Asianet Suvarna News Asianet Suvarna News

ಕಾಂಗ್ರೆಸ್ ಬರುವವರಿಗೆ ಸ್ವಾಗತ : ಡಿಕೆಶಿಯಿಂದ ಆಹ್ವಾನ

  • ಯಾರಾದರೂ ಕಾಂಗ್ರೆಸ್ ಬರುವವರಿದ್ದರೆ ಅರ್ಜಿ ಸಲ್ಲಿಸಲಿ, 
  •  ವಲಸೆ ಬಂದ ಸಚವರನ್ನು ಉದ್ದೇಶಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿ
who wants to join congress Welcome says DK Shivakumar snr
Author
Bengaluru, First Published Jul 24, 2021, 7:24 AM IST
  • Facebook
  • Twitter
  • Whatsapp

ಮಂಗಳೂರು (ಜು.24):  ಯಾರಾದರೂ ಕಾಂಗ್ರೆಸ್ ಬರುವವರಿದ್ದರೆ ಅರ್ಜಿ ಸಲ್ಲಿಸಲಿ, ಆ ಮೇಲೆ ಕೂತು ಮಾತನಾಡೋಣ - ಹೀಗೆಂದು ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ವಲಸೆ ಬಂದ ಸಚವರನ್ನು ಉದ್ದೇಶಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಶುಕ್ರವಾತ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಬರಲು ಇಷ್ಟಪಡುವವರು ಬಹಳಷ್ಟು ಜನ ಇದ್ದಾರೆ. ಅವರ ಹೆಸರು ಹೇಳುವುದಿಲ್ಲ ಎಂದರು. 

ಸಿಎಂ ಕೂಗು ನಿಲ್ಲಿಸಿ: ಡಿಕೆಶಿ, ಸಿದ್ದುಗೆ ರಾಹುಲ್‌ ವಾರ್ನಿಂಗ್!

ನಾನು ಬಹಳ ಹಿಂದೆಯೇ ಈ ಬಗ್ಗೆ ಜು. 26 ರಂದು ಮಾತನಾಡುವ ಎಂದು ಹೇಳಿದ್ದೆ. ಬಿಜೆಪಿಗೆ ಈ ರಾಜ್ಯದಲ್ಲಿ ಒಳ್ಳೆ ಸರ್ಕಾರ ಕೊಡುವುದಕ್ಕೆ ಆಗುವುದಿಲ್ಲ ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿದ್ದಾರೆ. ಡಬಲ್ ಎಂಜಿ ಸರ್ಕಾರ ಇದ್ದರೂ ಒಳ್ಳೆಯ ಆಡಳಿತ ನೀಡಲು ಆಗಿಲ್ಲ. 

ಈ ಸರ್ಕಾರಕ್ಕೆ ಗೌರವ ಎಲ್ಲಿದೆ ಎಂದು ಅವರು ಪ್ರಶ್ನಿಸಿದರು. ಬಿಜೆಪಿಯಲ್ಲಿ ಎಷ್ಟೇ ಮುಖ್ಯಮಂತ್ರಿ ಬದಲಾವಣೆ ಆದರೂ ಅವರ ಪಕ್ಷದ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು. 

Follow Us:
Download App:
  • android
  • ios