Asianet Suvarna News Asianet Suvarna News

ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲ ಬರಗಾಲ ಫಿಕ್ಸ್‌: ಬಿ.ವೈ.ರಾಘವೇಂದ್ರ

ಮಹಿಳೆಯರಿಗೆ ಶೇ.33 ಮೀಸಲಾತಿ, ಯಶಸ್ವಿ ಜಿ20 ಶೃಂಗಸಭೆ ಹಾಗೂ ಚಂದ್ರಯಾನ-3 ಯಶಸ್ವಿಯಾಗಿಸಿದ ವಿಜ್ಞಾನಿಗಳಿಗೆ ಆರ್ಥಿಕ ಬಲವನ್ನು ನೀಡಿದವರು ಪ್ರಧಾನಿ ನರೇಂದ್ರ ಮೋದಿ. ವಿಶ್ವಕರ್ಮ ಯೋಜನೆಯಡಿ ಕೇಂದ್ರ ಸರ್ಕಾರ 18 ಕುಶಲಕರ್ಮಿಗಳಿಗೆ 1 ಲಕ್ಷ ರು.ವರೆಗೆ ಬಡ್ಡಿರಹಿತ ಸಾಲವನ್ನು ವಿತರಿಸಲಾಗಿದೆ. 

Whenever the Congress Government Comes, Drought is Fixed in Karnataka Says BY Raghavendra grg
Author
First Published Sep 27, 2023, 12:32 PM IST

ಹೊಳೆಹೊನ್ನೂರು(ಸೆ.27):  ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲ ಬರಗಾಲ. ಯಾರು ದೇವರನ್ನು ನಂಬುತ್ತಾರೋ ಅಂತಹವರ ಆಡಳಿತದಲ್ಲಿ ಮಳೆ, ಬೆಳೆ ಚೆನ್ನಾಗಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಲ್ಲಿಗೆ ಸಮೀಪದ ಮಾರಶೆಟ್ಟಿಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಬೂತ್ ಸಶಕ್ತೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರಿಗೆ ಶೇ.33 ಮೀಸಲಾತಿ, ಯಶಸ್ವಿ ಜಿ20 ಶೃಂಗಸಭೆ ಹಾಗೂ ಚಂದ್ರಯಾನ-3 ಯಶಸ್ವಿಯಾಗಿಸಿದ ವಿಜ್ಞಾನಿಗಳಿಗೆ ಆರ್ಥಿಕ ಬಲವನ್ನು ನೀಡಿದವರು ಪ್ರಧಾನಿ ನರೇಂದ್ರ ಮೋದಿ. ವಿಶ್ವಕರ್ಮ ಯೋಜನೆಯಡಿ ಕೇಂದ್ರ ಸರ್ಕಾರ 18 ಕುಶಲಕರ್ಮಿಗಳಿಗೆ 1 ಲಕ್ಷ ರು.ವರೆಗೆ ಬಡ್ಡಿರಹಿತ ಸಾಲವನ್ನು ವಿತರಿಸಲಾಗಿದೆ ಎಂದರು.

ಜೆಡಿಎಸ್‌ನ ಒಂದೊಂದೇ ವಿಕೆಟ್‌ ಪತನ: ಕಾಂಗ್ರೆಸ್‌ ಸೇರಲು ಸಜ್ಜಾದ ಮತ್ತೊಬ್ಬ ದಳ ನಾಯಕ..!

ಸನಾತನ ಧರ್ಮದ ಬಗ್ಗೆ ಐಎನ್ ಡಿಐಎ ಮಹಾಘಟಬಂಧನ್ ತನ್ನ ನಿಲುವೇನು ಎಂಬುದು ಸ್ಪಷ್ಟಪಡಿಸಬೇಕಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಎಐಡಿಎಂಕೆ ಪಕ್ಷದ ಜೊತೆ ಸೀಟು ಹಂಚಿಕೆ ವಿಚಾರದಲ್ಲಿ ಮಾತನಾಡುವುದಕ್ಕೆ ಸಮಯವಿದೆ. ಆದರೆ ಕಾವೇರಿ ವಿಚಾರದಲ್ಲಿ ಮಾತುಕತೆ ನಡೆಸಲು ಇವರಿಗೆ ಸಮಯವಿಲ್ಲ. ಇದಕ್ಕೆ ಪ್ರಧಾನಿ ಮೋದಿ ಅವರನ್ನು ಮಧ್ಯಸ್ಥಿಕೆ ವಹಿಸುವಂತೆ ಕೇಳುತ್ತಿರುವುದು ವಿಪರ್ಯಸ ಎಂದರು.

