ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ರಾಹುಲ್ ಗಾಂಧಿ ಕೈ ಹಿಡಿಯುತ್ತಿರುವ ಹುಡುಗಿ ಇವರಂತೆ? ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಫೋಟೋ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮದುವೆ ಆಗ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ರಾಹುಲ್ ಗಾಂಧಿ ಕೈ ಹಿಡಿಯಲಿರುವ ಹುಡುಗಿ ಯಾರು ಎನ್ನುವ ಪ್ರಶ್ನೆ ಕಾಡೋದು ಸಾಮಾನ್ಯ. ಅದಕ್ಕೆ ಉತ್ತರ ಇಲ್ಲಿದೆ.
ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ರಾಹುಲ್ ಗಾಂಧಿ (Most Eligible Bachelor Rahul Gandhi), ಮದುವೆ ಆಗ್ತಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದೆ. ಕಾಂಗ್ರೆಸ್ ಸಂಸದ (Congress MP) ಹಾಗೂ ಲೋಕಸಭೆ (Lok Sabha) ಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 54 ವರ್ಷದಲ್ಲಿ ಮದುವೆ (Marriage)ಗೆ ಸಿದ್ಧವಾಗ್ತಿದ್ದಾರೆ. ರಾಹುಲ್ ಗಾಂಧಿ ಶೀಘ್ರದಲ್ಲೇ ವಿವಾಹ ಬಂಧನದಲ್ಲಿ ಬಂಧಿಯಾಗಲಿದ್ದಾರೆ ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ರಾಹುಲ್ ಗಾಂಧಿ ಮದುವೆಯಾಗ್ತಿದ್ದು, ಅವರ ಕೈ ಹಿಡಿಯಲಿರುವ ಹುಡುಗಿ ಯಾರು ಎನ್ನುವ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ.
ಈ ವರ್ಷದ ಕೊನೆಯಲ್ಲಿ ರಾಹುಲ್ ಮದುವೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಗಾಂಧಿ ಕುಟುಂಬದಲ್ಲಿ ಸಿದ್ಧತೆ ಆರಂಭವಾಗಿದೆಯಂತೆ. ತಾಯಿ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿಯವರನ್ನು ಮದುವೆಯಾಗಲು ಒಪ್ಪಿಸಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿ ಕೈ ಹಿಡಿಯಲಿರುವ ಹುಡುಗಿ ಯಾರು? : ರಾಹುಲ್ ಗಾಂಧಿಗೆ ಅಭಿಮಾನಿಗಳ ಸಂಖ್ಯೆ ಕಡಿಮೆ ಏನಿಲ್ಲ. ಅನೇಕ ಹುಡುಗಿಯರು ಭಾರತದ ಬ್ಯೂಟಿಫುಲ್ ಬ್ಯಾಚ್ಯುಲರ್ ಮದುವೆಯಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಈಗ ಆ ಅದೃಷ್ಟ ಯಾರಿಗೆ ಒಲಿದಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಡಿರುವ ವರದಿ ನಂಬೋದಾದ್ರೆ, ರಾಹುಲ್ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕರ ಮಗಳನ್ನು ಮದುವೆಯಾಗಲಿದ್ದಾರೆ. ಈ ನಾಯಕ ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ ಇಡೀ ದೇಶಕ್ಕೆ ಚಿರಪರಿಚಿತರು. ಮನಮೋಹನ್ ಸಿಂಗ್ (Manmohan Singh) ನೇತೃತ್ವದ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂಧೆ (Sushil Kumar Shinde) ಮಗಳು ಪ್ರಣಿತಿ ಶಿಂಧೆ ಅವರನ್ನು ರಾಹುಲ್ ಗಾಂಧಿ ಮದುವೆ ಆಗಲಿದ್ದಾರೆ ಎನ್ನಲಾಗಿದೆ.
