ಸಿದ್ದರಾಮಯ್ಯ ಗೆದ್ದ ಬಳಿಕ ಕ್ಷೇತ್ರದ ಜವಾಬ್ದಾರಿ ಯಾರು ನೋಡಿಕೊಳ್ತಾರೆ ಗೊತ್ತಿಲ್ಲ: ಕೆ.ಎಚ್ ಮುನಿಯಪ್ಪ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಕುರಿತು ಮಾಜಿ ಕೇಂದ್ರ ಸಚಿವ ಹಾಗೂ ಕೋಲಾರ ಜಿಲ್ಲೆಯ ದಲಿತ ನಾಯಕ ಕೆ.ಎಚ್ ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಕೋಲಾರ (ಮಾ.6): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಕುರಿತು ಮಾಜಿ ಕೇಂದ್ರ ಸಚಿವ ಹಾಗೂ ಕೋಲಾರ ಜಿಲ್ಲೆಯ ದಲಿತ ನಾಯಕ ಕೆ.ಎಚ್ ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದು. ಸಿದ್ದರಾಮಯ್ಯವರು ಕೋಲಾರದಲ್ಲಿ ಸ್ಪರ್ಧೆ ಮಾಡ್ತಾರೆ ಎಂದು ತೀರ್ಮಾನ ಮಾಡಿದ ಬಳಿಕ ಕೋಲಾರ ಕ್ಷೇತ್ರದ ಎಲ್ಲಾ ಭಾಗಗಳಲ್ಲೂ ಬೂತ್ ಕಮಿಟಿ ಮಾಡೋದಕ್ಕೆ ತೀರ್ಮಾನ ಮಾಡಿದ್ದೇವೆ. ಒಂದೊಂದು ಬೂತ್ ನಲ್ಲಿ 10 ರಿಂದ 25 ಜನ ಸದಸ್ಯರು ಇರುತ್ತಾರೆ. ಸದಸ್ಯರ ಮೂಲಕ ಕಾಂಗ್ರೆಸ್ ಪಕ್ಷದ ಮೂರು ಆಶ್ವಾಸನೆಗಳ ಗ್ಯಾರಂಟಿ ಕಾರ್ಡ್ ಗಳನ್ನು ಹಂಚಿಕೆ ಮಾಡಲಾಗುತ್ತೆ. ಈ ತಿಂಗಳು ಕೊನೆ ಒಳಗೆ ಪ್ರತಿ ಮನೆಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಗಳನ್ನು ತಲುಪಿಸಲು ತೀರ್ಮಾನವಾಗಿದ್ದು. ಈಗಾಗಲೇ ಗ್ರಾಮಾಂತರ ಭಾಗದಲ್ಲಿ ಕೆಲಸ ಆರಂಭಿಸಿದ್ದೇವೆ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡ್ತಿರೋದು ನಮ್ಮ ಸೌಭಾಗ್ಯವಾಗಿದ್ದು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡ್ತೇವೆ. ಸಿಎಂ ಆಗಿದ್ದ ಅನುಭವ ಇರೋದ್ರಿಂದ ಈ ಎಲ್ಲೆಲ್ಲಿ ಅಭಿವೃದ್ಧಿ ಮಾಡಬೇಕು ಅಂತ ಅವರಿಗೆ ತಿಳಿದಿದೆ. ಸಿಎಂ ಆಗಿದ್ದಾಗ ಬಯಲು ಸೀಮೆಗೆ ನೀರು ಕೊಟ್ಟಿದ್ದಾರೆ, ಮಿನಿ ವಿಧಾನಸೌಧ ಕಟ್ಟಿಸಿಕೊಟ್ಟಿದ್ದಾರೆ.