ಇನ್ನೊಂದು ತಿಂಗಳ ನಂತರ ದೆಹಲಿ, ಚೆನ್ನೈ, ತಿರುಪತಿ, ಗೋವಾ ಮಾರ್ಗಗಳಿಗೆ ವಿಮಾನಯಾನ ಪ್ರಾರಂಭವಾಗಲಿದೆ. ನವೆಂಬರ್‌ನಲ್ಲಿ ವಂದೇ ಮಾತರಂ ಎಕ್ಸ್‌ಪ್ರೆಸ್ ರೈಲು ಶಿವಮೊಗ್ಗ ನಗರಕ್ಕೆ ಬರಲಿದೆ. ಕಳೆದ 10 ವರ್ಷಗಳಿಂದ ಜಿಲ್ಲೆ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ ಎಂದರು.

ಜಿಲ್ಲಾಧ್ಯಕ್ಷ ಮೇಘರಾಜ್, ಮುಂದಿನ ಲೋಕಸಭಾ ಚುನಾವಣೆಯಲ್ಲಿನ ರಣಕಹಳೆ ಮೊಳಗಿಸಲು ಈ ದಿನ ಸಭೆಯನ್ನು ಆಯೋಜಿಸಲಾಗಿದೆ. ಈಗಿನ ಸಂಸದರು ಮನೆ ಮಗನಾಗಿ ಕೆಲಸ ಮಾಡಿದ್ದಾರೆ. ಜಿಲ್ಲೆಯ ಸಮಗ್ರ ಚಿತ್ರಣ ಬದಲಾಯಿಸುವಲ್ಲಿ ಸಾಕಷ್ಟು ಶ್ರಮವನ್ನು ವಹಿಸಿದ್ದಾರೆ. ದೇಶದಲ್ಲಿಯೇ ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಯಲ್ಲಿ 2ನೇ ಸ್ಥಾನ ಪಡೆದಿದೆ ಎಂದರು.

ಸೋನಿಯಾ ಗಾಂಧಿ, ಸ್ಟಾಲಿನ್ ಮುಂದೆ ದೊಡ್ಮನುಷ್ಯನಾಗಲು ಡಿಕೆಶಿ ನೀರು ಬಿಟ್ಟಿದ್ದಾನೆ: ಈಶ್ವರಪ್ಪ ವಾಗ್ದಾಳಿ

ಕಾಂಗ್ರೆಸ್‌ನಲ್ಲಿ ಯಾವಾಗಲೂ ನಾಯಕರು ಮಾತನಾಡುತ್ತಾರೆ. ನಮ್ಮಲ್ಲಿ ನಾವು ಮಾಡಿದ ಅಭಿವೃದ್ಧಿ ಕೆಲಸಗಳು ಮಾತನಾಡುತ್ತವೆ. ಬಿಟ್ಟಿ ಭಾಗ್ಯಗಳಿಂದಾಗಿ ರಾಜ್ಯದ ಬೊಕ್ಕಸಕ್ಕೆ ನಷ್ಟವೇ ಹೊರತು, ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಸಂಘಟನಾತ್ಮಕ, ಆಡಳಿತ್ಮಾಕವಾಗಿ ಬಿಜೆಪಿಗೆ ಒಂದು ಶಕ್ತಿಯಾಗಿ ಸಂಸದರು ಕಾರ್ಯನಿರ್ವಹಿಸಿದ್ದಾರೆ ಎಂದರು.

ಸಮಾರಂಭದಲ್ಲಿ ಮಾಜಿ ಶಾಸಕ ಕೆ.ಬಿ. ಅಶೋಕ ನಾಯ್ಕ, ಬಿಜೆಪಿ ಮಂಡಲ ಅಧ್ಯಕ್ಷ ಕಲ್ಲಜ್ಜನಾಳ್ ಮಂಜುನಾಥ, ಉಪಾಧ್ಯಕ್ಷ ಸುಬ್ರಮಣಿ, ಎಪಿಎಂಸಿ ಸದಸ್ಯ ಶ್ರೀನಿವಾಸ್, ರಾಜೇಶ್ ಪಟೇಲ್, ಸದಾಶಿವಪ್ಪ ಗೌಡ, ಎ.ಕೆ. ಮಹಾದೇವಪ್ಪ, ಮಲ್ಲೇಶಪ್ಪ, ಶಾಂತಮ್ಮ, ರುದ್ರೋಜಿರಾವ್, ಮಾಲತೇಶ್ ಇನ್ನಿತರರಿದ್ದರು.

Follow Us:
Download App:
  • android
  • ios