ಸಿಎಂ ಕುರ್ಚಿಗೆ ಡಿಕೆಶಿ ಸ್ಟಿಕ್ಕರ್ ಅಂಟಿಸಿದ್ದಾರೆ: ಅಶೋಕ್
ಪ್ರಣಿತಿ ಶಿಂಧೆ (Pranithi Shinde) ಯಾರು? : ಪ್ರಣಿತಿ ಶಿಂಧೆ ಸೋಲಾಪುರ ಸಿಟಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿದ್ದು, ಮೊದಲ ಬಾರಿಗೆ ಸಂಸದರಾಗಿದ್ದಾರೆ. 2009ರಲ್ಲಿ ಪ್ರಣಿತಿ ಮೊದಲ ಬಾರಿಗೆ ಶಾಸಕಿಯಾದರು. ಅವರ ತಂದೆ ಸುಶೀಲ್ ಶಿಂಧೆ ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಸದ್ಯ ಕಾಂಗ್ರೆಸ್ ಸಂಸದೆಯಾಗಿರುವ ಕಾರಣಕ್ಕೆ ರಾಹುಲ್ ಹೆಸರು ತಳಕು ಹಾಕುತ್ತಿದೆ. ಮುಂಬೈನ ಪ್ರಸಿದ್ಧ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ರಾಜಕೀಯ ಜೀವನದ ಆರಂಭದಲ್ಲಿ, ಅವರು 2009 ರಿಂದ 2024 ರವರೆಗೆ ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರಾಗಿದ್ದರು. ಇದರ ನಂತರ, ಅವರು ಪ್ರಸ್ತುತ ಲೋಕಸಭಾ ಸಂಸದರಾಗಿದ್ದಾರೆ.
ಪ್ರಣಿತಿ ಶಿಂಧೆ ಅವರು ರಾಹುಲ್ ಗಾಂಧಿ ಅವರೊಂದಿಗೆ ಮೊದಲ ಬಾರಿಗೆ ಕಾಣಿಸಿಕೊಂಡಾಗಲೇ ಈ ಬಗ್ಗೆ ಚರ್ಚೆ ಶುರುವಾಗಿತ್ತು. ಭಾರತ್ ಜೋಡೋ ಪ್ರವಾಸಕ್ಕೆ ಸಂಬಂಧಿಸಿದಂತೆ ರಾಹುಲ್ ಮಹಾರಾಷ್ಟ್ರಕ್ಕೆ ಬಂದಿದ್ದಾಗ ಇಬ್ಬರ ಮೊದಲ ಭೇಟಿಯಾಗಿತ್ತು. ಆ ವೇಳೆ ಅಮರಾವತಿ ವಲಯದ ಜವಾಬ್ದಾರಿಯನ್ನು ಕಾಂಗ್ರೆಸ್ ಪ್ರಣಿತಿ ಅವರಿಗೆ ವಹಿಸಿತ್ತು. ಆ ಸಮಯದಲ್ಲಿ ರಾಹುಲ್ ಗಾಂಧಿ ಪ್ರಣಿತಿ ಶಿಂಧೆ ಅವರೊಂದಿಗೆ ಕೈ ಕೈ ಹಿಡಿದುಕೊಂಡು ನಡೆದಾಡುತ್ತಿದ್ದರು. ರಾಹುಲ್ ಗಾಂಧಿಯವರ ಅದೇ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಬಳಕೆದಾರರು ರಾಹುಲ್ ಗಾಂಧಿ ಮತ್ತು ಪ್ರಣಿತಿ ಶಿಂಧೆ ಮದುವೆಯಾಗಲಿದ್ದಾರೆ ಎನ್ನುತ್ತಿದ್ದಾರೆ.
ಅಶೋಕ್ ಬಿಜೆಪಿಯ ಜಗಳ ನೋಡಿಕೊಳ್ಳಲಿ: ಸಚಿವ ಪರಮೇಶ್ವರ್ ಕಿಡಿ
ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಜಮ್ಮು-ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ತಮ್ಮ ಮದುವೆಯ ಬಗ್ಗೆ ಚರ್ಚೆ ನಡೆಸಿದ್ದರು. ಕೆಲವು ಕಾಶ್ಮೀರಿ ಹುಡುಗಿಯರೊಂದಿಗೆ ಮಾತನಾಡಿದ್ದ ಅವರು, ನಾನು 20-30 ವರ್ಷಗಳ ಹಿಂದೆಯೇ ಮದುವೆಯ ಒತ್ತಡದಿಂದ ಹೊರಬಂದಿದ್ದೇನೆ ಎಂದಿದ್ದರು. ನೀವು ಮದುವೆ ಪ್ಲಾನ್ ಮಾಡಿದ್ದರೆ ಖಂಡಿತವಾಗಿಯೂ ನಮ್ಮನ್ನು ಆಹ್ವಾನಿಸಬೇಕು ಎಂದು ಹುಡುಗಿಯರು ರಾಹುಲ್ ಮುಂದೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ರಾಹುಲ್ ಒಪ್ಪಿದ್ದರು. ಈಗ ರಾಹುಲ್ ಮದುವೆ ಆಗ್ತಿದ್ದಾರೆ ಎಂಬ ಚರ್ಚೆ ಇದೆ. ಆದ್ರೆ ರಾಹುಲ್ ಗಾಂಧಿಯಾಗ್ಲಿ, ಅವರ ಕುಟುಂಬವಾಗ್ಲಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.