ಈ ಬಯಲು ಸೀಮೆ ಪ್ರದೇಶಕ್ಕೆ ಕುಡಿಯುವ ನೀರು ಹರಿಸುವುದಾಗಿ ಸಿದ್ದರಾಮಯ್ಯ ತೀರ್ಮಾನ ಮಾಡಿದ್ದಾರೆ. ಯಾವುದೇ ಹಗರಣ ಇಲ್ಲದೇ ಸಿದ್ದರಾಮಯ್ಯ ಅಧಿಕಾರ ನಡೆಸಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹೆಚ್ಚಿಗೆ ಸುತ್ತೋದಕ್ಕೆ ಆಗೋದಿಲ್ಲ,ರಾಜ್ಯ ಪ್ರವಾಸ ಮಾಡಬೇಕಾಗಿದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಿ ಸಿದ್ದರಾಮಯ್ಯರ ಗೆಲುವಿಗೆ ಶ್ರಮಿಸುತ್ತೇವೆ. ಒಬ್ಬ ಮುಖ್ಯಮಂತ್ರಿ ಆಗಿದ್ದೋರನ್ನು ಗೆಲಿಸಿ ಕಳಿಸೋದಕ್ಕೆ ಆಗಲಿಲ್ಲಾ ಅಂದ್ರೆ ನಮ್ಮ ಕೈಯಲ್ಲಿ ಇನ್ನೇನು ಮಾಡೋಕೆ ಆಗುತ್ತೆ. ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಗೆದ್ದ ಬಳಿಕ ಇಲ್ಲಿ ಯಾರು ಜವಾಬ್ದಾರಿ ತೆಗದುಕೊಳ್ಳುತಾರೆ ಅನ್ನೋದು ನನಗೆ ಗೊತ್ತಿಲ್ಲ, ನೀವೆ ಸಿದ್ದರಾಮಯ್ಯ ಬಂದಾಗ ಕೇಳಿ. ಜನರ ಕಷ್ಟಸುಖ ಕೇಳೊಕೆ ಸಿದ್ದರಾಮಯ್ಯನವರೇ ಒಬ್ಬರನ್ನು ನೇಮಿಸುತ್ತಾರೆ. ಹೀಗಾಗಿ ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಪ್ರಚಾರ ಮಾಡಿ ಮುಗಿಸಬೇಕು,ಕಾರ್ಯಕರ್ತರ ಸಭೆ ಮಾಡಬೇಕು ಎಂದು ತಮ್ಮ ಅಭಿಮಾನಿಗಳಿಗೆ ಕೆ.ಎಚ್ ಸೂಚನೆ ನೀಡಿದ್ದಾರೆ.ನಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದರ ಬಗ್ಗೆ ತೀರ್ಮಾನವಾಗಿಲ್ಲ, ಹೈಕಮಾಂಡ್ ಸ್ಪರ್ಧೆ ಮಾಡಿ ಅಂದ್ರೆ ಸ್ಪರ್ಧೆ ಮಾಡ್ತೇನೆ ಇಲ್ಲ ಅಂದರೆ ಕಾಂಗ್ರೆಸ್ ಗೆಲುವಿಗೆ ಪ್ರವಾಸ ಮಾಡ್ತೇನೆ.
ಪರಮೇಶ್ವರ್ ಅವರನ್ನು ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲಿಸಿಲ್ಲ
ಸಿದ್ದರಾಮಯ್ಯ ಸೋಲಿಸಲು ತೆರೆಮರೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಯಾರೂ ಸಹ ವಿರುದ್ದ ಕೆಲಸ ಮಾಡ್ತಿಲ್ಲ. ನನ್ನ ಸೋಲು ಹಾಗೂ ನೋವನ್ನು ಮರೆತ್ತಿದ್ದೇನೆ,ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಅಷ್ಟೇ. ಸಿದ್ದರಾಮಯ್ಯ ಕೋಲಾರದಲ್ಲಿ ಗೆಲ್ಲಲೇಬೇಕು. ನಾನು, ಮಲ್ಲಿಕಾರ್ಜುನ ಖರ್ಗೆ,ಪರಮೇಶ್ವರ್,ಮಹದೇವಪ್ಪ ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಸಮಯ ಬಂದಾಗ ನಾನು ರಮೇಶ್ ಕುಮಾರ್ ಇಬ್ಬರು ಮಾತನಾಡುತ್ತೇವೆ,ರಮೇಶ್ ಕುಮಾರ್ ಅವರ ಪತ್ನಿ ವಿಧಿವಶ ಆದಾಗ ನಾನು ಭೇಟಿ ಮಾಡಿ ಸಾಂತ್ವಾನ ಮಾಡಿದ್ದೇನೆ. ನಾನು ಲೋಕಸಭಾ ಚುನಾವಣೆಯಲ್ಲಿ ಸೋಲುವಾಗ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಕಾಂಗ್ರೆಸ್ ನಲ್ಲೆ ಇದ್ರು,ನನ್ನ ಪರವಾಗಿ ಇಬ್ರಾಹಿಂ ಪ್ರಚಾರ ಮಾಡಿದ್ರು, ವಿಚಾರ ಗೊತ್ತಾಗಿ ಅನಾನುಕೂಲವಾಗುತ್ತೆ ಅಂತ ತಿಳಿದು ಸುಮ್ಮನಾದ್ರು,ಈಗಾಗಿ ನನ್ನ ಸೋಲಿನ ಬಗ್ಗೆ ಇಬ್ರಾಹಿಂ ಹೇಳ್ತಿದ್ದಾರೆ. ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಹಾಗೂ ನನ್ನ ಸೋಲಿಗೆ ಸಿದ್ದರಾಮಯ್ಯ ಕಾರಣ ಅಲ್ಲ. ಸಮ್ಮನೆ ಸಿದ್ದರಾಮಯ್ಯ ಹೆಸರು ತರಬೇಡಿ, ನಮ್ಮ ಸ್ಥಳೀಯ ಸಮಸ್ಯೆಗಳಿಂದ ಸೋತಿದ್ದೇವೆ ಅವರು ನಮ್ಮಗಳ ವಿರುದ್ದ ಸೋಲಿಸುವ ಕೆಲಸ ಮಾಡಿಲ್ಲ.ಸಿಎಂ ಇದ್ದಾಗ ನಮ್ಮ ಕೆಲಸ ಮಾಡಿಕೊಟ್ಟಿದ್ದಾರೆ, ಅವರ ಗೆಲುವಿಗೆ ಶ್ರಮಿಸುತ್ತೇನೆ.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿಚಾರದಲ್ಲಿ ಇದೇ ತಿಂಗಳ 9ನೇ ತಾರೀಖು ರಾಜ್ಯ ಬಂದ್ ಮಾಡ್ತೇವೆ
