ಕೋಲಾರ: ಟಿಪ್ಪುವಿನ ನಿಜ ರೂಪ ಬಯಲು ಮಾಡುವುದು ನನ್ನ ಉದ್ದೇಶ, ಅಡ್ಡಂಡ ಕಾರ್ಯಪ್ಪ

ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನದ ಮೂಲಕ ಟಿಪ್ಪುವಿನ ಬಗ್ಗೆ ಕೆಲ ವಿಚಾರಗಳನ್ನು ಮರೆಮಾಚಲಾಗಿದೆ. ಆ ವಿಷಯಗಳನ್ನು ಜನರ ಮುಂದೆ ತರುವಂತಹ ಪ್ರಯತ್ನ ಮಾಡಲಾಗುತ್ತಿದೆ. ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ

Director Addanda Cariappa talks Over Tipu Sultan Drama grg

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ 

ಕೋಲಾರ(ಮಾ.05): ಟಿಪ್ಪು ನಿಜ ಕನಸುಗಳು ನಾಟಕನ್ನು ಇದೆ ಮಾ.7 ರಂದು ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಾಟಕ ಪ್ರದರ್ಶನವಾಗಲಿದೆ ಎಂದು ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾಹಿತಿ ನೀಡಿದ್ದಾರೆ.

ನಿನ್ನೆ(ಶನಿವಾರ) ನಗರದಲ್ಲಿ ಮಾತನಾಡಿದ ಅವರು, ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನದ ಮೂಲಕ ಟಿಪ್ಪುವಿನ ಬಗ್ಗೆ ಕೆಲ ವಿಚಾರಗಳನ್ನು ಮರೆಮಾಚಲಾಗಿದೆ. ಆ ವಿಷಯಗಳನ್ನು ಜನರ ಮುಂದೆ ತರುವಂತಹ ಪ್ರಯತ್ನ ಮಾಡಲಾಗುತ್ತಿದೆ. ಈ ಕುರಿತು ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಆದ್ರೆ ನನ್ನ ವಾಕ್ ಸ್ವಾತಂತ್ರ್ಯ ಬಳಸಿಕೊಂಡು ನಾನು ನಾಟಕ ರೂಪಿಸಿದ್ದೇನೆ. ರಫಿವುಲ್ಲಾ ಎಂಬುವರು ನನ್ನ ವಿರುದ್ಧ ಬೆಂಗಳೂರಿನಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯ ನನ್ನ ಪರವಾಗಿ ತೀರ್ಪು ಬರಲಿದೆ ಅಂತ ತಿಳಿಸಿದ್ದಾರೆ. 

ಯಾದಗಿರಿಯಲ್ಲಿ ಸರ್ಕಲ್ ಸಮರ: ಟಿಪ್ಪು-ಸಾವರ್ಕರ್ ಕದನ

ನನ್ನ ನಾಟಕ ಪ್ರತಿನಿತ್ಯ ರಂಗಭೂಮಿಯಲ್ಲಿ ಸದ್ದು ಮಾಡುತ್ತೆ. ನಾನು ಬಂದಾಗ ನನ್ನ ವಿರುದ್ಧ ಮಾತನಾಡುವುದು, ಫ್ಲೆಕ್ಸ್ ಗಳನ್ನ ಹರಿದು ಹಾಕುವುದು. ಹೀಗೆ ತೊಂದರೆ ಕೊಡುವುದು ಕೆಲವರು ಮಾಡಿದ್ದಾರೆ. ನನ್ನ ನಾಟಕ ಟಿಪ್ಪು ವಿರುದ್ಧ ಅಲ್ಲ, ಮುಸ್ಲಿಂರ ವಿರುದ್ಧ ಅಲ್ಲ. ತುಕುಡೆ ತುಕಡೆ ಅನ್ನೋರು, ಪೊಲೀಸ್ ಠಾಣೆಗೆ ಬೆಂಕಿ ಹಾಕುವವರ ವಿರುದ್ಧ ಈ ನಾಟಕವಾಗಿದೆ. ಅದಕ್ಕೆ ಸಾಕಷ್ಟು ಜನರು ವಿರೋಧ ಮಾಡುತ್ತಿದ್ದಾರೆ. ಟಿಪ್ಪುವಿನ ನಿಜ ರೂಪ ಬಯಲು ಮಾಡುವುದು ನನ್ನ ಉದ್ದೇಶ. ಈ ರಂಗ ಭೂಮಿ ಕೈಂಕರ್ಯ ಮುಂದುವರೆಯಲಿದೆ. ನಾಟಕ ಅಂದ್ರೆ ಕಲ್ಪನೆ ಅಲ್ಲ, ಸತ್ಯದ ಅನಾವರಣ ನನ್ನ ನಾಟಕದ ಉದ್ದೇಶ. ಬರಗೂರು ರಾಮಚಂದ್ರ, ಗಿರೀಶ್ ಕಾರ್ನಾಡ್ ಅವರು ಬರೆದ ನಾಟಕಗಳಿಗೆ ವಿರೋಧ ಇಲ್ಲ. ನನ್ನ ನಾಟಕಕ್ಕೆ ಮಾತ್ರ ವಿರೋಧ ಇದೆ ಯಾಕೆ ಅವರೆಲ್ಲಾ ದೊಡ್ಡವರಂತ ಎಂದು‌ ಪ್ರಶ್ನಿಸಿದರು.

Latest Videos
Follow Us:
Download App:
  • android
  • ios