Asianet Suvarna News Asianet Suvarna News

ರಾಹುಲ್ ಗಾಂಧಿ ಯಾರು ರೈತನ ಮಗನಾ?: ಡಿಕೆಶಿ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಓರ್ವ ಮುಖ್ಯಮಂತ್ರಿಯನ್ನ ಚಪ್ರಾಸಿ ತರ ನಡೆಸಿಕೊಂಡಿರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಕಿಡಿಕಾರಿದರು.

Who is Rahul Gandhi a farmer's son?: HDK's attack on DK at chikkamgaluru rav
Author
First Published Mar 2, 2023, 7:10 AM IST | Last Updated Mar 2, 2023, 7:10 AM IST

ಚಿಕ್ಕಮಗಳೂರು (ಮಾ.2) : ಓರ್ವ ಮುಖ್ಯಮಂತ್ರಿಯನ್ನ ಚಪ್ರಾಸಿ ತರ ನಡೆಸಿಕೊಂಡಿರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಕಿಡಿಕಾರಿದರು.

ಮೂಡಿಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈಗ ಅವರು ಯಾರ ಪೂಜೆ ಮಾಡುತ್ತಿದ್ದಾರೆ, ರಾಹುಲ್‌ ಗಾಂಧಿ(Rahul gandhi) ಅವರು ರೈತನ ಮಗನಾ ಎಂದು ಪ್ರಶ್ನಿಸಿದರು. ರೈತರ(Farmer) ಮಕ್ಕಳಿಗೆ ಇಡಿ ನೋಟಿಸ್‌ ಕೊಟ್ಟಿರುವುದನ್ನ ಎಲ್ಲಾದರೂ ನೋಡಿದ್ದೀರಾ ಎಂದ ಅವರು, ಜೆಡಿಎಸ್‌ ಬಗ್ಗೆ ಲಘುವಾಗಿ ಮಾತನಾಡಿದರೆ 79 ಸ್ಥಾನದಿಂದ, 29ಕ್ಕೆ ಬರುತ್ತೀರಾ ಎಂದು ಎಚ್ಚರಿಕೆ ನೀಡಿದರು.

ಶಿವಮೊಗ್ಗ: ಮೆಗ್ಗಾನ್‌ನಲ್ಲಿ ಮಗು​ವಿಗೆ Cochlear Implant ಶಸ್ತ್ರಚಿಕಿತ್ಸೆ

ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಇನ್ನೂ ದುಡ್ಡು ಹೊಡೆಯಲು ಬಿಡಬೇಕಿತ್ತಾ, ನನ್ನನ್ನು ಯಾವ ರೀತಿ ನಡೆಸಿಕೊಂಡರು ಎಂಬುದು ಗೊತ್ತಿದೆ ಎಂದರು.

ನೀರಾವರಿ ಸಚಿವನಾಗಿ ಏನೇನು ನಡೆಸಿದ್ದೀಯಾ ಗೊತ್ತಿದೆ ಕಣಪ್ಪಾ ನಿನ್ನ ಬಂಡವಾಳ. ನಾನು ಮಧ್ಯ ಪ್ರವೇಶ ಮಾಡಿರಲಿಲ್ಲ ಎಂದು ಡಿಕೆಶಿ(DK Shivakumar) ವಿರುದ್ಧ ವಾಗ್ದಾಳಿ ನಡೆಸಿದರು. ನಿಮಗೆ ಎಷ್ಟುಸ್ವತಂತ್ರ ಕೊಟ್ಟಿದ್ದೆ, ಆದರೂ ನೀವು ಯಾವ ರೀತಿ ನಡೆಸಿಕೊಂಡಿರಿ, ಓರ್ವ ಸಿಎಂರನ್ನು ಚಪ್ರಾಸಿ ತರಹ ನೋಡಿದ್ದಿರೀ, ನನ್ನ ಬಗ್ಗೆ ಲಘುವಾಗಿ ಮಾತನಾಡುತ್ತೀರಾ ಎಂದರು.

ನಾವೇನು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವಾ, ಹುಡುಕಿಕೊಂಡು ಬಂದವರು ನೀವು, ಸಿಎಂ ಸ್ಥಾನ ಕೊಡ್ತೀವಿ ಬನ್ನಿ ಅಂತ, ಬೇಡ ಯಾರನ್ನಾದ್ರು ಮಾಡಿಕೊಳ್ಳಿ ಅಂತ ಹೇಳಿದ್ದೆವು ಅಲ್ವಾ, ಮಲ್ಲಿಕಾರ್ಜುನ ಖರ್ಗೆ(Mallikarjun kharge)ಯನ್ನು ಮಾಡಿಕೊಳ್ಳಿ ಎಂದು ಹೇಳಿಲ್ವಾ, ಅಂದು ನಾವು ಈ ಮಾತು ಹೇಳಿದಾಗ ಗುಲಾಮ್‌ ನಬೀ ಆಜಾದ್‌, ಸಿದ್ದರಾಮಯ್ಯ, ಪರಮೇಶ್ವರ್‌, ಮಲ್ಲಿಕಾರ್ಜುನ ಖರ್ಗೆ, ಇದ್ರು ಅಲ್ವಾ ಯಾಕೆ ಜೆಡಿಎಸ್‌ ತಲೆಗೆ ಕಟ್ಟಿದ್ರಿ, ಆಮೇಲೆ ಯಾವ ರೀತಿ ನಡೆಸಿಕೊಂಡ್ರಿ ಎಂದರು.

Pancharatna rathayatre:: ಮೂರು ತಿಂಗಳು ತಡೀರಿ ಸೈಕಲ್ ಕೊಡ್ತೇನೆ; ಶಾಲಾ ಮಕ್ಕಳಿಗೆ ಮಾತುಕೊಟ್ಟ ಕುಮಾರಣ್ಣ

ಯಾವುದೇ ಷರತ್ತು ಇಲ್ಲ ಅಂದ್ರಿ, ಇಷ್ಟುಮಂತ್ರಿ ಸ್ಥಾನ ಬೇಕು, ಇದೇ ಇಲಾಖೆಗಳು ಬೇಕೆಂದು ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ್ರಿ. ನಿಮಗೆ ಯಾವ ನೈತಿಕತೆ ಇದೆ ಜೆಡಿಎಸ್‌ ಬಗ್ಗೆ ಚರ್ಚೆ ಮಾಡಲು ಎಂದು ಹೇಳಿದ ಕುಮಾರಸ್ವಾಮಿ, ನಮ್ಮ ಕಾರ್ಯಕರ್ತರಿಗೆ ಒಂದು ನಯಾ ಪೈಸಾ ಕಡಿಮೆಯಾಗಬಾರದೆಂದು ನಮ್ಮ ಮೇಲೆ ಒತ್ತಡ ಹಾಕಿದ್ರಲ್ಲಾ, ಸಿದ್ದರಾಮಯ್ಯ(Siddaramaiah) ಕಮಿಟ್‌ ಆಗಿದ್ದ 4 ಸಾವಿರ ಕೋಟಿ ರುಪಾಯಿ ಸಾಲವನ್ನು ನಮ್ಮ ಸರ್ಕಾರ ತೀರಿಸಬೇಕಾಯಿತು ಎಂದರು.

Latest Videos
Follow Us:
Download App:
  • android
  • ios