ಕಾಂಗ್ರೆಸ್ ಪಕ್ಷಕ್ಕೆ 135 ವಷ೯ಕ್ಕೂ ಅಧಿಕ ಇತಿಹಾಸ ಇದೆ.ಮಹತ್ಮಾ ಗಾಂಧಿಜಿ ಅವರ ಉದ್ದೇಶದಂತೆ ನಾವೆಲ್ಲಾ ಶಾಂತಿಯಿಂದ ನಡೆಸಿಕೊಂಡು ಬಂದಿದ್ದೇವೆ, ಆದ್ರೇ ಈ ದೇಶದ ದುರಾದೃಷ್ಟ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.ಅಭಿವೃದ್ದಿ ಮಾಡದೇ ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ,ದಿನವಿಡೀ ಯಾವ್ಯಾಯ ಶಾಸಕರು,ಸಚಿವರು ಎಷ್ಟೆಷ್ಟೂ ಲಂಚ ಪಡೆದಿದ್ದಾರೆ ಅನ್ನೋದನನ್ನು ನಾವು ನೋಡ್ತಿದ್ದೇವೆ. ಈ ಬಗ್ಗೆ ರಾಜ್ಯದ ಜನರ ಗಮನವನ್ನು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸೆಳೆಯುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಆದ್ರೇ ಬಿಜೆಪಿ ಅವರಿಗೆ ಇದರ ಅರಿವಿಲ್ಲದೇ ಕೇವಲ ಹಣ ಮಾಡೋದಕ್ಕೆ ಇಳಿದಿದ್ದಾರೆ.ಗುತ್ತಿಗೆದಾರ ಕೆಂಪಣ್ಣ ಅವರು ರಾಜ್ಯ ಸರ್ಕಾರ 40 ಪರ್ಸೆಂಟ್ ಕಮಿಷನ್ ಬಗ್ಗೆ ಹೇಳಿದ್ರು, ಇದೀಗ ಅದು ನಿಜ ಅಂತೇಳಿ ಲೋಕಾಯುಕ್ತ ದಾಳಿಗೆ ಒಳಗಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಸಾಭೀತು ಮಾಡಿದ್ದಾರೆ.
ಕೆಎಸ್ಡಿಎಲ್ ನಲ್ಲಿ ಟೆಂಡರ್ ಆಗಬೇಕಿದ್ರೆ ಇಷ್ಟು ಹಣ ಕೊಡಬೇಕು ಅಂತ ರುಜುವಾತು ಮಾಡಿದ್ದಾರೆ. ದೇಶ ಕಟ್ಟೋರು ಇಷ್ಟೋಂದು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿದ್ರೆ ದೇಶದ ಪ್ರಗತಿ ಹೇಗೆ ಸಾಧ್ಯವಾಗುತ್ತೆ. ಇದು ದೇಶಕ್ಕೆ ಮಾರಕವಾಗಿದ್ದು,ಕೈಗಾರಿಕೆ ಮುಚ್ಚಲಾಗ್ತಿದೆ,ದೊಡ್ಡ ದೊಡ್ಡ ಕಂಪನಿಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ,ಕಾಮಿ೯ಕರು ಬೀದಿ ಪಾಲಾಗ್ತಿದ್ದು. ಕೋಮುಗಲಭೆ ಉಂಟು ಮಾಡಿ ಭಾಗ ಮಾಡಿ ದೇಶ ಆಳೋದಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶದಲ್ಲಿ ಶಾಂತಿ ಇತ್ತು,ಬಿಜೆಪಿ ಅವರು ಧಮ೯ಗಳನ್ನು ಹೊಡೆದು ರಾಜಕಾರಣ ಮಾಡ್ತಿದ್ಧಾರೆ. ಹಗರಣದಲ್ಲಿ ಸಿಲುಕಿರುವ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಬಿಜೆಪಿ ಸರ್ಕಾರ ದ ವಿರುದ್ದ ಇದೇ ತಿಂಗಳ 9ನೇ ತಾರೀಖು ರಾಜ್ಯಾಧ್ಯಂತ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಅಂದೂ ಬೆಳಿಗ್ಗೆ 9 ರಿಂದ 11 ಗಂಟೆವರೆಗೂ ಬಂದ್ ಮಾಡಿಸಲು ಕಾಂಗ್ರೆಸ್ ಪಕ್ಷದಿಂದ ತೀರ್ಮಾನ ಮಾಡಿದ್ದೇವೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬಂದ್ ನಡೆಯಲಿದೆ, ಜನರು ಸಹಕರಿಸಬೇಕು ಎಂದು ಮನವಿ ಮಾಡಿದ್ರು.
