿಕೊಂಡಿದ್ದಾರೆ. ಸಕಾರಾತ್ಮಕ ಆಲೋಚನೆ ಅವರ ಬಲವನ್ನು ಹೆಚ್ಚಿಸಿದೆ. ನಮ್ಮ ಅವಧಿಯನ್ನು ಮೋದಿ ಯಶಸ್ವಿಯಾಗಿ ಪೂರೈಸಲಿದ್ದು, ವಯಸ್ಸಿನ ಜೊತೆ ಬರುವ ಸವಾಲುಗಳನ್ನು ಎದುರಿಸಲು ಮೋದಿ ಸಿದ್ಧರಾಗಿದ್ದಾರೆ. 

Latest Videos
Follow Us:
Download App:
  • android
  • ios