ಕೋಲಾರ: ಟಿಪ್ಪುವಿನ ನಿಜ ರೂಪ ಬಯಲು ಮಾಡುವುದು ನನ್ನ ಉದ್ದೇಶ, ಅಡ್ಡಂಡ ಕಾರ್ಯಪ್ಪ
ಒಳ್ಳೆಯ ಆಡಳಿತ ನೀಡುವ ಮೂಲಕ ರಾಷ್ಟ್ರಕ್ಕೆ ಒಳ್ಳೆ ಸಂದೇಶ ನೀಡಬೇಕು
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೇ ಸಿದ್ದರಾಮಯ್ಯ ಸರ್ಕಾರ ದಲ್ಲಿ ನಡೆಸಿಕೊಂಡು ಬಂದಿದ್ದ ಕಾಯ೯ಕ್ರಮಗಳನ್ನು ಮುಂದುವರೆಸುತ್ತೇವೆ. ಪ್ರತಿ ಮನಗೆ 200 ಯೂನಿಟ್ ಉಚಿತ ವಿದ್ಯುತ್,ಪ್ರತಿ ಮಹಿಳೆಯ ಗೃಹಿಣಿ ಖಾತೆಗೆ 2 ಸಾವಿರ ಹಣ ಹಾಗೂ ತಲಾ 10 ಕೆಜಿ ಅಕ್ಕಿಯನ್ನು ನೀಡಲು ಕಾಂಗ್ರೆಸ್ ಮುಂದಾಗಿದೆ.ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ,ಅಧಿಕಾರಕ್ಕೆ ಬಂದ ಕೂಡಲೇ ಜಾರಿ ಮಾಡ್ತೇವೆ.ರಾಜ್ಯದ ಯಾವುದೇ ಮೂಲೆಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹೋದರು ಜನರ ಉತ್ಸಾಹದಿಂದ ಸೇತಿ೯ದ್ದಾರೆ.150 ಸೀಟು ಗೆದ್ದು ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ,ಒಳ್ಳೆಯ ಆಡಳಿತ ನೀಡುವ ಮೂಲಕ ರಾಷ್ಟ್ರಕ್ಕೆ ಒಳ್ಳೆ ಸಂದೇಶ ನೀಡಬೇಕು ಎಂದು ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ: ಸಿ.ಎಂ.ಇಬ್ರಾಹಿಂ
ಸಾಲ ಮನ್ನಾ ವಿಚಾರದಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗಳ ಜವಾಬ್ದಾರಿ ತೆಗೆದುಕೊಂಡು ಯುಪಿಎ ಸರ್ಕಾರ ಇದ್ದಾಗ 75 ಸಾವಿರ ಕೋಟಿ ಸಾಲ ಮನ್ನ ಮಾಡಲಾಗಿತ್ತು.ಆದರೇ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೊಡ್ಡ ಕಂಪನಿಗಳು 15 ಲಕ್ಷ ಕೋಟಿ ರುಪಾಯಿ ಸಾಲ ಮನ್ನಾ ಮಾಡಿದ್ದಾರೆ.ಆದ್ರೆ ದೇಶದ ಬೆನ್ನೆಲುಬು ರೈತನ ಪರವಾಗಿ ಮೋದಿ ಕೆಲಸ ಮಾಡಿಲ್ಲ ಅನ್ನೋದು ದುರಾದೃಷ್ಟಕರ.ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರ ದಲ್ಲೂ ರೈತರಿಗೆ ಹಾಗೂ ದಲಿತರಿಗೆ ಯಾವುದೇ ಅನುಕೂಲವಾಗಿಲ್ಲ ಎಂದರು.